ಸಿದ್ದರಾಮಯ್ಯ ಚಡ್ಡಿ ಕಪ್ಪಾಗಿದೆ: ಕುಮಾರಸ್ವಾಮಿ ತಿರುಗೇಟು

ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಪಾದಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ನೀವು ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಅಲ್ಲ, ನೀವು ಆರುವರೆ ಕೋಟಿ ಜನರನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಎಂದರು.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
Updated on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ನನ್ನ ಬದುಕಿನಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯನವರು ಚಡ್ಡಿಯೆಲ್ಲ ಕಪ್ಪು ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಶನಿವಾರ ವಾಗ್ದಾಳಿ ನಡೆಸಿದರು.

ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಪಾದಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ನೀವು ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಅಲ್ಲ, ನೀವು ಆರುವರೆ ಕೋಟಿ ಜನರನ್ನು ಪ್ರತಿನಿಧಿಸುವ ಮುಖ್ಯಮಂತ್ರಿ. ಆರುವರೆ ಕೋಟಿಯ ಜನರ ರಕ್ಷಣೆ ಮಾಡುವ ಜವಾಬ್ದಾರಿ ನಿಮ್ಮದು. ಕಪ್ಪು ಚುಕ್ಕೆ ಇಲ್ಲ ಕಪ್ಪು ಚುಕ್ಕೆ ಇಲ್ಲ ಅಂತಾರೆ. ಆದರೆ ಚಡ್ಡಿಯೆಲ್ಲ ಕಪ್ಪು ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾನೂನು ಬಾಹಿರವಾಗಿ ಸೈಟ್​ ಪಡೆದ ಬಗ್ಗೆ ನಾವು ಪ್ರಶ್ನೆ ಮಾಡ್ತಿದ್ದೇವೆ. ಅರಿಶಿಣ ಕುಂಕುಮ ರೀತಿ ಭೂಮಿ ದಾನ ಮಾಡಿದ್ದು ತಪ್ಪಾ ಎಂದಿದ್ದಾರೆ. ಆದ್ರೆ, ಕಾನೂನು ಬದ್ಧವಾಗಿ ಭೂಮಿ ಕೊಟ್ಟಿದ್ದರೆ ಪ್ರಶ್ನೆ ಮಾಡ್ತಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೊಟ್ಟಿರುವುದು ಸರ್ಕಾರದ ಭೂಮಿ. ಸಿಎಂ ಮೂಗಿನ ನೇರವಾಗಿ ಕಾನೂನು ಬಾಹಿರ ಚಟುವಟಿಕೆ ನಡೆದಿದೆ. ಈಗಲೂ ನಾನು 14 ಸೈಟ್​ ವಾಪಸ್​ ಕೊಡಲು ಸಿದ್ಧ ಎಂದಿದ್ದಾರಂತೆ. ಸೈಟ್ ವಾಪಸ್​ ಕೊಟ್ಟರೆ ಕಾನೂನುಬಾಹಿರ ಚಟುವಟಿಕೆ ಮುಚ್ಚಲು ಸಾಧ್ಯವಾ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಎಚ್ ಡಿ ಕುಮಾರಸ್ವಾಮಿ
ವಿಡಿಯೋ ಪ್ರದರ್ಶಿಸುವ ಹಳೇ ಚಾಳಿ ಎಲ್ಲಿ ಹೋಗುತ್ತೆ: ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕಿಡಿ

ಇದೇ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಮಾಜಿ ಸಿಎಂ, “ನನ್ನ ಅಣ್ಣನ ಮಗನನ್ನು ನಾನು ಜೈಲಿಗೆ ಕಳುಹಿಸಿದ್ದೀನಿ ಅಂದಿದ್ದೀರಿ ಶಿವಕುಮಾರ್. ಮಿಸ್ಟರ್ ಶಿವಕುಮಾರ್, ನಾನು ಚಾಮುಂಡೇಶ್ವರಿ ಸನ್ನಿದಾನದಲ್ಲಿ ನಿಂತು ಮಾತಾಡ್ತಿದ್ದೇನೆ. ಕಾಫಿ ಡೇ ಸಿದ್ದಾರ್ಥ ಸಾವಿಗೆ ಕಾರಣ ಯಾರು ಅಂತಾ ಹೇಳ್ತೀರಾ?” ಎಂದು ಪ್ರಶ್ನಿಸಿದರು.

