
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಉಚಿತ, ಉಚಿತ, ಉಚಿತ, ಅಧಿಕಾರ ಹಿಡಿದ ಮೇಲೆ ಬೆಲೆ ಏರಿಕೆ ಖಚಿತ.. ಖಚಿತ.. ಖಚಿತ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ.
ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಜೆಡಿಎಸ್ ರಾಜ್ಯವನ್ನು ಲೂಟಿ ಮಾಡುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಬೆಲೆಗಳನ್ನು ಏರಿಸುತ್ತಲೇ ನಾಡಿನ ಜನರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡುತ್ತಿದೆ. ನಾಗರಿಕರಿಗೆ ಉಪಕಾರ ಸ್ಮರಣೆ ಇಲ್ಲ, ಎಷ್ಟು ಮಾಡಿದ್ರೂ ಅಷ್ಟೇ, ಬೆಂಗಳೂರಲ್ಲಿ ನೀರಿನ ದರ ಹೆಚ್ಚಿಸೇ ಹೆಚ್ಚಿಸ್ತೀವಿ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಜೆಡಿಎಸ್ ಕಿಡಿ ಕಾರಿದೆ.
ಅಧಿಕಾರಕ್ಕೆ ಬಂದ ಮೇಲೆ "ಉಪಕಾರ ಸ್ಮರಣೆ ಇಲ್ಲ" ಎಂದು ಜನರನ್ನು ಜರಿಯಲು ನಿಮಗೆ ಯಾವ ನೈತಿಕತೆ ಇದೆ ..? ನಿಮ್ಮ ಧೀಮಾಕಿನ, ದುರಂಹಕಾರದ ಮಾತುಗಳಿಗೆ ನಾಡಿನ ಜನರು ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ.. ನೀರಿಕ್ಷಿಸಿ ಎಂದು ಹೇಳಿದೆ.
Advertisement