
ಬೆಂಗಳೂರು: ಲೋಕಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿಎನ್. ಮಂಜುನಾಥ್ ಕಾಂಗ್ರೆಸ್ಸಿನ ಡಿ.ಕೆ. ಸುರೇಶ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಾ.ಸಿ.ಎನ್. ಮಂಜುನಾಥ್ 8,82,186 ಮತಗಳನ್ನು ಪಡೆದಿದ್ದು, ಡಿ.ಕೆ. ಸುರೇಶ್ 6,82,207 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಡಾ.ಸಿ.ಎನ್. ಮಂಜುನಾಥ್ 1,99,979 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇನ್ನೂ ತಮ್ಮ ಗೆಲುವಿನ ಕುರಿತು ಮಾತನಾಡಿರುವ ಡಾ.ಸಿ.ಎನ್ ಮಂಜುನಾಥ್, ಕಳೆದ 40 ವರ್ಷಗಳಿಂದ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಹೃದ್ರೋಗ ಪರಿಣಿತನಾಗಿ ಲಕ್ಷಾಂತರ ಜನಕ್ಕೆ ಚಿಕಿತ್ಸೆ ಒದಗಿಸಿದ್ದು ನೆರವಿಗೆ ಬಂದಿದೆ. ಗ್ರಾಮಾಂತರ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿ ತನ್ನಿಂದ ಚಿಕಿತ್ಸೆ ಪಡೆದ 15-20 ಜನ ಸಿಗುತ್ತಿದ್ದರು, ಅವರಲ್ಲಿ ಡಾಕ್ಟರ್ ಅನ್ನು ಗೆಲ್ಲಿಸಬೇಕೆಂಬ ಆಸೆಯಿತ್ತು ಮತ್ತು ಅದು ಮತಗಳಲ್ಲಿ ಪರಿವರ್ತನೆಯಾಯಿತು.
Advertisement