'ಫೇಸ್ಬುಕ್ ನಲ್ಲಿ ಕವನ ಬರೆದೋನು ಮುಸ್ಲಿಂ, ದೂರು ಕೊಟ್ಟವನೂ ಮುಸ್ಲಿಂ, ಶಾಸಕನೂ ಮುಸ್ಲಿಂ’: ಎಚ್ ಡಿ ಕುಮಾರಸ್ವಾಮಿ

ಯಾವನೋ ಒಬ್ಬ ಮತಾಂಧ ಐಎಎಸ್ ಅಧಿಕಾರಿ… ತಾನು ಹೇಳಿದ್ದು ಸರಿ ಅಂತಾನೆ. ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದ ನಂತರ ಎಂಟು ತಿಂಗಳಲ್ಲಿ ದುಡ್ಡು ವಸೂಲಿಗೆ ಇಳಿದುಬಿಟ್ಟಿದ್ದಾರೆ.
ರಾಮನಗರ ಪ್ರತಿಭಟನೆಯಲ್ಲಿ ಎಚ್.ಡಿ ಕುಮಾರಸ್ವಾಮಿ
ರಾಮನಗರ ಪ್ರತಿಭಟನೆಯಲ್ಲಿ ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಯಾವನೋ ಒಬ್ಬ ಮತಾಂಧ ಐಎಎಸ್ ಅಧಿಕಾರಿ, ತಾನು ಹೇಳಿದ್ದು ಸರಿ ಅಂತಾನೆ. ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದ ನಂತರ ಎಂಟು ತಿಂಗಳಲ್ಲಿ ದುಡ್ಡು ವಸೂಲಿಗೆ ಇಳಿದುಬಿಟ್ಟಿದ್ದಾರೆ. ಮುಖ್ಯಮಂತ್ರಿ, ಹಾಗೂ ಡಿಸಿಎಂ ಮಧ್ಯ ಜಗಳ ಇದೆ. ಅದಕ್ಕೇ ಇಂಥಾ ಪರಿಸ್ಥಿತಿ ಇದೆ. ಅಪರಾಧಿಗಳ ಮೇಲೆ ಏನೂ ಕ್ರಮ ಕೈಗೊಳ್ತಿಲ್ಲಎಂದು ಮಾಜಿ ಸಿಎಂ ಎಚ್.ಡಿಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ವಕೀಲರ ವಿರುದ್ಧ ದೂರು ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್​ಐ ತನ್ವೀರ್ ಅಮಾನತಿಗೆ ಆಗ್ರಹಿಸಿ ರಾಮನಗರದ ಐಜೂರು ಸರ್ಕಲ್ ಬಳಿ ವಕೀಲರು ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿನ ಪೊಲೀಸರು ಅಪರಾಧಿಗೆ ಸಾಥ್ ನೀಡುವ ಕೆಲಸ ಮಾಡಿದ್ದಾರೆ. ಅದೇನೋ ಏನೋ ಈ ಕಾಂಗ್ರೆಸ್ ಬಂದಾಗಿನಿಂದ ಹಿಂಗೆ ಆಗುತ್ತಿದೆ.

ಯಾವನೋ ಒಬ್ಬ ಮತಾಂಧ ಐಎಎಸ್ ಅಧಿಕಾರಿ… ತಾನು ಹೇಳಿದ್ದು ಸರಿ ಅಂತಾನೆ. ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದ ನಂತರ ಎಂಟು ತಿಂಗಳಲ್ಲಿ ದುಡ್ಡು ವಸೂಲಿಗೆ ಇಳಿದುಬಿಟ್ಟಿದ್ದಾರೆ. ಮುಖ್ಯಮಂತ್ರಿ, ಹಾಗೂ ಡಿಸಿಎಂ ಮಧ್ಯ ಜಗಳ ಇದೆ. ಅದಕ್ಕೇ ಇಂಥಾ ಪರಿಸ್ಥಿತಿ ಇದೆ. ಅಪರಾಧಿಗಳ ಮೇಲೆ ಏನೂ ಕ್ರಮ ಕೈಗೊಳ್ತಿಲ್ಲ ಎಂದು ಹೇಳಿದ್ದಾರೆ.

