ಕಾಸ್ಟ್ಲೀ ಕುಮಾರರ ಅಂಧಾ ದರ್ಬಾರ್: ದುಬಾರಿ ಶಾಲು ಧರಿಸಿದ್ದಾಗಿ ಡಿಕೆಶಿ, ಬಿಜೆಪಿ ಟೀಕೆ

ಕುರುಡು ಕಾಂಚಾಣ ಕುಣಿಯುತ್ತದೆ ಎಂಬುದಕ್ಕೆ ಉಪ ಮುಖ್ಯಮತ್ರಿ ಡಿಕೆ ಶಿವಕುಮಾರ್ ಅವರು ನಡೆಸುತ್ತಿರುವ ಅಂಧಾ ದರ್ಬಾರ್ ಸಾಕ್ಷಿ. ನಮ್ಮ ಕಾಸ್ಟ್ಲಿ ಕುಮಾರ್ ಅವರು ಧರಿಸಿರುವ ಶಾಲಿನ ಬೆಲೆ ಬರೋಬ್ಬರಿ ರೂ.59,500 ಎಂದು ಬಿಜೆಪಿ ಆರೋಪ ಮಾಡಿದೆ.
ಬಿಜೆಪಿ ಟ್ವೀಟ್
ಬಿಜೆಪಿ ಟ್ವೀಟ್

ಬೆಂಗಳೂರು: ಕುರುಡು ಕಾಂಚಾಣ ಕುಣಿಯುತ್ತದೆ ಎಂಬುದಕ್ಕೆ ಉಪ ಮುಖ್ಯಮತ್ರಿ ಡಿಕೆ ಶಿವಕುಮಾರ್ ಅವರು ನಡೆಸುತ್ತಿರುವ ಅಂಧಾ ದರ್ಬಾರ್ ಸಾಕ್ಷಿ. ನಮ್ಮ ಕಾಸ್ಟ್ಲಿ ಕುಮಾರ್ ಅವರು ಧರಿಸಿರುವ ಶಾಲಿನ ಬೆಲೆ ಬರೋಬ್ಬರಿ ರೂ.59,500 ಎಂದು ಬಿಜೆಪಿ ಆರೋಪ ಮಾಡಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕುರುಡು ಕಾಂಚಾಣ ಕುಣಿಯುತ್ತದೆ ಎಂಬುದಕ್ಕೆ ಡಿಸಿಎಂ ಡಿಕೆ.ಶಿವಕುಮಾರ್ ಅವರು ನಡೆಸುತ್ತಿರುವ ಅಂಧಾ ದರ್ಬಾರ್ ಸಾಕ್ಷಿ. ನಮ್ಮ ಕಾಸ್ಟ್ಲಿ ಕುಮಾರ್ ಅವರು ಧರಿಸಿರುವ ಶಾಲಿನ ಬೆಲೆ ಬರೋಬ್ಬರಿ ರೂ.59,500. ಬೆಲೆಯೇರಿಕೆಯಿಂದ ಜನ ಒಂದ್ಹೊತ್ತಿನ ಊಟಕ್ಕೂ ತತ್ವಾರ ಅನುಭವಿಸುತ್ತಿದ್ದಾರೆ, ಆದರೆ ಜನಪ್ರತಿನಿಧಿಗಳು ಮಾತ್ರ ಜನರ ತೆರಿಗೆ ದುಡ್ಡಿನಲ್ಲಿ ಶೋಕಿ ಮಾಡುತ್ತಿರುವುದು ನಿಜಕ್ಕೂ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇನ್ನು ಇದೇ ವೇಳೆ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆಯೂ ಬಿಜೆಪಿ ವ್ಯಂಗ್ಯವಾಡಿದೆ.

ದಿನ ಬೆಳಗಾದರೆ ಕಾಂಗ್ರೆಸ್ ರಗಳೆ, ಜನರಿಗೆ ತಪ್ಪೋಗಿಲ್ಲ ಬವಣೆ ಎಂಬ ಒಕ್ಕಣೆಯಲ್ಲಿ ಪೋಸ್ಟರ್ ಹಾಕಿರುವ ಬಿಜೆಪಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ, ಕೆಎನ್ ರಾಜಣ್ಣ, ಜಮೀರ್ ಅಹ್ಮದ್ ಖಾನ್ ಅವರ ಫೋಟೋಗಳನ್ನು ಬಳಸಿಕೊಂಡಿದೆ.

ಬಿಜೆಪಿ ಟ್ವೀಟ್
ಉಪಚುನಾವಣೆಯಲ್ಲಿ ರಾಜ್ಯದ ಜನತೆ ಮತ್ತೆ ಕಾಂಗ್ರೆಸನ್ನು ತಿರಸ್ಕರಿಸಲಿದ್ದಾರೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಡಿಸಿಎಂ ಹುದ್ದೆ ವಿಚಾರವಾಗಿ ಪತ್ರಿಕಾ ವರದಿಗಳ ಕಟಿಂಗ್ ಗಳನ್ನೂ ಹಾಕಿರುವ ಬಿಜೆಪಿ, ಕಾಂಗ್ರೆಸ್ ನಲ್ಲಿ ಸರ್ಕಾರದ ಆಡಳಿತದಲ್ಲಿ ದಿನ ಬೆಳಗಾದರೆ… ಡಿಸಿಎಂ ಹುದ್ದೆಗಾಗಿ ಕಿತ್ತಾಟ! ಸಚಿವ ಸ್ಥಾನಕ್ಕಾಗಿ ಗುದ್ದಾಟ! ಅನುದಾನಕ್ಕಾಗಿ ಶಾಸಕರ ಹೋರಾಟ! ಲೂಟಿ ಮಾಡುವುದಕ್ಕೆ ನಿರಂತರ ಪೈಪೋಟಿ. ಕನ್ನಡಿಗರ ಕಲ್ಯಾಣ ಮರೆತ ಸಿದ್ದರಾಮಯ್ಯ ನವರ ಸರ್ಕಾರದಲ್ಲಿನ ಕಾದಾಟ ಇಲ್ಲಿಗೆ ನಿಲ್ಲುವುದಿಲ್ಲ, ಬಣ ರಾಜಕೀಯ, ಒಳಜಗಳ ಒಂದು ದಿನ ವಿಸ್ಫೋಟಗೊಂಡು ಸರ್ಕಾರ ಪತನಗೊಳ್ಳುವುದು ಗ್ಯಾರಂಟಿ.'' ಎಂದು ಭವಿಷ್ಯ ನುಡದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com