ಮೋದಿ ಸಂಪುಟದಲ್ಲಿ ಜಾತಿ ಸಮೀಕರಣ: ಒಕ್ಕಲಿಗ, ಬ್ರಾಹ್ಮಣರಿಗೆ ತಲಾ 2 ಸ್ಥಾನ; ಶೆಟ್ಟರ್-ಬೊಮ್ಮಾಯಿಗೆ 'ಮಿಸ್' ಆಗಲು ಏನು ಕಾರಣ?

ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ರಾಜ್ಯದ ಐವರು ಸಂಸದರಿಗೆ ಮಂತ್ರಿ ಭಾಗ್ಯ ದೊರಕಿದೆ. ರಾಜ್ಯದಿಂದ 19 ಸಂಸದರನ್ನು ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ ಹಿನ್ನೆಲೆಯಲ್ಲಿ ಐದು ಮಂದಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.
ಬಸವರಾಜ ಬೊಮ್ಮಾಯಿ- ಜಗದೀಶ್ ಶೆಟ್ಟರ್
ಬಸವರಾಜ ಬೊಮ್ಮಾಯಿ- ಜಗದೀಶ್ ಶೆಟ್ಟರ್
Updated on

ಬೆಂಗಳೂರು: ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ರಾಜ್ಯದ ಐವರು ಸಂಸದರಿಗೆ ಮಂತ್ರಿ ಭಾಗ್ಯ ದೊರಕಿದೆ. ರಾಜ್ಯದಿಂದ 19 ಸಂಸದರನ್ನು ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ಶೋಭಾ ಕರಂದ್ಲಾಜೆ ಮತ್ತು ನಿರ್ಮಲಾ ಸೀತರಾಮನ್ ಅವರಿಗೆ ಸಚಿವ ಸ್ಥಾನ ದೊರೆತಿದೆ. ನಿರ್ಮಲಾ, ಪ್ರಹ್ಲಾದ್ ಜೋಶಿ ಮತ್ತು ಕುಮಾರಸ್ವಾಮಿ ಕ್ಯಾಬಿನೆಟ್ ದರ್ಜೆ ಹೊಂದಿದ್ದರೆ, ಇನ್ನಿಬ್ಬರು ರಾಜ್ಯ ಸಚಿವರಾಗಿದ್ದಾರೆ. ಕುತೂಹಲಕಾರಿಯಾಗಿ, ಭಾನುವಾರ ಸಂಜೆ ನವದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಕೆಲವು ಸಂಸದರಲ್ಲಿ ಕುಮಾರಸ್ವಾಮಿ ಸೇರಿದ್ದಾರೆ. 293 ಎನ್‌ಡಿಎ ಸಂಸದರ ಪೈಕಿ 19 ಸಂಸದರ ಕೊಡುಗೆ ನೀಡಿರುವ ರಾಜ್ಯದ ಪಾಲು ಶೇ.6ಕ್ಕಿಂತ ಹೆಚ್ಚಿದೆ. ಮೋದಿ ಸಂಪುಟದಲ್ಲಿ 72 ಸಚಿವರಿದ್ದಾರೆ ಎಂದು ಪರಿಗಣಿಸಿದರೆ ಸಚಿವಾಲಯಗಳ ಸಂಖ್ಯೆಯೂ ಅದಕ್ಕಿಂತ ಹೆಚ್ಚಿದೆ.

ಈ ಐವರು ಸಚಿವರಲ್ಲೂ ಹಳೆ ಮೈಸೂರು ಭಾಗಕ್ಕೆ ಹೆಚ್ಚು ಪ್ರಾತಿನಿಧ್ಯ ಸಿಕ್ಕಿದೆ. ಕುಮಾರಸ್ವಾಮಿ ಅವರು ಮಂಡ್ಯ, ಶೋಭಾ ಬೆಂಗಳೂರು ಉತ್ತರ ಮತ್ತು ಸೋಮಣ್ಣ ತುಮಕೂರು ಪ್ರತಿನಿಧಿಸುತ್ತಿದ್ದಾರೆ. ಮತ್ತೆ ಪ್ರಹ್ಲಾದ ಜೋಶಿ ಉತ್ತರ ಕರ್ನಾಟಕದ ಏಕೈಕ ಸಂಸದರಾಗಿದ್ದಾರೆ. ಈ ಭಾಗಗಳಲ್ಲಿ ಬಿಜೆಪಿಯ ನೀರಸ ಪ್ರದರ್ಶನವೇ ಇದಕ್ಕೆ ಕಾರಣ. ಕರಾವಳಿ ಭಾಗದಿಂದ ಕೇಸರಿ ಪಕ್ಷದ ಸದಸ್ಯರು ಗೆದ್ದಿದ್ದರೂ, ಅವರೆಲ್ಲರೂ ಮೊದಲ ಬಾರಿಗೆ ಸಂಸದರಾಗಿದ್ದು, ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ.

