ಶಿವಮೊಗ್ಗ ಟಿಕೆಟ್ ಬಗ್ಗೆ ಕಾಂಗ್ರೆಸ್ ವರಿಷ್ಠರು ನಿರ್ಧಿರಿಸುತ್ತಾರೆ: ಗೀತಾ ಶಿವರಾಜಕುಮಾರ್

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕೆಂಬುದನ್ನು ಪಕ್ಷದ ಕೇಂದ್ರ ನಾಯಕರು ನಿರ್ಧರಿಸುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಗೀತಾ ಶಿವರಾಜಕುಮಾರ್ ಹೇಳಿದ್ದಾರೆ.
ಗೀತಾ ಶಿವರಾಜ್‌ಕುಮಾರ್
ಗೀತಾ ಶಿವರಾಜ್‌ಕುಮಾರ್

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕೆಂಬುದನ್ನು ಪಕ್ಷದ ಕೇಂದ್ರ ನಾಯಕರು ನಿರ್ಧರಿಸುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಗೀತಾ ಶಿವರಾಜಕುಮಾರ್ ಹೇಳಿದ್ದಾರೆ.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ತಮ್ಮ ತಾಯಿ ಶಕುಂತಲಾ ಬಂಗಾರಪ್ಪ ಅವರು ಮೈಸೂರಿನಲ್ಲಿ ಪ್ರಾರಂಭಿಸಿದ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದೇನೆ. ಸಮಾಜ ಸೇವೆಗೂ ರಾಜಕೀಯ ವೇದಿಕೆ ಕಲ್ಪಿಸುತ್ತದೆ ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಪ್ರಚಾರದ ಸಮಯದಲ್ಲಿ ನಾನು ಪಕ್ಷದೊಂದಿಗಿದ್ದೆ ಮತ್ತು ನಂತರವೂ ಬಳ್ಳಾರಿ ಮತ್ತು ಬೆಳಗಾವಿಯಂತಹ ಸ್ಥಳಗಳಿಗೆ ಭೇಟಿ ನೀಡಿದ್ದೇನೆ ಎಂದು ಹೇಳಿದರು.

ಗೀತಾ ಶಿವರಾಜ್‌ಕುಮಾರ್
ಸಕ್ರಿಯ ರಾಜಕಾರಣಕ್ಕೆ ಗೀತಾ ಶಿವರಾಜ್ ಕುಮಾರ್; ಲೋಕಸಭೆ ಟಿಕೆಟ್ ವರಿಷ್ಠರ ನಿರ್ಧಾರಕ್ಕೆ ಬಿಟ್ಟದ್ದು: ಮಧು ಬಂಗಾರಪ್ಪ

'ನನ್ನ ಪತ್ನಿಯನ್ನು ಸಂಸದೆಯಾಗಿ ನೋಡಲು ನಾನು ಇಷ್ಟಪಡುತ್ತೇನೆ. ಎಂಎಲ್ಎ ಅಥವಾ ಎಂಪಿ ಆಗಿ ಅವರು ಮಹಿಳೆಯರಿಗೆ ಪ್ರೇರಕ ಅಂಶವಾಗುತ್ತಾರೆ. ಹಾಗಾಗಿ, ಗೀತಾ ಅವರನ್ನು ಚುನಾಯಿತ ಪ್ರತಿನಿಧಿಯಾಗಿ ನೋಡಲು ನಾನು ಬಯಸುತ್ತೇನೆ' ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಗೀತಾ ಹೆಸರು ಕೇಳಿಬರುತ್ತಿದೆ. ಇದೇ ವೇಳೆ, ರಾಜಕೀಯಕ್ಕೆ ಸೇರುವ ಮತ್ತು ಚುನಾವಣೆಗೆ ಸ್ಪರ್ಧಿಸುವ ಯಾವುದೇ ಉದ್ದೇಶವಿಲ್ಲ. ಆದರೆ, ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿದರೆ ಗೀತಾ ಪರ ಪ್ರಚಾರ ನಡೆಸುವುದು ಖಚಿತ ಎಂದು ಶಿವರಾಜ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com