ಪಿತ್ರಾರ್ಜಿತ ಆಸ್ತಿ ಕುರಿತು Sam Pitroda ಹೇಳಿಕೆ; ಅಂತರ ಕಾಯ್ದುಕೊಂಡ ಡಿಕೆಶಿ, ಪ್ರಣಾಳಿಕೆ ಓದಿ ಎಂದ ಖರ್ಗೆ!

ಪಿತ್ರಾರ್ಜಿತ ಆಸ್ತಿ ತೆರಿಗೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಕಟವರ್ತಿ ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯಿಂದ ಕರ್ನಾಟಕ ಕಾಂಗ್ರೆಸ್ ಘಟಕದ ಮುಖ್ಯಸ್ಥ ಡಿಕೆ ಶಿವಕುಮಾರ್ ಅಂತರ ಕಾಯ್ದುಕೊಂಡಿದ್ದಾರೆ.
ಸ್ಯಾಮ್ ಪಿತ್ರೋಡಾ ಮತ್ತು ಡಿಕೆ ಶಿವಕುಮಾರ್
ಸ್ಯಾಮ್ ಪಿತ್ರೋಡಾ ಮತ್ತು ಡಿಕೆ ಶಿವಕುಮಾರ್

ಬೆಂಗಳೂರು: ಪಿತ್ರಾರ್ಜಿತ ಆಸ್ತಿ ತೆರಿಗೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಕಟವರ್ತಿ ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯಿಂದ ಕರ್ನಾಟಕ ಕಾಂಗ್ರೆಸ್ ಘಟಕದ ಮುಖ್ಯಸ್ಥ ಡಿಕೆ ಶಿವಕುಮಾರ್ ಅಂತರ ಕಾಯ್ದುಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, 'ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ನಿರ್ಧಾರವಲ್ಲ. ಯಾರೂ ಅದನ್ನು ಚರ್ಚಿಸಿಲ್ಲ ಮತ್ತು ಯಾವುದೇ ಸಮಯದಲ್ಲಿ, ಭಾರತಕ್ಕೆ ಸಂಬಂಧಿಸಿದಂತೆ, ಭಾರತದಲ್ಲಿ ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಆ ಮೂಲಕ ಪಿತ್ರೋಡಾ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ.. ಅದು ಅವರ ವೈಯುಕ್ತಿಕ ಹೇಳಿಕೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸ್ಯಾಮ್ ಪಿತ್ರೋಡಾ ಮತ್ತು ಡಿಕೆ ಶಿವಕುಮಾರ್
ಪಿತ್ರಾರ್ಜಿತ ಆಸ್ತಿ ತೆರಿಗೆ ಪ್ರಸ್ತಾಪಿಸಿದ ಸ್ಯಾಮ್ ಪಿತ್ರೋಡಾ: ಬಿಜೆಪಿ ಕೆಂಡಾಮಂಡಲ; ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್!

ಇನ್ನು ಸ್ಯಾಮ್ ಪಿತ್ರೋಡಾ ಹೇಳಿಕೆ ಬಿಜೆಪಿ ನಾಯಕರ ವ್ಯಾಪಕ ವಾಗ್ದಾಳಿಗೆ ಕಾರಣವಾಗಿದ್ದು, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ' ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ (Congress Govt) ಅಧಿಕಾರಕ್ಕೆ ಬಂದರೆ, ನಿಮ್ಮಲ್ಲಿ ಎಷ್ಟು ಆಸ್ತಿ ಇದೆ, ಎಷ್ಟು ಮನೆಗಳಿವೆ ಎಂದು ವಿಚಾರಿಸಿ ಅವುಗಳಲ್ಲಿ ಒಂದನ್ನು ಕಾಂಗ್ರೆಸ್‌ ತೆಗೆದುಕೊಂಡು ಕಬಳಿಸುತ್ತದೆ,

ಮಾತೆಯರ ಮಾಂಗಲ್ಯದ ಮೇಲೂ ಕಾಂಗ್ರೆಸ್‌ ಕಣ್ಣಿಟ್ಟಿದ್ದು, ಅಧಿಕಾರಕ್ಕೆ ಬಂದರೆ ಅದನ್ನು ಮುಸ್ಲಿಮರಿಗೆ ನೀಡುತ್ತಾರೆ' ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕಿಡಿಕಾರಿದ್ದಾರೆ.

ಪ್ರಣಾಳಿಕೆ ಓದಿ ಎಂದ ಖರ್ಗೆ

ಇನ್ನು ಅತ್ತ ಪಿತ್ರೋಡಾ ಹೇಳಿಕೆ ಸಂಬಂಧ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೊದಲು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಪೂರ್ತಿಯಾಗಿ ಓದಿ ಎಂದು ಟಾಂಗ್ ನೀಡಿದ್ದಾರೆ.