ಬಸವರಾಜ ಬೊಮ್ಮಾಯಿ- ಜಗದೀಶ್ ಶೆಟ್ಟರ್
BJP ಜೊತೆಗಿನ ಮೈತ್ರಿ ಸದ್ಯಕ್ಕೆ ನನಗೆ ಮುಖ್ಯ ಅಲ್ಲ: ಎಚ್ ಡಿ ಕುಮಾರಸ್ವಾಮಿ

ಸಂಘಪರಿವಾರದ ಹಿನ್ನೆಲೆಯುಳ್ಳ ಹಾಗೂ ಐದನೇ ಬಾರಿ ಸಂಸದರಾಗಿರುವ ಜೋಶಿ ಅವರು ಹಿಂದಿನ ಸರಕಾರದಲ್ಲಿ ಕಾನೂನು ಮತ್ತು ಸಂಸದೀಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಮೊದಲ ಮಹಿಳಾ ಸಂಸದೆ ಶೋಭಾ ಅವರು ರಾಜ್ಯ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು.

ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿದ್ದ ಸೋಮಣ್ಣ ಅವರು 2009ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸೋಲು ಕಂಡಿದ್ದ ಅವರು, ಈ ಬಾರಿ ತುಮಕೂರಿನಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರ ಪಕ್ಷ ನಿಷ್ಠೆಗೆ ಸಚಿವ ಸ್ಥಾನ ಸಿಕ್ಕಿದೆ.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಕುಮಾರಸ್ವಾಮಿ 2006ರಲ್ಲಿ ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಆದರೆ ಆಗ ಎರಡು ಪಕ್ಷಗಳ ನಡುವಿನ ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ, ಅವರು 2007 ರಲ್ಲಿ ಬಿಜೆಪಿಯ ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಲು ನಿರಾಕರಿಸಿ, ಮೈತ್ರಿ ಕೊನೆಗೊಳಿಸಿದರು. ಅದಾದ ನಂತರ ಜೆಡಿಎಸ್ ನಿಂದ ಬಿಜೆಪಿ ಅಂತರ ಕಾಯ್ದುಕೊಂಡಿತ್ತು. ಆದರೆ 2023 ರ ವಿಧಾನಸಭಾ ಚುನಾವಣೆಯು ಜೆಡಿಎಸ್ ಪಕ್ಷಕ್ಕೆ ಎಚ್ಚರಿಕೆಯ ಗಂಟೆಯಾಗಿತ್ತು, ಏಕೆಂದರೆ ಜೆಡಿಎಸ್ ಕೇವಲ 19 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಸಂಪೂರ್ಣ ಅವನತಿ ಹೊಂದುವ ಭಯದಿಂದ ಲೋಕಸಭೆ ಚುನಾವಣೆಗು ಮುನ್ನ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು ಮತ್ತು ಕುಮಾರಸ್ವಾಮಿ ಹಳೇ ಮೈಸೂರು ಪ್ರದೇಶದಲ್ಲಿ ಬಿಜೆಪಿಗೆ ಉತ್ತಮ ಸಂಖ್ಯೆಯ ಸ್ಥಾನಗಳನ್ನು ಪಡೆಯಲು ಸಹಾಯ ಮಾಡಿದರು.

ಬಸವರಾಜ ಬೊಮ್ಮಾಯಿ- ಜಗದೀಶ್ ಶೆಟ್ಟರ್
Modi 3.0: ಕೇಂದ್ರ ಸಚಿವರಾಗಿ ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಪ್ರಮಾಣ

ಜಾತಿ ಸಮೀಕರಣವನ್ನು ಮುರಿದು, ಇಬ್ಬರು ಬ್ರಾಹ್ಮಣರು (ಜೋಶಿ ಮತ್ತು ನಿರ್ಮಲಾ), ಇಬ್ಬರು ಒಕ್ಕಲಿಗರು (ಕುಮಾರಸ್ವಾಮಿ ಮತ್ತು ಶೋಭಾ) ಮತ್ತು ಒಬ್ಬ ಲಿಂಗಾಯತ (ಸೋಮಣ್ಣ) ಮೋದಿ ಮಂತ್ರಿ ಮಂಡಲಕ್ಕೆ ಬಂದಿದ್ದಾರೆ.

ಇಬ್ಬರು ಒಕ್ಕಲಿಗರಿಗೆ ಈ ಗೌರವ ನೀಡಲಾಗಿದ್ದರೂ ಶೋಭಾ ಮಾತ್ರ ಮೂಲತಃ ಬಿಜೆಪಿಯವರು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಏಕೆ ಸೇರಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ನಾಯಕರೊಬ್ಬರು, ‘ಇಬ್ಬರೂ ಮಾಜಿ ಸಿಎಂ ಆಗಿರುವುದರಿಂದ ರಾಜ್ಯ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com