'ನನಗೂ ತುಮಕೂರಿಗೂ ಅವಿನಾಭಾವ ಸಂಬಂಧ, ಹೈಕಮಾಂಡ್ ಅವಕಾಶ ಕೊಟ್ಟರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ'

ವಿ ಸೋಮಣ್ಣ
ವಿ ಸೋಮಣ್ಣ

ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿದ್ದ ಮಾಜಿ ಸಚಿವ ವಿ ಸೋಮಣ್ಣ ಲೋಕಸಭೆ ಚುನಾವಣೆಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸೋದಕ್ಕೆ ಟಿಕೆಟ್ ಕೇಳಿದ್ದೀನಿ. ಹೈಕಮಾಂಡ್ ಗುರುತಿಸಿ ಟಿಕೆಟ್ ಕೊಟ್ಟರೆ‌ ಸ್ಪರ್ಧಿಸುತ್ತೇನೆ, ಅವರು ಎಲ್ಲಿ ಹೇಳ್ತಾರೋ ಅಲ್ಲಿಂದ ಸ್ಪರ್ಧಿಸ್ತೇನೆ. ಮೋದಿ ಮತ್ತೆ ಪ್ರದಾನಿ ಆಗಬೇಕು, ಅವರಿಗೆ ನಾವು ನಮ್ಮ ಅಳಿಲು ಸೇವೆ ಮಾಡೋ ಆಸೆ ಇದೆ ಎಂದು ಹೇಳಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ಮಾತನಾಡಿದ ಅವರು, ತುಮಕೂರು ಟಿಕೆಟ್ ನನಗೆ ಕೊಡೋ ಬಗ್ಗೆ ನನಗೇನೂ ಮಾಹಿತಿ ಇಲ್ಲ. ಮನೆ ಏನು ಮಾಡಿಲ್ಲ, ಬೆಂಗಳೂರಿನಿಂದ ಹತ್ತಿರದ ಜಿಲ್ಲೆಯದು, ಮೊದಲಿನಿಂದಲೂ ತುಮಕೂರು ಜೊತೆ ನನ್ನ ಸಂಬಂಧವಿದೆ. ಹೈಕಮಾಂಡ್ ಹೋಗು ಅಂದ್ರೆ ಹೋಗ್ತೀನಿ. ಇಲ್ಲಾಂದ್ರೆ ನನ್ನ ಕೆಲಸ ಇದೆ ಅದೇ ಮಾಡ್ತೇನೆ ಎಂದು ಹೇಳಿದರು.

ವಿ ಸೋಮಣ್ಣ
ತುಮಕೂರು ಕ್ಷೇತ್ರಕ್ಕಾಗಿ ಜಟಾಪಟಿ: ಹೊರಗಿನಿಂದ ಬಂದು ಗೆದ್ದಿರುವ ಇತಿಹಾಸವಿಲ್ಲ; ಸೋಮಣ್ಣಗೆ ಮಾಧುಸ್ವಾಮಿ ಟಕ್ಕರ್!

ಇನ್ನು, ನಾನು 365 ದಿನವೂ ರಾಜಕಾರಣ ಮಾಡ್ತೀನಿ ಎಂದ ಮಾಜಿ ಸಚಿವ ವಿ ಸೋಮಣ್ಣ, ನಾನು ಗೆದ್ದಾಗಲೂ ಒಂದು ದಿನ ಸುಮ್ಮನೆ ಕೂರಲ್ಲ, ಇದು ನನ್ನ ರೂಟೀನ್ ವರ್ಕ್. ಇದೀಗ ಸೋತಿದ್ದರಿಂದ ಸ್ವಲ್ಪ ಸೋಂಬೇರಿ ಆಗಿದ್ದೀನಿ ಎಂದು ಹೇಳಿದರು.

ಲೋಕಸಭೆ ಚುನಾವಣೆಯ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ ರಮಾನಾಥ ರೈ: ಇನ್ನೊಂದೆಡೆ ಮಂಗಳೂರಿನಲ್ಲಿ ಮಾಜಿ ಸಚಿವ, ಹಿರಿಯ ರಾಜಕಾರಣಿ ಬಿ ರಮಾನಾಥ ರೈ ಅವರು ಕೂಡ ಪರೋಕ್ಷವಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇಂದು ಮಂಗಳೂರಿನಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ ನಡೆಯಲಿರುವ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆ, ಸ್ಥಳ ಪರಿಶೀಲನೆ ವೇಳೆ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಮುಂದಿನ ಲೋಕಸಭಾ ಚುನಾವಣೆಯ ಅಭ್ಯರ್ಥಿಯ ಘೋಷಣೆ ಈ ಸಮಾವೇಶದಲ್ಲಿ ನಡೆಯುವುದಿಲ್ಲ. ಪಕ್ಷದ ಹೈಕಮಾಂಡ್ ಈ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಸಮೀಕ್ಷೆ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ನನಗೆ ಎಲ್ಲಾ ಅವಕಾಶ ನೀಡಿದೆ. ಈ ಬಾರಿ ಲೋಕಸಭಾ ಚುನಾವಣೆಗೆ ಅವಕಾಶ ದೊರೆತಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com