ನಾವು ಮೈಸೂರು ಚಲೋಗೆ ಚಾಲನೆ ನೀಡಿದ ಬಳಿಕ ಕಾಂಗ್ರೆಸ್​ ಜನಾಂದೋಲನ ಕಾರ್ಯಕ್ರಮವನ್ನು ಬಿಡದಿಯಿಂದ ಪ್ರಾರಂಭ ಮಾಡಿತು. ಆ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ನಾಯಕರು, ಹಲವಾರು ಪ್ರಶ್ನೆಗಳನ್ನು ಬಿಜೆಪಿ-ಜೆಡಿಎಸ್​ ಮುಂದೆ ಇಟ್ಟಿದ್ದಾರೆ. ಜೊತೆಗೆ ನನ್ನ ಮತ್ತು ಯಡಿಯೂರಪ್ಪ ಅವರ ಆಡಳಿತಾವಧಿಯ ಹೇಳಿಕೆಗಳ ವಿಡಿಯೋವನ್ನ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ನವರು ಪ್ರದರ್ಶಿಸಿದ್ದಾರೆ. ಅದಕ್ಕೆ ಉತ್ತರಿಸಿ, ‘ನಾನು ಮತ್ತು ಬಿಎಸ್​ವೈ ಅವರ ನಡುವೆ ರಾಜಕೀಯ ಸಂಘರ್ಷ ಮಾಡಿರಬಹುದು. ಅದಕ್ಕೇಲ್ಲ ಉತ್ತರ ಕೊಡುವ ನೈತಿಕತೆಯನ್ನು ನಾವಿಬ್ಬರು ಹೊಂದಿದ್ದೇವೆ. ಅದಕ್ಕೂ ಮುಂಚೆ ಕಾಂಗ್ರೆಸ್​ ಮಹಾನಾಯಕರ ವಿಡಿಯೋವನ್ನು ಹಾಕಿ ಎಂದು ಬಹಿರಂಗ ವೇದಿಕೆಯಲ್ಲಿ ಕುಮಾರಸ್ವಾಮಿ ಅವರು ವಿಡಿಯೋ ರಿಲೀಸ್ ಮಾಡಿದರು.

ತಿಹಾರ್ ಜೈಲು ಸೇರಿದ್ದ ಡಿಕೆ ಶಿವಕುಮಾರ್ ಕುರಿತ ವಿವರವನ್ನು ವಿಡಿಯೋ ಮೂಲಕ ಜನರ ಮುಂದಿಡಲಾಯಿತು. ದಲಿತ ಕುಟುಂಬದ ಮೇಲೆ ದೌರ್ಜನ್ಯ ಮಾಡಿದ ವಿವರವನ್ನೂ ನೀಡಲಾಯಿತು. ಕಾಂಗ್ರೆಸ್ ಭ್ರಷ್ಟಾಚಾರದ ಕುರಿತ ಅದೇ ಪಕ್ಷದ ಜನಾರ್ದನ ಪೂಜಾರಿ, ಮಾರ್ಗರೆಟ್ ಆಳ್ವ, ಬಿ.ಕೆ.ಹರಿಪ್ರಸಾದ್, ರಮೇಶ್‌ ಕುಮಾರ್ ಮೊದಲಾದ ಮುಖಂಡರು ಮಾತನಾಡಿದ ವಿಡಿಯೋಗಳನ್ನು ಪ್ರದರ್ಶಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com