'ಮಂಡ್ಯ ಮಣ್ಣಿನ ಋಣ, ಮಂಡ್ಯ ಮಣ್ಣಿನ ಗುಣ ಎಂದೆಂದಿಗೂ ಬಿಡಲ್ಲ, ಈ ಮಣ್ಣನ್ನೂ ಬಿಡಲ್ಲ'!

ಈ ಮಂಡ್ಯ ನೆಲದ ಗುಣ, ಋಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ, ಅದೇ ರೀತಿ ಈ ಮಣ್ಣನ್ನು ನಾನು ಬಿಡುವುದೂ ಇಲ್ಲ ಎನ್ನುವ ಮೂಲಕ ದಳಪತಿಗಳಿಗೆ ಜೆಡಿಎಸ್-ಬಿಜೆಪಿ ಮೈತ್ರಿ ನಾಯಕರಿಗೆ ಸುಮಲತಾ ಸಂದೇಶ ರವಾನಿಸಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಸಂಸದೆ ಸುಮಲತಾ
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಸಂಸದೆ ಸುಮಲತಾ

ಮಂಡ್ಯ: ಈ ಮಣ್ಣಿನ ಋಣ ಈ ಮಣ್ಣಿನ ಗುಣ ಎಂದೆಂದೂ ಬಿಡಲ್ಲ, ಸುಮಲತಾ ಅಂಬರೀಷ್ ಈ ಮಣ್ಣನ್ನೂ ಬಿಡಲ್ಲ ಎಂದು ಸಂಸದೆ ಸುಮಲತಾ ಗುಡುಗಿದ್ದಾರೆ.

ನಿನ್ನೆ ಮಂಡ್ಯದ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇಗುಲ ಆವರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷವಾದ ಸಂದರ್ಭದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಸಂಸದೆ ಸುಮಲತಾ ಚಿತ್ರರಂಗದಲ್ಲಿ ದರ್ಶನ್ ಅವರ ಬೆಳವಣಿಗೆ, ತಮ್ಮ ಕುಟುಂಬ ಮತ್ತು ದರ್ಶನ್ ನಡುವಿನ ಒಡನಾಟ ಬಗ್ಗೆ ಮಾತನಾಡಿದರು. ನಂತರ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ವದಂತಿಗೆ ಉತ್ತರವೆಂಬಂತೆ ಮಂಡ್ಯದ ಬಗ್ಗೆ ಮಾತನಾಡಿ ದಳಪತಿಗಳಿಗೆ, ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.

ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಸಂಸದೆ ಸುಮಲತಾ
ನಾನು ಮಂಡ್ಯ ಸೊಸೆ, ನಾನ್ಯಾಕೆ ಕ್ಷೇತ್ರ ಬಿಟ್ಕೊಡಲಿ: ಸಂಸದೆ ಸುಮಲತಾ ಅಂಬರೀಷ್


ನನ್ನ ಪತಿ ಅಂಬರೀಷ್ ಅವರು ತೀರಿಕೊಂಡಾಗ ಈ ಮಂಡ್ಯ ನೆಲೆದ ಮಣ್ಣನ್ನು ಅವರ ಹಣೆಗೆ ತಿಲಕವಾಗಿ ಇಟ್ಟು ನಾವು ಬೀಳ್ಕೊಟ್ಟಿದ್ದೆವು. ಇಂದು ಈ ವೇದಿಕೆ ಮುಖಾಂತರ ಮತ್ತೊಮ್ಮೆ ಹೇಳುತ್ತಿದ್ದೇನೆ. ಈ ಮಂಡ್ಯ ನೆಲದ ಗುಣ, ಋಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ, ಅದೇ ರೀತಿ ಈ ಮಣ್ಣನ್ನು ನಾನು ಬಿಡುವುದೂ ಇಲ್ಲ ಎನ್ನುವ ಮೂಲಕ ದಳಪತಿಗಳಿಗೆ ಜೆಡಿಎಸ್-ಬಿಜೆಪಿ ಮೈತ್ರಿ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.

ಮಂಡ್ಯ ಮಣ್ಣು ಬಿಡಲ್ಲ ಎನ್ನುತ್ತಲೇ ಎದುರಾಳಿಗಳಿಗೆ ಸಂದೇಶ ರವಾನಿಸಿರುವ ಸುಮಲತಾ, ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೂ ಕಣ್ಣಕ್ಕಿಳಿಯುವ ಸೂಚನೆ ನೀಡಿದ್ದಾರೆ. 2019ರ ಚುನಾವಣೆ ನೆನೆದು ಭಾವುಕರಾದ ಅವರು, ಆ ಸಂದರ್ಭದಲ್ಲಿ ದರ್ಶನ್, ಯಶ್ ನನಗೆ ಧೈರ್ಯ ತುಂಬಿದ್ದರು. ಕಳೆದ 5 ವರ್ಷ ಮಂಡ್ಯ ಜನರ ಪ್ರೀತಿಗಳಿಸಿದ್ದೇನೆ. ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ ಎನ್ನುವ ಮೂಲಕ ಈ ಚುನಾವಣೆಯಲ್ಲಿಯೂ ದರ್ಶನ್ ತನ್ನ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂಬ ಸುಳಿವನ್ನೂ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com