BJP ಗೆಲ್ಲಿಸಲು ಮಾತ್ರ ಲಿಂಗಾಯತರು ಬೇಕೆ? ಮೋದಿ ಸಂಪುಟದಲ್ಲಿ ಸೋಮಣ್ಣಗೆ ರಾಜ್ಯ ಖಾತೆ ನೀಡಿದ್ದಕ್ಕೆ ಸಮುದಾಯ ಆಕ್ರೋಶ!

ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ್ದಾರೆ. ಕೇಂದ್ರ ಸರ್ಕಾರ ರಚನೆಯಲ್ಲಿ ಲಿಂಗಾಯತರು ಬದಿಗೆ ಸರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಿಜೆಪಿ ನಾಯಕ ವಿ ಸೋಮಣ್ಣ
ಬಿಜೆಪಿ ನಾಯಕ ವಿ ಸೋಮಣ್ಣ

ಬೆಂಗಳೂರು: ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ್ದಾರೆ. ಕೇಂದ್ರ ಸರ್ಕಾರ ರಚನೆಯಲ್ಲಿ ಲಿಂಗಾಯತರು ಬದಿಗೆ ಸರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕರ್ನಾಟಕದಲ್ಲಿ ಕಳೆದ 20 ವರ್ಷಗಳಿಂದ ಲಿಂಗಾಯತ ಸಮುದಾಯ ಬಿಜೆಪಿಯನ್ನು ಬೆಂಬಲಿಸುತ್ತಿದ್ದರೂ ಇಲ್ಲಿಯವರೆಗೆ ಒಂದೇ ಒಂದು ಕ್ಯಾಬಿನೆಟ್ ದರ್ಜೆಯ ಸ್ಥಾನವನ್ನು ನೀಡಿಲ್ಲ ಎಂದು ಮುಖಂಡರು ಹೇಳಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಲಿಂಗಾಯತ ವಿ ಸೋಮಣ್ಣ ಅವರನ್ನು ರೈಲ್ವೆ ಖಾತೆ ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ.

ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಮಾತನಾಡಿ, ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ಮತ್ತು ಪ್ರಲ್ಹಾದ್ ಜೋಶಿ ಇಬ್ಬರು ಬ್ರಾಹ್ಮಣರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ, ಆದರೆ ಲಿಂಗಾಯತರಿಗೆ ಕೇವಲ ಒಂದು ಸ್ಥಾನ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಕೆಲಸವಿರುವಾಗ ಲಿಂಗಾಯತರು ಬೇಕು, ಕೇಶವ ಕೃಪಾ (ಬಿಜೆಪಿ ಕೇಂದ್ರ ಕಚೇರಿ) ಫಲವನ್ನು ಕೊಯ್ಲು ಮಾಡಿ ಆನಂದಿಸುತ್ತದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ. ಮಾಜಿ ಅಧಿಕಾರಿ ಮತ್ತು ಜಾಗತಿಕ ಲಿಂಗಾಯತ ಚಳವಳಿಯ ಮುಖ್ಯಸ್ಥ ಎಸ್.ಎಂ.ಜಾಮದಾರ ಮಾತನಾಡಿ, ಕೇಂದ್ರ ಸಂಪುಟದಲ್ಲಿ ಲಿಂಗಾಯತರಿಗೆ ಪ್ರಾತಿನಿಧ್ಯ ಕಡಿಮೆಯಾಗಿದೆ ಮತ್ತು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅದಕ್ಕೆ ಬೆಲೆ ತೆತ್ತಲಿದೆ ಎಂದಿದ್ದಾರೆ.

ಬಿಜೆಪಿ ನಾಯಕ ವಿ ಸೋಮಣ್ಣ
ನಿಷ್ಠರನ್ನು ಪಕ್ಷ ನಿರಾಸೆಗೊಳಿಸುವುದಿಲ್ಲ ಎಂಬ ಸಂದೇಶ ಇದು: ಮೋದಿ ಸಂಪುಟದ ಏಕೈಕ ಲಿಂಗಾಯತ ಸಚಿವ ವಿ ಸೋಮಣ್ಣ (ಸಂದರ್ಶನ)

ಬೆಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ಮಾಜಿ ಎಚ್‌ಒಡಿ, ರಾಜಕೀಯ ವಿಶ್ಲೇಷಕ ಪ್ರೊ.ಪಿ.ಎಸ್.ಜಯರಾಮು ಮಾತನಾಡಿ, ಈ ಸರ್ಕಾರಕ್ಕೆ ಮಿತ್ರ ಪಕ್ಷಗಳು ಇರುವುದರಿಂದ ಇದು ಅನಿವಾರ್ಯವಾಗಿದೆ. ನಿಸ್ಸಂಶಯವಾಗಿ ಅವರು ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್, ದೆಹಲಿ ಮತ್ತು ಹರಿಯಾಣದಂತಹ ಚುನಾವಣೆಗೆ ಹೋಗುವ ರಾಜ್ಯಗಳಿಂದ ಹೆಚ್ಚಿನ ಅವಕಾಶಗಳನ್ನು ಪಡೆಯಲು ಬಯಸುತ್ತಾರೆ ಎಂದಿದ್ದಾರೆ.

ಮತ್ತೊಬ್ಬ ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಮಾತನಾಡಿ, 'ಈ ಬಾರಿ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿರುವುದರಿಂದ ತಮ್ಮ ನಿರೀಕ್ಷೆ ಹೆಚ್ಚಿತ್ತು. ತಮ್ಮನ್ನು ಸತತವಾಗಿ ಬಿಜೆಪಿ ಕೇಂದ್ರ ಸರ್ಕಾರಗಳು ಬಳಸಿಕೊಂಡು ನಂತರ ನಿರ್ಲ್ಯಕ್ಷಿಸಿದ್ದಾರೆ ಎಂದು ಲಿಂಗಾಯತ ಸಮುದಾಯದ ಜನರು ಭಾವಿಸುತ್ತಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಲಿಂಗಾಯತರಿಗೆ ಕ್ಯಾಬಿನೆಟ್ ಹುದ್ದೆ ನೀಡಿಲ್ಲ ಎಂದು ಕೆಲವರು ದೂರಿದ್ದಾರೆ. ಈಗ ಎಚ್‌ಡಿ ಕುಮಾರಸ್ವಾಮಿ ಅವರು ಎನ್‌ಡಿಎ ತಂಡದ ಪಾಲುದಾರರಾಗಿರುವುದರಿಂದ ರಾಜ್ಯದಲ್ಲಿ ತನ್ನ ರಾಜಕೀಯ ನಡೆಯ ಬಗ್ಗೆ ಸಮುದಾಯವು ಮರುಚಿಂತನೆ ಮಾಡುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಲಿಂಗಾಯತರು ಬಿಜೆಪಿಯಿಂದ ಟಿಕೆಟ್‌ಗಳ ಹಂಚಿಕೆಯನ್ನು ಪಡೆದಿಲ್ಲ ಅಥವಾ ಅವರು ಮಂತ್ರಿಮಂಡಲದಲ್ಲಿ ಅವರ ಪಾಲು ಪಡೆದಿಲ್ಲ ಎಂದು ಹೇಳಿದರು. ಈ ಬಾರಿ ಸಹಜವಾಗಿಯೇ ಸಮ್ಮಿಶ್ರ ಸರ್ಕಾರವಾಗಿದೆ, ಆದರೆ ಹಿಂದಿನ ಸಂದರ್ಭಗಳಲ್ಲಿ ಕೂಡ ಲಿಂಗಾಯತ ನಾಯಕರು ಕೇವಲ ರಾಜ್ಯ ಸಚಿವರಾಗಿ ಉಳಿದಿದ್ದಾರೆ. ಲಿಂಗಾಯತ ಗುಂಪುಗಳು ಈ ಬಗ್ಗೆ ಬಿಸಿಯಾಗಿ ಚರ್ಚಿಸುತ್ತಿವೆ ಎಂದು ಅವರು ಹೇಳಿದರು. ಧಾರವಾಡದಲ್ಲಿ ಪ್ರಲ್ಹಾದ್ ಜೋಶಿ ವಿರುದ್ಧ ಪ್ರಚಾರ ನಡೆಸಿದ್ದ ಲಿಂಗಾಯತ ಮಠಾಧೀಶ ದಿಂಗಾಲೇಶ್ವರ ಸ್ವಾಮೀಜಿ, ಯಾವುದೇ ಪ್ರತಿಕ್ರಿಯೆ ನೀಡದಿರಲು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com