ರಾಮನಗರ ಪ್ರತಿಭಟನೆಯಲ್ಲಿ ಎಚ್.ಡಿ ಕುಮಾರಸ್ವಾಮಿ
ಕಂಡವರ ಭೂಮಿಗೆ ಬೇಲಿ ಹಾಕುವ 'ಕಿಡಿಗೇಡಿ ಕುಮಾರ'ನ ಪರ ಬ್ಯಾಟಿಂಗ್ ಬಿಟ್ಟರೆ ಕೊಳಕುಮಂಡಲ ಕಾಂಗ್ರೆಸ್ ಕಿಸಿದಿದ್ದೇನೂ ಇಲ್ಲ!

ಆಡಳಿತ ನೀವು ನಡೆಸ್ತಿದ್ದೀರೋ ಅಥವಾ ಯಾರು ನಡೆಸುತ್ತಿದ್ದಾರೆ? ಯಾವನೋ ಶಾಸಕ ಅಥವಾ ಜಿಲ್ಲಾ‌ ಮಂತ್ರಿ‌ ನಡೆಸ್ತಿದ್ದಾನಾ? ನೀವು ಅವರ ಕೈಕೆಳಗೆ ಕೆಲಸ ಮಾಡ್ತೀರೋ ಅಥವಾ ಜನರ‌ನ್ನ ರಕ್ಷಿಸ್ತೀರೋ? ಇಂಥ ಕಟ್ಟಡ ಕಟ್ಟಿಸಿದ್ದು ರೌಡಿಗಳ ಜತೆ ಕೆಲಸ ಮಾಡೋಕಲ್ಲ ಎಂದರು.

ಇಂತಹ ಕೆಲಸ ಮಾಡೋಕೆ ನಾನು ಜಿಲ್ಲಾ ಕೇಂದ್ರ ಮಾಡಿದ್ನಾ? ಜಿಲ್ಲಾ ಕೇಂದ್ರ ಬೆಂಗಳೂರಿಗೆ ತಗೊಂಡ್ ಹೋಗಿಬಿಡ್ತಾನಂತೆ. ಅದೇನೋ ಬ್ರ್ಯಾಂಡ್ ಬೆಂಗಳೂರು ಮಾಡ್ತಾನಂತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಉಲ್ಲೇಖಿಸದೆ ಲೇವಡಿ ಮಾಡಿದರು.

ಮೊದಲು ಹಿರಿಯ ವಕೀಲರ ಬಳಿ ಘಟನೆಯ ಮಾಹಿತಿ ಪಡೆದ ಹೆಚ್​ಡಿಕೆ, ಪ್ರಕರಣದ ಒಟ್ಟು ಸಾರಾಂಶ ಏನು? ಯಾಕೆ‌ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಿತು ಎಂದು ತಿಳಿದುಕೊಂಡರು. ಬಳಿಕ ಮಾತನಾಡಿ, ರಾಮನಗರದಲ್ಲಿ ನಡೆದಿರುವ ಘಟನೆ ಚಿಕ್ಕದು. ಆದರೆ, ವಕೀಲರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಬಹಳ ಗಂಭೀರವಾದ ವಿಚಾರ.

ರಾಮನಗರ ಪ್ರತಿಭಟನೆಯಲ್ಲಿ ಎಚ್.ಡಿ ಕುಮಾರಸ್ವಾಮಿ
ನಾವು ಭಿಕ್ಷೆ ಬೇಡುತ್ತಿಲ್ಲ, ಕಾನೂನು ಪ್ರಕಾರ ಬರ ಪರಿಹಾರ ಕೊಡಿ: ಕೇಂದ್ರಕ್ಕೆ ಡಿ ಕೆ ಶಿವಕುಮಾರ್ ಒತ್ತಾಯ

