ಮತದಾರರಿಗೆ ಕುಕ್ಕರ್‌ ಆಮಿಷ: ಸಂಸದ ಡಿಕೆ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಒತ್ತಾಯ

ಲೋಕಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ವಿರುದ್ಧ ಮತದಾರರಿಗೆ ಕುಕ್ಕರ್ ಆಮಿಷದ ಆರೋಪ ಕೇಳಿಬಂದಿದೆ.
ಡಿಕೆ ಸುರೇಶ್ ಭಾವಚಿತ್ರವಿರುವ ಕುಕ್ಕರ್
ಡಿಕೆ ಸುರೇಶ್ ಭಾವಚಿತ್ರವಿರುವ ಕುಕ್ಕರ್

ಬೆಂಗಳೂರು: ಲೋಕಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ವಿರುದ್ಧ ಮತದಾರರಿಗೆ ಕುಕ್ಕರ್ ಆಮಿಷದ ಆರೋಪ ಕೇಳಿಬಂದಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಬಿಜೆಪಿ, ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ ಬ್ರದರ್ಸ್ ಗಳ ಬ್ರದರ್ ರಿಂದ ಕುಕ್ಕರ್ ಹಂಚಲಾಗುತ್ತಿದೆ. ದೇಶ ವಿಭಜನೆ ಮಾಡುವ ಸಂಚು ರೂಪಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಅವರಿಗೆ ಚುನಾವಣೆ ಘೋಷಣೆ ಮುನ್ನವೇ ಸೋಲಿನ ಭೀತಿ ಶುರುವಾಗಿದೆ ಎಂದು ಟೀಕಿಸಿದೆ.

ಡಿಕೆ ಸುರೇಶ್ ಭಾವಚಿತ್ರವಿರುವ ಕುಕ್ಕರ್
ಎರಡೂವರೆ ವರ್ಷದ ನಂತರ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದ ಡಿಕೆ ಸುರೇಶ್; ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ಹೀಗಿದೆ

ಗೂಂಡಾಗಿರಿ ಮಾಡುವ ಜೊತೆಗೆ ಸ್ವಲ್ಪ ಅಭಿವೃದ್ಧಿಯನ್ನು ಮಾಡಿದ್ದರೆ ಈಗ ಊರಿಗಿಂತ ಮುಂಚೆ ಮತದಾರರಿಗೆ ಕುಕ್ಕರ್ ಹಂಚುವ ಪ್ರಮೇಯ ಬರುತ್ತಿರಲಿಲ್ಲಾ . ಅಂದಹಾಗೆ ಕನಕಪುರದಲ್ಲಿ ನೀವು ಪ್ರತಿ ಬಾರಿ ಗೆಲ್ಲುವುದು ಗೂಂಡಾಗಿರಿಯಿಂದ ಎಂದು ತಿಳಿದಿತ್ತು. ಆದರೆ, ನಿಮ್ಮ ಗೂಂಡಾ ಮನಸ್ಸಿನೊಳಗೆ ವಾಮಮಾರ್ಗದ ಕುಕ್ಕರ್ ವಿಶಲ್ ಸಹ ಇದೆ ಎಂಬುದು ಜಗಜ್ಜಾಹೀರಾಗಿದೆ ಎಂದು ಕಿಡಿಕಾರಿದೆ.

ಮತದಾರರಿಗೆ ಕುಕ್ಕರ್ ಆಮಿಷ ಒಡ್ಡುತ್ತಿರುವ ಸಂಸದ ಡಿ.ಕೆ. ಸುರೇಶ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಒತ್ತಾಯಿಸುವುದಾಗಿ ಬಿಜೆಪಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com