ಅಳಿಯನ ಗೆಲುವಿಗಾಗಿ ಪ್ರತಿಷ್ಠೆ ಪಣಕ್ಕಿಟ್ಟಿರುವ ಖರ್ಗೆ: ಯಾರಿಗೆ ಒಲಿಯಲಿದೆ ಕಲಬುರಗಿ ಲೋಕಸಭಾ ಕ್ಷೇತ್ರ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾಗಿರುವುದರಿಂದ ಕಲಬುರಗಿ ಲೋಕಸಭೆ ಕ್ಷೇತ್ರ ಭಾರೀ ಮಹತ್ವ ಪಡೆದುಕೊಂಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾಗಿರುವುದರಿಂದ ಕಲಬುರಗಿ ಲೋಕಸಭೆ ಕ್ಷೇತ್ರ ಭಾರೀ ಮಹತ್ವ ಪಡೆದುಕೊಂಡಿದೆ. ಕಳೆದ ಬಾರಿ ಸೋಲು ಕಂಡಿದ್ದ ಕಾಂಗ್ರೆಸ್ ಈ ಬಾರಿ ಗೆಲ್ಲುವ ತಯಾರಿ ನಡೆಸಿದೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕೆ ಇಳಿಸಿದ್ದಾರೆ. ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಡಾ.ಉಮೇಶ ಜಾಧವ್‌ ಅವರು ಎರಡನೇ ಬಾರಿಗೆ ಪುನಾರಾಯ್ಕೆಯಾಗಲು ಕಸರತ್ತು ಮುಂದುವರೆಸಿದ್ದಾರೆ.

ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ರಾಜಕಾರಣವೇನು ಹೊಸದಲ್ಲ, ಈ ಹಿಂದೆ ಖರ್ಗೆ ಅವರ ರಾಜಕೀಯ ಬದುಕಿಗೆ ಬೆನ್ನೆಲುಬಾಗಿ ಪರದೆಯ ಹಿಂದೆ ನಿಂತು ತಂತ್ರಗಾರಿಕೆ ರೂಪಿಸಿದ್ದ ರಾಧಾಕೃಷ್ಣ ಅವರು ಇದೇ ಮೊದಲ ಬಾರಿ ನೇರವಾಗಿ ರಾಜಕೀಯ ಅಖಾಡಕ್ಕೆ ಇಳಿದಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ಈ ಎಸ್‌ಸಿ-ಮೀಸಲಾತಿ ಸ್ಥಾನವನ್ನು ಗೆಲ್ಲಲು ಅವರು ತಮ್ಮ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಆಘಾತಕಾರಿ ಸೋಲು ಅವರ ಸೋಲಿಲ್ಲದ ಸರದಾರ (ಸೋಲಿನ ರುಚಿ ನೋಡದ) ಎಂಬ ಬಿರುದನ್ನು ಕೆಡಿಸಿತು. ಕಲಬುರಗಿ ಕ್ಷೇತ್ರ ಖರ್ಗೆ ಅವರ ಕರ್ಮ ಭೂಮಿಯಾಗಿದ್ದು 10 ಬಾರಿ ವಿಧಾನಸಭೆಗೆ ಮತ್ತು ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಸಾಂದರ್ಭಿಕ ಚಿತ್ರ
ಹೆಸರಿಗಷ್ಟೇ ರಾಧಾಕೃಷ್ಣ ದೊಡ್ಮನಿ ಅಭ್ಯರ್ಥಿ; ಖರ್ಗೆ ಮತ್ತು ನನ್ನ ನಡುವೆ ಹೋರಾಟ: ಡಾ. ಉಮೇಶ್ ಜಾಧವ್

ದೊಡ್ಡಮನಿ ಅವರು ರಾಧಾಬಾಯಿ ಖರ್ಗೆ ಅವರ ಕಿರಿಯ ಸಹೋದರ. ಹಿಂದಿಯಲ್ಲಿ ಸಾರಿ ದುನಿಯಾ ಏಕ್ ತರಫ್, ಜೋರು ಕಾ ಭಾಯಿ ಏಕ್ ತರಫ್ (ಇಡೀ ಜಗತ್ತು ಒಂದೆಡೆ, ಹೆಂಡತಿಯ ಸಹೋದರ ಇನ್ನೊಂದೆಡೆ) ಎಂಬ ಜನಪ್ರಿಯ ಮಾತಿಗೆ ಅನುಗುಣವಾಗಿ ಖರ್ಗೆ ಅವರು ಕಳೆದ ಒಂದು ತಿಂಗಳಲ್ಲಿ ಕಲಬುರಗಿಯಲ್ಲಿ ಎರಡು ಬಾರಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಏಪ್ರಿಲ್ 24 ರಂದು ಮತ್ತೊಮ್ಮೆ ಭೇಟಿ ನೀಡುತ್ತಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಮಗ ಪ್ರಿಯಾಂಕ್ ಖರ್ಗೆ ಡಾ. ಶರಣಪ್ರಕಾಶ ಪಾಟೀಲ್ ಅವರು ಗೆಲುವಿಗಾಗಿ ಬೇಸಿಗೆಯ ಬಿರುಬಿಸಿಲಿನಲ್ಲೂ ಬೆವರು ಹರಿಸುತ್ತಿದ್ದಾರೆ.

