ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆಗೂ ಡೋಂಟ್ ಕೇರ್: ರಾಜ್ಯ ನಾಯಕರುಗಳಿಗೆ ಮಲ್ಲಿಕಾರ್ಜುನ ಖರ್ಗೆ ಲಗಾಮು!

ವಿರೋಧ ಪಕ್ಷಗಳ ಒಕ್ಕೂಟವಾದ I.N.D.I.A ಬಣದ ನಾಯಕರಗಳನ್ನು ಒಟ್ಟಿಗೆ ಇಡುವ ರಾಷ್ಟ್ರೀಯ ಮಟ್ಟದಲ್ಲಿ ಸವಾಲನ್ನು ನಿಭಾಯಿಸುವುದರ ಜೊತೆಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತೊಂದು ತಲೆನೋವು ಎದುರಾಗಿದೆ.
ಕಾಂಗ್ರೆಸ್ ನಾಯಕರಿಗೆ ಖರ್ಗೆ ಲಗಾಮು
ಕಾಂಗ್ರೆಸ್ ನಾಯಕರಿಗೆ ಖರ್ಗೆ ಲಗಾಮು

ಬೆಂಗಳೂರು: ವಿರೋಧ ಪಕ್ಷಗಳ ಒಕ್ಕೂಟವಾದ I.N.D.I.A ಬಣದ ನಾಯಕರಗಳನ್ನು ಒಟ್ಟಿಗೆ ಇಡುವ ರಾಷ್ಟ್ರೀಯ ಮಟ್ಟದಲ್ಲಿ ಸವಾಲನ್ನು ನಿಭಾಯಿಸುವುದರ ಜೊತೆಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತೊಂದು ತಲೆನೋವು ಎದುರಾಗಿದೆ.

ಹೈಕಮಾಂಡ್ ವಿರುದ್ಧ ಸದಾ ಗುಟುರು ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರ ಬಾಯಿಗೆ ಲಗಾಮು ಹಾಕುವ ಕೆಲಸವನ್ನು  ಕೂಡ ಮಾಡಬೇಕಾಗಿದೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಈ ನಾಯಕರುಗಳ ಬಾಯಿಗೆ ಬೀಗ ಹಾಕುವುದು ಖರ್ಗೆ ಮುಂದಿರುವ ಸವಾಲಾಗಿದೆ.

ಪಕ್ಷದ ಹಿತಾಸಕ್ತಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡಿ ಹೈಕಮಾಂಡ್  ದುರ್ಬಲಗೊಳಿಸಲು ಕೆಲವು ರಾಜ್ಯ ನಾಯಕರು ಮತ್ತು ಸಚಿವರು ಪ್ರಯತ್ನಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮರು ಆಯ್ಕೆ ಮಾಡುವಂತೆ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ತಮ್ಮ ಲಿಂಗಾಯತ ಸಮುದಾಯಕ್ಕೆ ಕರೆ ನೀಡಿದ್ದಾರೆ, ಇದು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಿತ್ರ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಂಡಳಿ ಮತ್ತು ನಿಗಮಗಳಿಗೆ ಕೆಲವು ನಾಯಕರನ್ನು ನೇಮಿಸುವ ಸಂಬಂಧ ಹೈಕಮಾಂಡ್ ನಿರ್ಧಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿ, ಸಚಿವರು ಅವರ ಗುಲಾಮರಲ್ಲ ಎಂದು ಹರಿಹಾಯ್ದಿದ್ದರು.

