ದೆಹಲಿಯಲ್ಲಿ ನಡೆಯುತ್ತಿರುವುದು ದೇಶದ್ರೋಹಿಗಳ ಹೋರಾಟ, ಖಲಿಸ್ತಾನಿಗಳ ಹೋರಾಟ: ಅನಂತ್‌ ಕುಮಾರ್‌ ಹೆಗಡೆ

ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ದೇಶದ್ರೋಹಿಗಳು, ರೈತರೇ ಅಲ್ಲ ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಕಿಡಿಕಾರಿದ್ದಾರೆ.
ಅನಂತ್ ಕುಮಾರ್ ಹೆಗಡೆ
ಅನಂತ್ ಕುಮಾರ್ ಹೆಗಡೆ

ಕಾರವಾರ: ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ದೇಶದ್ರೋಹಿಗಳು, ರೈತರೇ ಅಲ್ಲ ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಕಿಡಿಕಾರಿದ್ದಾರೆ.

ಮುಂಡಗೋಡಿನಲ್ಲಿ ಮಾತನಾಡಿದ ಅವರು, ಅಲ್ಲಿ ಪ್ರತಿಭಟನೆಗೆ ಬರುವವರು ದೊಡ್ಡ ದೊಡ್ಡ ಗಾಡಿ ತೆಗೆದುಕೊಂಡು ಟೊಯೋಟಾ ಕಾರಲ್ಲಿ ಬರುತ್ತಾರೆ, ರೈತರ ಬಳಿ ಅಷ್ಟೆಲ್ಲಾ ದುಡ್ಡಿದೆಯಾ…? ಪ್ರತಿಭಟನೆ ಮಾಡುತ್ತಿರುವವರು ರೈತರೇ ಅಲ್ಲ, ಇದು ರೈತರ ಹೋರಾಟ ಅಲ್ಲ ದೇಶದ್ರೋಹಿಗಳ ಹೋರಾಟ. ಖಲಿಸ್ತಾನಿಗಳ ಹೋರಾಟ, ರೈತರ ಹೆಸರಿಟ್ಟುಕೊಂಡಿದ್ದಾರೆ. ಅಷ್ಟೇ ಅವರಿಗೆ ಬೇರೆ ದೇಶದವರು ಹಣ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹೋರಾಟಕ್ಕೆ ಬರುವ ರೈತರು ಅನ್ಯಾಯ ಆಗಿದೆ ಅಂತ ಅವರು ಬೆಂಜ್ ಗಾಡಿಯಲ್ಲಿ, ಹೊಸ ಟ್ಯಾಕ್ಟರ್ ತಗೊಂಡು ಬರುವುದು. ಇದು ರೈತರ ಹೋರಾಟ ಅಲ್ಲ ದೇಶದ್ರೋಹಿಗಳ ಹೋರಾಟ. ಹೊಟ್ಟೆಕಿಚ್ಚಿನ ಮಂದಿ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ ಎಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ದ ಕಿಡಿಕಾರಿದರು

ಅನಂತ್ ಕುಮಾರ್ ಹೆಗಡೆ
ಸಿದ್ದರಾಮಯ್ಯನವರನ್ನು ಮಗನೇ ಎನ್ನದೆ ಬೇರೆನು ಅನ್ನಲು ಸಾಧ್ಯ, ಇಸ್ಲಾಂ ಇರುವಲ್ಲಿವರೆಗೆ ಜಗತ್ತಿಗೆ ನೆಮ್ಮದಿಯಿಲ್ಲ: ಅನಂತ್ ಕುಮಾರ್ ಹೆಗಡೆ

ಇದೇ ವೇಳೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಿದ್ದರಾಮುಲ್ಲಾ ಖಾನ್ ಬಳಿ ಹಣವಿಲ್ಲ, ಅಭಿವೃದ್ಧಿ ಯೋಜನೆಗಳಿಗೆ, ಶಾಸಕರಿಗೆ ಕೊಡಲು ಹಣ ಇಲ್ಲ. ಹಿಂದುಳಿದವರು, ಎಸ್​ಸಿ, ಎಸ್​ಟಿ ವರ್ಗದವರಿಗೆ ನೀಡಿದ್ದ 11 ಸಾವಿರ ಕೋಟಿ ರೂ. ನಾಪತ್ತೆಯಾಗಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ, ಮೋದಿ ಸರ್ಕಾರ ದಿವಾಳಿಯಾಗಿಲ್ಲ ಎಂದು ಹೇಳಿದರು.

ರಾಜ್ಯ ಲೂಟಿ ಹೊಡೆದು, ದಿವಾಳಿ ಮಾಡಿ, ಮತ ಪಡೆಯಲು ಹೊರಟಿದ್ದಾರೆ. ಇಷ್ಟು ಹೇಸಿಗೆ, ದರಿದ್ರ ಸರ್ಕಾರ ನಾನೆಲ್ಲೂ ನೋಡಿಲ್ಲ. ನಮಗೆ ಕೇಂದ್ರ ಸರ್ಕಾರ ತೆರಿಗೆ ಹಣ ಕೊಟ್ಟಿಲ್ಲವೆಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ತಮಿಳುನಾಡು, ಆಂಧ್ರ, ಕೇರಳಕ್ಕೆ ಇಲ್ಲದ ವೇದನೆ ಇವರಿಗೆ ಏಕೆ? ಅವರಿಗೆ ಎಲ್ಲವೂ ಸರಿಹೋಗುತ್ತಿದೆ.

ಸಿದ್ದರಾಮುಲ್ಲಾ ಖಾನ್‌ಗೆ ಏಕೆ ತೊಂದರೆ? ಸಿಎಂಗೆ ದುರಹಂಕಾರ, ಓಸಿ ಚೀಟಿ ಬರೆದಂತೆ ಫೈಲ್‌ ಬರೆಯುತ್ತಾರೆ. ಓಸಿ ಚೀಟಿಗಾದರೂ ಬೆಲೆ ಇರುತ್ತೆ, 1 ರೂ. ಕೊಟ್ಟರೆ 80 ರೂ. ಕೊಡುತ್ತಾರೆ. ಸಿಎಂ ಲೆಟರ್‌ಗೆ ಎಷ್ಟು ದುರಂಕಾರದ ಸಹಿ ಹಾಕುತ್ತಾರೆ ಅಂದರೇ, ಆ ಲೆಟರ್ ಕೂಡಾ ನೋಡಬಾರದು ಅಂದೆನಿಸುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com