ಅಯೋಧ್ಯೆಯಲ್ಲಿರೋದು ಬಿಜೆಪಿ ರಾಮ, ನಮಗೆ ಸಿದ್ದರಾಮಯ್ಯನೇ ಶ್ರೀರಾಮ: ಎಚ್.ಆಂಜನೇಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ "ನಮಗೆ ಶ್ರೀರಾಮ". ಅಯೋಧ್ಯೆಯಲ್ಲಿರೋದು ಬಿಜೆಪಿ ರಾಮ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಎಚ್.ಆಂಜನೇಯ ಅವರು ಸೋಮವಾರ ಹೇಳಿದ್ದಾರೆ.
ಆಂಜನೇಯ
ಆಂಜನೇಯ

ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ "ನಮಗೆ ಶ್ರೀರಾಮ". ಅಯೋಧ್ಯೆಯಲ್ಲಿರೋದು ಬಿಜೆಪಿ ರಾಮ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಎಚ್.ಆಂಜನೇಯ ಅವರು ಸೋಮವಾರ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಅವರ ಆಪ್ತ ಆಂಜನೇಯ ಅವರು ಈ ಹೇಳಿಕೆ ನೀಡಿದ್ದಾರೆ.

"ಅಯೋಧ್ಯೆ ಉದ್ಘಾಟನಾ ಸಮಾರಂಭಕ್ಕೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದಿರುವುದು ಒಳ್ಳೆಯ ಬೆಳವಣಿಗೆ. ನಮಗೆ ಸಿಎಂ ಸಿದ್ದರಾಮಯ್ಯ ಅವರೇ ಭಗವಾನ್ ಶ್ರೀರಾಮ. ಅಯೋಧ್ಯೆಯಲ್ಲಿರುವ ರಾಮನನ್ನು ಏಕೆ ಪೂಜಿಸಬೇಕು?" ಎಂದು ಪ್ರಶ್ನಿಸಿದರು.

"ಸಿದ್ದರಾಮಯ್ಯನವರು ತಮ್ಮ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿರುವ ದೇವಸ್ಥಾನದಲ್ಲಿ ಶ್ರೀರಾಮನನ್ನು ಪೂಜಿಸಲಿದ್ದಾರೆ. ಅಯೋಧ್ಯೆಯಲ್ಲಿರೋದು ಬಿಜೆಪಿಯ ರಾಮ.  ಹೀಗಾಗಿ ಬಿಜೆಪಿಯವರನ್ನ ಕರೆಸಿಕೊಂಡು ಅಲ್ಲಿ ಭಜನೆ ಮಾಡುತ್ತಾರೆ. ಆದರೆ ನಮ್ಮ ರಾಮ ಎಲ್ಲಾ ಕಡೆ ಇದ್ದಾನೆ, ನಮ್ಮ ಎದೆಯಲ್ಲಿಯೂ ಇದ್ದಾನೆ. ನಾನು ಆಂಜನೇಯ, ಗೊತ್ತಲ್ವಾ ಆಂಜನೇಯ ಏನು ಮಾಡಿದ ಅಂತಾ? ಎಂದು ಕುಟುಕಿದ್ದಾರೆ.

"ನಮ್ಮ ಸಮುದಾಯದ ಜನ ರಾಮ, ಹನುಮಂತ ಎಂದು ಹೆಸರಿಟ್ಟುಕೊಳ್ಳುತ್ತಾರೆ. ಈ ದೇವರುಗಳು ನಮ್ಮ ಸಮುದಾಯಕ್ಕೆ ಸೇರಿದವರು. ಆದರೆ ಬಿಜೆಪಿ ಧರ್ಮಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಧರ್ಮದ ವಿರುದ್ಧ ಹೇಳಿಕೆ ನೀಡಿ ಮತ ಪಡೆಯುವ ಭ್ರಮೆಯಲ್ಲಿದ್ದಾರೆ" ಎಂದು ಕಾಂಗ್ರೆಸ್ ಮುಖಂಡ ವಾಗ್ದಾಳಿ ನಡೆಸಿದರು.

"ನಾವೆಲ್ಲರೂ ಹಿಂದೂಗಳು, ಬಿಜೆಪಿ ಹಿಂದೂ ಧರ್ಮವನ್ನು ಕೊಂಡುಕೊಂಡಿಲ್ಲ. ಅವರು ತಾರತಮ್ಯ ಮತ್ತು ಶೋಷಣೆಗೆ ಪರಿಹಾರ ನೀಡಿದ್ದಾರೆಯೇ?" ಎಂದು ಪ್ರಶ್ನಿಸಿದರು.

"ದೇವಸ್ಥಾನಗಳ ನಿರ್ಮಾಣ ನಿಲ್ಲಬೇಕು ಮತ್ತು ಮನೆ ನಿರ್ಮಾಣ ಮತ್ತು ಆರೋಗ್ಯಕರ ಮನಸ್ಥಿತಿಯತ್ತ ಗಮನ ಹರಿಸಬೇಕು. ಜನರು ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅವರಿಗೆ ಮನೆಗಳನ್ನು ನಿರ್ಮಿಸಿ ರಾಮಮಂದಿರಗಳೆಂದು ಹೆಸರಿಡಿ. ಶ್ರೀರಾಮ ನಿಮ್ಮನ್ನು ಆಶೀರ್ವದಿಸುತ್ತಾನೆ. ಶ್ರೀರಾಮನನ್ನು ಮತಕ್ಕಾಗಿ ಬಳಸಿಕೊಳ್ಳಬೇಡಿ" ಎಂದು ಬಿಜೆಪಿ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com