ಇದರ ಜೊತೆಗೆ ರಾಜಣ್ಣ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಸೇರಿ ಹೆಚ್ಚಿನ ಉಪಮುಖ್ಯಮಂತ್ರಿ ಸ್ಥಾನಗಳಿಗೆ ಬೇಡಿಕೆ ಇಟ್ಟಾಗ, ಖರ್ಗೆ ಅವರು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ವರದಿಯಾಗಿದೆ. ಆದರೆ ರಾಜಣ್ಣ ಯಾವುದಕ್ಕೂ ಕೇರ್ ಮಾಡದೆ ತಮ್ಮ ಆಟಾಟೋಪ ಮುಂದುವರಿಸಿದ್ದಾರೆ. ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಹೈಕಮಾಂಡ್ ಸಚಿವರನ್ನು ಕಡೆಗಣಿಸಿದರೆ, ಅವರ ಗೆಲುವಿನ ಜವಾಬ್ದಾರಿಯನ್ನು ಸಹ ಹೈಕಮಾಂಡ್ ಹೊರಬೇಕು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಬೆಂಬಲಿಗರು ಐದು ವರ್ಷಗಳ ಅವಧಿಗೆ ಸಿಎಂ ಆಗಿ ಮುಂದುವರಿಯಲಿ ಎಂದು ಆಶಿಸಿದ್ದು, ಪಕ್ಷದ ಸಾಧನೆಯನ್ನು ಲೆಕ್ಕಿಸದೆ ಹೈಕಮಾಂಡ್ ಅನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು  ಹೆಸರು ಬಹಿರಂಗ ಪಡಿಸದ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ರಾಜಣ್ಣ ಸೇರಿದಂತೆ ಪಕ್ಷಾತೀತವಾಗಿ ಹೇಳಿಕೆ ನೀಡುತ್ತಿರುವವರಿಗೆ ನೋಟಿಸ್ ನೀಡಿ ಇತರರಿಗೆ ಸಂದೇಶ ರವಾನಿಸಬೇಕು ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜಣ್ಣ ಅವರೊಂದಿಗೆ ಮಾತನಾಡಿ, ಹೈಕಮಾಂಡ್ ವಿರುದ್ಧ ಹೇಳಿಕೆ ನೀಡದಂತೆ ಮನವಿ ಮಾಡಿದ್ದಾರೆ, ಆದರೆ ರಾಜಣ್ಣ ಮತ್ತು ಇತರ ಸಚಿವರಿಗೆ ಏಕೆ ನೋಟಿಸ್ ಜಾರಿ ಮಾಡುತ್ತಿಲ್ಲ ಮತ್ತು ಏಕೆ ಮನವಿ ಮಾಡಲಾಗುತ್ತಿದೆ?" ಮತ್ತೊಬ್ಬ ನಾಯಕ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಮಾತನಾಡುವ ವೇಳೆ ಸದಾ ಜಾಗರೂಕರಾಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಕೂಡ ಇತ್ತೀಚೆಗೆ ಮಂಡಳಿ ಮತ್ತು ನಿಗಮಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಸಹಕಾರ ಸಚಿವ ಕೆ ಎನ್ ರಾಜಣ್ಣ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ ಎಂದು ಕಾಂಗ್ರೆಸ್ ಕೇಂದ್ರ ನಾಯಕತ್ವ ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. ಮಂಡಳಿ, ನಿಗಮಗಳ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬವನ್ನು ಪ್ರಶ್ನಿಸಿದ ರಾಜಣ್ಣ ಅವರಿಗೆ ಹೈಕಮಾಂಡ್ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ನಾವು ಹೈಕಮಾಂಡ್ ಗುಲಾಮರಲ್ಲ ಎಂದು ರಾಜಣ್ಣ ನೀಡಿದ್ದ ಹೇಳಿಕೆಗಳನ್ನು ನೀಡದಂತೆ ಸಚಿವರಿಗೆ ಕೇಂದ್ರ ನಾಯಕತ್ವ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಬೆಂಬಲಿಸುವಂತೆ ಸಾರ್ವಜನಿಕವಾಗಿ ಮನವಿ ಮಾಡಿದ್ದಕ್ಕೆ ಶಿವಶಂಕರಪ್ಪ ಅವರಿಗೆ ಕೇಂದ್ರ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com