ದೊಡ್ಡಮನಿ ಅವರ ಚುನಾವಣಾ ಪ್ರಚಾರವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಯೋಜಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಮತ್ತು 371-ಜೆ ಕಲಂಗೆ ತಿದ್ದುಪಡಿ ಮಾಡಿದ ಕ್ರೆಡಿಟ್ ತಮ್ಮ ಪಕ್ಷಕ್ಕೆ ಸಲ್ಲಬೇಕು ಎಂದು ಹೇಳಿಕೊಳ್ಳುತ್ತಿದೆ. ಪ್ರಿಯಾಂಕ್ ಮತ್ತು ಶರಣಪ್ರಕಾಶ್ ವಿವಿಧ ಕಾರ್ಮಿಕ ವರ್ಗಗಳನ್ನು ಪ್ರತ್ಯೇಕವಾಗಿ ಭೇಟಿಯಾಗುತ್ತಿದ್ದಾರೆ. ಅಲ್ಲದೆ, ದೊಡ್ಡಮನಿ ಅವರ ಮೃದು ಧೋರಣೆಯಿಂದಾಗಿ ಜನರು ಅವರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಖರ್ಗೆ ಅವರು ವಿಧಾನಸಭೆ ಮತ್ತು ಸಂಸತ್ ಚುನಾವಣೆಗಳನ್ನು ಗೆಲ್ಲಲು ಬಳಸಿದ ತಂತ್ರಗಳನ್ನು ಬಳಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ
ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದು ಯಾಕೆ ಗೊತ್ತಾ?

ಆದರೆ 2019 ರಲ್ಲಿ ಖರ್ಗೆ ಅವರನ್ನು ಸೋಲಿಸಿದ ಹಾಲಿ ಸಂಸದ ಉಮೇಶ್ ಜಾಧವ್ ಅವರನ್ನು ಗುಲ್ಬರ್ಗಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಕೂಡ ಎಲ್ಲಾ ತಂತ್ರಗಳನ್ನು ಮಾಡುತ್ತಿದೆ. ಕಲಬುರಗಿಯಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 16 ರಂದು ಕರ್ನಾಟಕದಲ್ಲಿ ಕೇಸರಿ ಪಕ್ಷದ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು.

ಆದಾಗ್ಯೂ, ಜಾಧವ್ ಆಡಳಿತ ವಿರೋಧಿತನವನ್ನು ಹೊರಹಾಕಬೇಕಾಗಿದೆ. ಕಲಬುರಗಿಗೆ ಯೋಜನೆಗಳನ್ನು ತರಲು ಸಾಧ್ಯವಾಗದ ಅವರ ವಿರುದ್ಧದ ಮನಸ್ಥಿತಿಯನ್ನು ಗ್ರಹಿಸಿದ ಪ್ರಧಾನಿ ಮೋದಿ, ಕಳೆದ ವರ್ಷ ಜಿಲ್ಲೆಯಲ್ಲಿ ಮೆಗಾ ಜವಳಿ ಪಾರ್ಕ್ ಮತ್ತು ಇತ್ತೀಚೆಗೆ ಬೆಂಗಳೂರು ಮತ್ತು ಕಲಬುರಗಿ ನಡುವೆ ಎರಡು ನೇರ ರೈಲುಗಳನ್ನು ಪ್ರಾರಂಭಿಸಿದರು. ತಮ್ಮ ಹಳ್ಳಿಗಳ ಪ್ರವಾಸದ ವೇಳೆ ಉಮೇಶ್ ಜಾಧವ್ ಮೋದಿಯವರ ಸಾಧನೆಗಳಿಗಾಗಿ ಮತ ಯಾಚಿಸುತ್ತಿದ್ದಾರೆ. ಗುಲ್ಬರ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್ ಶಾಸಕರೇ ಪ್ರತಿನಿಧಿಸುತ್ತಿದ್ದಾರೆ. ತಲಾ ಒಂದೊಂದು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com