ಇದನ್ನು ಸಣ್ಣ ಮಟ್ಟದಲ್ಲೇ ಚಿವುಟಿ ಹಾಕಬಹುದಿತ್ತು. ರಾಜ್ಯದಲ್ಲಿ ಯಾವ ರೀತಿ ಆಡಳಿತ‌ ಇದೆ? ನಾನು ಪಕ್ಷದ ಬಗ್ಗೆ ಹೇಳಲ್ಲ, ಜನರಿಗೆ ರಕ್ಷಣೆ ಕೊಡುವಂತಹದ್ದು ಆಡಳಿತಾಧಿಕಾರಿಗಳ ಕರ್ತವ್ಯ. ಮಾಧ್ಯಮಗಳಲ್ಲಿ ನೋಡಿ ನಾನು ಅಧಿಕಾರಿಗಳಿಗೆ ಕೇಳಿದೆ. ಅದೇನಿಲ್ಲ, ಅಂಥಾ ಪ್ರಕರಣ‌ ಏನಿಲ್ಲ ಅದನ್ನು ಸರಿ ಪಡಸ್ತೀವಿ ಅಂದಿದ್ರು. ಎಸ್​ಪಿಗೂ ಈ ಬಗ್ಗೆ ಗಮನಕ್ಕೆ ತರಲಾಗಿತ್ತು. ಈ ವಿಚಾರ ಅಧಿವೇಶನದಲ್ಲಿ ಮಾತಾಡ್ತಾರೆ. ಇಂಥಾ ವಿಚಾರಗಳನ್ನು ನನ್ನ ಸ್ವಂತಕ್ಕೆ ಬಳಸಿಕೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ರೈತರ ಮೇಲೆ ಗೋಲಿಬಾರ್ ಆದ ಮೇಲೆ ದೇವೇಗೌಡರು ಪಾದಯಾತ್ರೆ ಮಾಡಿದ ಇತಿಹಾಸ ಇದೆ. ಮಂಡ್ಯದಲ್ಲೂ ಒಂದು ಘಟನೆ ನಡೆದಿತ್ತು. ಅವತ್ತೂ ಜಿಲ್ಲಾಧಿಕಾರಿಗಳಿಗೆ ಹೇಳಿದ್ದೆ, ಯಾಕಿಷ್ಟು ಪೊಲೀಸರನ್ನು ಕರೆಸಿದ್ದರು ಎಂಬುದಾಗಿ. ಪಾಪ ಆ ಕಾನಸ್ಟೇಬಲ್​​ಗಳಿಗೆ ಊಟ ಇರಲ್ಲ, ಮತ್ತೊಂದಿಲ್ಲ. ಅವರ ಕಷ್ಟನೂ ಇವರಿಗೆ ಗೊತ್ತಾಗಲ್ಲ. ಇಷ್ಟು ಜನ ಪೊಲೀಸರನ್ನು ನೋಡಿ ಆಶ್ಚರ್ಯ ಆಯ್ತು. ನಾನು ರಾಮನಗರಲ್ಲಿದ್ದಾಗ ಇಂಥಾ ಪರಿಸ್ಥಿತಿ ಇರಲಿಲ್ಲ. ಅವನ್ಯಾರೋ ರಫಿಕ್ ಅನ್ನೋನು ದೂರು ಕೊಟ್ಟಿದ್ದಾನೆ. ದೂರು ದಾಖಲಾಗಿದೆ, ಯಾರೋ ರಾಮನಗರ ಉಳಿಸೋಕೆ ಪ್ರಗತಿಪರರು ಪ್ರತಿಭಟನೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಅವನ್ಯಾರೋ ರಫಿಕ್ ಅನ್ನೋನು ದೂರು ಕೊಟ್ಟಿದ್ದಾನೆ. ಫೇಸ್ಬುಕ್ ನಲ್ಲಿ ಕವನ ಬರೆದೋನು ಮುಸ್ಲಿಂ, ದೂರು ಕೊಟ್ಟವನೂ ಮುಸ್ಲಿಂ, ಶಾಸಕನೂ ಮುಸ್ಲಿಂ ಆಗಿದ್ದಾನೆ’’ ಎಂದ ಕುಮಾರಸ್ವಾಮಿ, ರಾಮನಗರದಲ್ಲಿ ಸದ್ಯಕ್ಕೆ ನಡೆದಿರುವ ಘಟನೆ ಚಿಕ್ಕದ್ದು. ಸಣ್ಣ ಮಟ್ಟ ದಲ್ಲೇ ಚಿವುಟಿ ಹಾಕಬಹದಿತ್ತು. ಆದರೆ ವಕೀಲರೊಬ್ಬರು ಸಾಮಾಜಿಕ ಜಾಲಾತಾಣದಲ್ಲಿ ಹಾಕಿದ್ದು ಬಹಳ ಗಂಭೀರವಾದದ್ದು. ರಾಜ್ಯದಲ್ಲಿ ಯಾವ ರೀತಿ ಆಡಳಿತ‌ ಇದೆ. ನಾನು ಪಕ್ಷದ ಬಗ್ಗೆ ಹೇಳಲ್ಲ, ಜನರಿಗೆ ರಕ್ಷಣೆ ಕೊಡುವಂತಹದ್ದು ಆಡಳಿತಾಧಿಕಾರಿಗಳ ಕರ್ತವ್ಯ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com