ಬಿಜೆಪಿಯಿಂದ ಅಹೋರಾತ್ರಿ ಧರಣಿ: ಸದನದಲ್ಲಿ ಶಾಸಕರಿಂದ ಹಾಡು, ಭಜನೆ!

ವಿಧಾನಸೌಧದ ಕಾರಿಡಾರ್​ಗಳಲ್ಲಿ ಕುಳಿತು ಹಾಡು, ಭಜನೆ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿದರು. ವಿಪಕ್ಷ ನಾಯಕ ಆರ್​ ಅಶೋಕ ವಾದ್ಯ ಮತ್ತು ಸಿಟಿ ರವಿ ತಾಳಕ್ಕೆ ಶಾಸಕ ಪ್ರಭು ಚವ್ಹಾಣ್​ ಹೆಜ್ಜೆ ಹಾಕಿದರು.
BJP legislators with Karnataka party chief BY Vijayendra
ಬಿಜೆಪಿಯಿಂದ ಅಹೋರಾತ್ರಿ ಧರಣಿ: ಹಾಡು, ಭಜನೆ ಮೂಲಕ ಸರ್ಕಾರದ ನಡೆ ಖಂಡನೆ(Photo | Express)
Updated on

ಬೆಂಗಳೂರು: ಸದನದಲ್ಲಿ ಮುಡಾ ಹಗರಣದ ಚರ್ಚೆಗೆ ಅವಕಾಶ ನಿರಾಕರಣೆಯಿಂದ ಕೆರಳಿರುವ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕಲಾಪವನ್ನು ಗುರುವಾರಕ್ಕೆ ಮುಂದೂಡಿದ್ದರೂ ರಾತ್ರಿಯಿಡೀ ಸದನದಲ್ಲಿಯೇ ತಂಗಿರುವ ಶಾಸಕರು, ಭಿನ್ನ, ವಿಭಿನ್ನವಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.

ವಿಧಾನಸೌಧದ ಕಾರಿಡಾರ್​ಗಳಲ್ಲಿ ಕುಳಿತು ಹಾಡು, ಭಜನೆ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿದರು. ವಿಪಕ್ಷ ನಾಯಕ ಆರ್​ ಅಶೋಕ ವಾದ್ಯ ಮತ್ತು ಸಿಟಿ ರವಿ ತಾಳಕ್ಕೆ ಶಾಸಕ ಪ್ರಭು ಚವ್ಹಾಣ್​ ಹೆಜ್ಜೆ ಹಾಕಿದರು. ಇನ್ನು ಭಜನೆ ಮೂಲಕವೇ ಕಾಂಗ್ರೆಸ್ ಸರ್ಕಾರಕ್ಕೆ ಲೆವಡಿ ಮಾಡಿದ ಶಾಸಕರು, ‘ಸಮಾಜವಾದ ಅಂತಾರೆ ಮಜಾವನ್ನೇ ಮಾಡ್ತಾರೆ. ಸಮಾಜವಾದ ಅಂತಾರೆ ದಲಿತರ ಹಣವನ್ನು ನುಂಗ್ತಾರೆ ಎಂದು ಕಾಂಗ್ರೆಸ್​ ಸರ್ಕಾರಕ್ಕೆ ಟಾಂಗ್​ ಕೊಟ್ಟರು.

ಇನ್ನು ಧರಣಿ ನಿರತ ಬಿಜೆಪಿ ಸದಸ್ಯರನ್ನು ಮಾತನಾಡಿಸಲು ಆಗಮಿಸಿದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಊಟದ ವ್ಯವಸ್ಥೆಯನ್ನು ಮಾಡುವ ಬಗ್ಗೆ ಮಾತನಾಡಿದರು. ಆದರೆ ನಾವು ಹಗರಣದ ಹಣದ ಊಟವನ್ನು ಮಾಡುವುದಿಲ್ಲ ಎಂದು ಆರ್ ಅಶೋಕ್ ಹೇಳಿದರು. ಸ್ವಂತ ಖರ್ಚಿನಲ್ಲಿಯೇ ಊಟ ತರಿಸಿಕೊಂಡು ಊಟ ಮಾಡಿದರು. ಬಳಿಕ ಸೋಫಾ, ನೆಲದ ಮೇಲೆ ಮಲಗಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com