ಸ್ಯಾಮ್ ಪಿತ್ರೋಡಾ ಮತ್ತು ಡಿಕೆ ಶಿವಕುಮಾರ್
ಲೋಕಸಭೆ ಚುನಾವಣೆಗೂ ಮುನ್ನ EVM ಸರಿಪಡಿಸದಿದ್ದರೆ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು: ಸ್ಯಾಮ್ ಪಿತ್ರೋಡಾ

ಏನು ಹೇಳಿದ್ದರು ಸ್ಯಾಮ್ ಪಿತ್ರೋಡಾ?

ಸ್ಯಾಮ್ ಪಿತ್ರೋಡಾ (Sam Pitroda) ಅವರು ಸಾರ್ವಜನಿಕರಿಗೆ ಆಸ್ತಿ ಹಂಚುವ (Redistribution of wealth) ವಿಷಯವನ್ನು ಒಂದು ರೀತಿಯಲ್ಲಿ ಸಮರ್ಥಿಸಿಕೊಂಡಿದ್ದರು. ಸ್ಯಾಮ್ ಪಿತ್ರೋಡಾ ಅವರು ಅಮೆರಿಕದ ಉದಾಹರಣೆಯನ್ನು ನೀಡಿದ್ದು, ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ (Inheritance Tax) ಇದೆ. ಅಮೆರಿಕದಲ್ಲಿ ಯಾರಾದರೂ 100 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಹೊಂದಿದ್ದು ಅವರು ಸತ್ತರೆ, ಅವರು ತಮ್ಮ ಮಕ್ಕಳಿಗೆ ಕೇವಲ 45%ನಷ್ಟು ಆಸ್ತಿಯನ್ನು ನೀಡಬಹುದು. ಉಳಿದ ಶೇ.55ರಷ್ಟು ಆಸ್ತಿಯನ್ನು ಸರಕಾರ ತೆಗೆದುಕೊಳ್ಳುತ್ತದೆ. ನಂತರ ಬಡವರಿಗೆ ಹಂಚುತ್ತದೆ. ಇದೊಂದು ಆಸಕ್ತಿದಾಯಕ ಕಾನೂನು ಎಂದು ಕರೆದಿದ್ದರು.

‘ಭಾರತದಲ್ಲಿ ಯಾರಾದರೂ 10 ಶತಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೆ, ಮರಣದ ನಂತರ ಅವರು ಸಂಪೂರ್ಣ ಆಸ್ತಿಯನ್ನು ತಮ್ಮ ಮಕ್ಕಳಿಗೆ ಬಿಟ್ಟುಕೊಡುತ್ತಾರೆ. ಮತ್ತು ಸಾರ್ವಜನಿಕರು, ಬಡವರು ಅದರಿಂದ ಏನನ್ನೂ ಪಡೆಯುವುದಿಲ್ಲ. ಆದರೆ ಅಮೆರಿಕಾದ ಕಾನೂನು ನಿಮ್ಮ ಪೀಳಿಗೆಯಲ್ಲಿ ನೀವು ಸಂಪತ್ತನ್ನು ಸೃಷ್ಟಿಸಿದ್ದೀರಿ ಮತ್ತು ಈಗ ನೀವು ಹೊರಡುತ್ತಿದ್ದೀರಿ ಎಂದು ಹೇಳುತ್ತದೆ, ನೀವು ಸತ್ತ ಮೇಲೆ ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗೆ ಬಿಡಬೇಕು, ಎಲ್ಲವೂ ಅಲ್ಲ, ಆದರೆ ಅದರ ಅರ್ಧದಷ್ಟು ಮಾತ್ರ. ಇದು ಸೂಕ್ತವೆಂದು ನಾನು ಭಾವಿಸುತ್ತೇನೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ನಾವು ಸಂಪತ್ತಿನ ಮರುಹಂಚಿಕೆ ಬಗ್ಗೆ ಮಾತನಾಡುವಾಗ, ನಾವು ಹೊಸ ನೀತಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿರುವ ಸ್ಯಾಮ್ ಪಿತ್ರೋಡಾ, ಇವುಗಳು ಜನರು ಚರ್ಚಿಸಬೇಕಾದ ವಿಷಯಗಳಾಗಿವೆ. ಎಂಡ್ ಆಫ್ ದಿ ಡೇ ತೀರ್ಮಾನ ಏನೆಂದು ನನಗೆ ತಿಳಿದಿಲ್ಲ ಆದರೆ ಸಂಪತ್ತಿನ ಮರುಹಂಚಿಕೆ ಬಗ್ಗೆ ಮಾತನಾಡುವಾಗ ನಾವು ಹೊಸ ನೀತಿಗಳು ಮತ್ತು ಹೊಸ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತೇವೆ. ಅದು ಬಡ ಜನರ ಹಿತಾಸಕ್ತಿಗಾಗಿ, ಶ್ರೀಮಂತರ ಹಿತಾಸಕ್ತಿಗೆ ಅಲ್ಲ ಎಂದು ಪಿತ್ರೋಡಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com