
ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಧಾರವಾಡ ಕ್ಷೇತ್ರದಲ್ಲೇ ಸತತ ಐದನೇ ಬಾರಿಗೆ ಗೆದ್ದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ದಾಖಲೆ ಬರೆದಿದ್ದಾರೆ.
ಇದtವರೆಗೆ ನಾಲ್ಕು ಬಾರಿ ಮಾತ್ರ ಸತತವಾಗಿ ಗೆದ್ದಿದ್ದ ಉದಾಹರಣೆ ಇತ್ತು. ಆದರೆ, 5ನೇ ಬಾರಿಗೆ ಗೆಲುವ ಸಾಧಿಸುವ ಮೂಲಕ ಸ ದಾಖಲೆ ಬರೆದಿದ್ದಾರೆ. 80 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ವಿರುದ್ಧ ಜೋಶಿ ಜಯಭೇರಿ ಭಾರಿಸಿದ್ದಾರೆ.
ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರ ವಿರುದ್ಧ 89,302 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ವಿನೋದ್ ಅವರಿಗೆ ಒಟ್ಟಾರೆ 5,84,923 ಮತಗಳು ಸಿಕ್ಕಿದ್ದರೆ, ಜೋಶಿ ಅವರಿಗೆ 6,74,225 ಮತಗಳು ಲಭಿಸಿವೆ.
ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿಯವರು 6,84,837 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರು 4,79,765 ಮತಗಳನ್ನು ಪಡೆದಿದ್ದರು. ಪ್ರಹ್ಲಾದ್ ಜೋಶಿಯವರು ವಿನಯ್ ಕುಲಕರ್ಣಿ ಅವರನ್ನು ಎರಡು ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.
ಇದಕ್ಕೂ ಮುನ್ನ 2014ರ ಲೋಕಸಭಾ ಚುನಾವಣೆಯಲ್ಲೂ ಸಂಸದ ಪ್ರಹ್ಲಾದ್ ಜೋಶಿಯವರೇ ಗೆಲವು ಸಾಧಿಸಿದ್ದರು. ಈ ಚುನಾವಣೆಯಲ್ಲೂ ಪ್ರಹ್ಲಾದ್ ಜೋಶಿಯವರ ವಿರುದ್ಧ ವಿನಯ್ ಕುಲಕರ್ಣಿಯವರು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿಯವರು 5,43,395 ಮತಗಳನ್ನು ಪಡೆದಿದ್ದರು. ಇನ್ನು ವಿನಯ್ ಕುಲಕರ್ಣಿಯವರು 4,31,738 ಮತಗಳನ್ನು ಪಡೆದಿದ್ದರು.
ಧಾರವಾಡ ಲೋಕಸಭಾ ಕ್ಷೇತ್ರ 1996ರ ಲೋಕಸಭಾ ಚುನಾವಣೆವರೆಗೂ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. 1996ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಕೋಟೆ ಮೇಲೆ ಮೊದಲ ಬಾರಿಗೆ ತನ್ನ ಬಾವುಟ ಹಾರಿಸಿತು. ಅಲ್ಲಿಂದ ಇಲ್ಲಿಯವರೆಗೂ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಾಡುತ್ತಿದ್ದು, ಇದೀಗ ಬಿಜೆಪಿಯ ಭದ್ರಕೋಟೆಯಾಗಿದೆ.
Advertisement