ಮುಡಾ ಹಗರಣ: ಬದಲಿ ನಿವೇಶನ ಕೋರಿ ಸಿದ್ದರಾಮಯ್ಯ ಪತ್ರ; ವೈರಲ್!

ದಿನ ಪತ್ರಿಕೆಗಳು, ಮಾಧ್ಯಮಗಳ ಸಂದರ್ಶನಗಳಲ್ಲಿ ನಾನು ಶುದ್ಧ ಹಸ್ತ, ಸಮಾಜವಾದಿ ಎಂದು ಸತ್ಯ ಹರಿಶ್ಚಂದ್ರನಂತೆ ಮಾತಾಡುವ ನಿಮ್ಮ ಅಸಲೀ ಬಂಡವಾಳ ಈಗ ಬಯಲಾಗಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬದಲಿ ನಿವೇಶನ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಭಾನುವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಪತ್ರವನ್ನು ಹಂಚಿಕೊಂಡಿರುವ ಜೆಡಿಎಸ್, 'ಗುಳಿಗೆ ಸಿದ್ದ ಒಳಗೆ ಮೇಯಿದ' ಈ ಮಾತು ನಿಮ್ಮಂಥವರನ್ನು ನೋಡಿಯೇ ಹೇಳಿರಬೇಕು. ನನಗೆ ಒಂದು ನಿವೇಶನವೂ ಇಲ್ಲ. ಯಾವುದೇ ಲೆಟರ್ ಬರೆದಿಲ್ಲ ಎಂದು ಸುಳ್ಳು ಹೇಳುವ ಸಿದ್ದರಾಮಯ್ಯ ಅವರೇ, ಸಮಾಜವಾದಿ ಮುಖವಾಡ ತೊಟ್ಟು ನೀವು ಮಾಡಿರುವ ಅಕ್ರಮಗಳಿಗೆ ಈ ಲೆಟರ್ ಸಾಕ್ಷಿ. ಬದಲಿ ನಿವೇಶನ ಕೋರಿ ನೀವೇ ಸ್ವತಃ ಬರೆದಿರುವ ಪತ್ರ, ನಿಮ್ಮದೇ ಸಹಿ…ಇಷ್ಟು ಸಾಕಲ್ಲವೇ ? ಇದು ನಿಮಗೆ ಕಪ್ಪು ಚುಕ್ಕೆ ಅಲ್ಲವೇ? ಎಂದು ಪ್ರಶ್ನಿಸಿದೆ.

ದಿನ ಪತ್ರಿಕೆಗಳು, ಮಾಧ್ಯಮಗಳ ಸಂದರ್ಶನಗಳಲ್ಲಿ ನಾನು ಶುದ್ಧ ಹಸ್ತ, ಸಮಾಜವಾದಿ ಎಂದು ಸತ್ಯ ಹರಿಶ್ಚಂದ್ರನಂತೆ ಮಾತಾಡುವ ನಿಮ್ಮ ಅಸಲೀ ಬಂಡವಾಳ ಈಗ ಬಯಲಾಗಿದೆ. ದಲಿತರ ಜಮೀನು ಕಬಳಿಸಿರುವ ನೀವು ಪರಿಶಿಷ್ಟ ಸಮುದಾಯಕ್ಕೆ ವಂಚಿಸಿದ್ದೀರಿ, ಸುಳ್ಳುಗಳ ಮೇಲೆ ಸುಳ್ಳಗಳನ್ನು ಹೇಳುತ್ತಾ ನಾಡಿನ ಜನರಿಗೂ ನಂಬಿಕೆ ದ್ರೋಹ ಎಸಗಿದ್ದೀರಿ. ಇದೇನಾ ನಿಮ್ಮ ಶುದ್ಧವಾದ ರಾಜಕೀಯ ಜೀವನ ಎಂದು ಟೀಕಿಸಿದೆ.

ಸಿದ್ದರಾಮಯ್ಯ ಅವರೇ ನಿಮಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಯಾವ ನೈತಿಕತೆಯು ಉಳಿದಿಲ್ಲ. ಮೊದಲು ರಾಜೀನಾಮೆ ಕೊಟ್ಟು ನಿರ್ಗಮಿಸಿ ಎಂದು ಒತ್ತಾಯಿಸಿದೆ.

ಸಿದ್ದರಾಮಯ್ಯ
ಶೋಷಿತರು ಅಧಿಕಾರ ನಡೆಸೋದನ್ನ ಮನುವಾದಿಗಳು ಸಹಿಸಲ್ಲ; ಬಿಜೆಪಿ, ಜೆಡಿಎಸ್ ಎಷ್ಟೇ ಪಾದಯಾತ್ರೆ ನಡೆಸಿದರೂ ನಾನು ಜಗ್ಗಲ್ಲ, ಬಗ್ಗಲ್ಲ: ಸಿಎಂ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com