ತನ್ನ ಪರಂಪರೆಯಂತೆ ದ್ವೇಷ ರಾಜಕಾರಣಕ್ಕೆ ಕಾಂಗ್ರೆಸ್ ಕೈ ಹಾಕಿದೆ: ಬಿಜೆಪಿ

ರಾಮಭಕ್ತರನ್ನು ವಿನಾಕಾರಣ ಬಂಧಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡ ಮೇಲೆಯೂ ಕಾಂಗ್ರೆಸ್  ತನ್ನ ಪರಂಪರೆಯಂತೆ ದ್ವೇಷ ರಾಜಕಾರಣಕ್ಕೆ ಕೈ ಹಾಕಿದೆ ಎಂದು ಬಿಜೆಪಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ರಾಮಭಕ್ತರನ್ನು ವಿನಾಕಾರಣ ಬಂಧಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡ ಮೇಲೆಯೂ ಕಾಂಗ್ರೆಸ್ ತನ್ನ ಪರಂಪರೆಯಂತೆ ದ್ವೇಷ ರಾಜಕಾರಣಕ್ಕೆ ಕೈ ಹಾಕಿದೆ ಎಂದು ಬಿಜೆಪಿ ಹೇಳಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೊಬ್ಬ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ರಾಜಕೀಯ ದ್ವೇಷ ತೀರಿಸಲು ಕಾನೂನು ವ್ಯವಸ್ಥೆಯಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ರಾಮಭಕ್ತರನ್ನು ವಿನಾಕಾರಣ ಬಂಧಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡ ಮೇಲೆಯೂ ಕಾಂಗ್ರೆಸ್ ತನ್ನ ಪರಂಪರೆಯಂತೆ ದ್ವೇಷ ರಾಜಕಾರಣಕ್ಕೆ ಕೈ ಹಾಕಿದೆ.

ಮುಖ್ಯಮಂತ್ರಿಗಳನ್ನು ತೃಪ್ತಿಪಡಿಸಲು ಪೊಲೀಸ್ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಲಾಗುತ್ತಿದ್ದು ಗೃಹಸಚಿವ ಪರಮೇಶ್ವರ್ ಅವರೂ ಕೈಕಟ್ಟಿ ಕೂತಿದ್ದಾರೆಂದು ಹೇಳಿದೆ.

ರಾಮ ಮಂದಿರಕ್ಕೆ ಹೋಗಬೇಡಿ, ರಾಮ ನಾಮ ಪಠಿಸಲೇ ಬೇಡಿ, ರಾಮನ ಮಂತ್ರಾಕ್ಷತೆ ಸ್ವೀಕರಿಸಬೇಡಿ, ರಾಮಭಕ್ತರನ್ನು ಬಂಧಿಸಿರಿ ಇದು ಕಾಂಗ್ರೆಸ್ ರಾಮ ವಿರೋಧಿ ನಿಲುವುಗಳಾಗಿದ್ದು, ಮಂದಿರ, ದೇವಸ್ಥಾನಕ್ಕೆ ಹೋಗಬೇಡಿ ಎಂದು ಹಿಂದೂಗಳ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್ ಸರ್ಕಾರ ನಾಳೆ ಈ ಆದೇಶಗಳನ್ನು ಹೊರಡಿಸುವುದಕ್ಕೂ ಹೇಸುವುದಿಲ್ಲ ಎಂದು ಕಿಡಿಕಾರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com