ಬದಲಾವಣೆ ಅಗತ್ಯವಿದ್ದಲ್ಲಿ ಪರಮೇಶ್ವರ್ ಅವರನ್ನ ಸಿಎಂ ಮಾಡಿ: ದಲಿತ ಸಿಎಂ ಕೂಗಿಗೆ ಧ್ವನಿಗೂಡಿಸಿದ ಸಚಿವ ರಾಜಣ್ಣ

ಮತ್ತೆ ಮುನ್ನೆಲೆಗೆ ಬಂದಿರುವ ದಲಿತ ಸಿಎಂ ಕೂಗಿಗೆ ಸಚಿವ ರಾಜಣ್ಣ ಧ್ವನಿಗೂಡಿಸಿದ್ದು, ರಾಜ್ಯದಲ್ಲಿ ಒಂದು ವೇಳೆ ಸಿಎಂ ಬದಲಾವಣೆಯಾಗಬೇಕಿದ್ದರೆ, ಗೃಹ ಸಚಿವ ಡಾ.ಪರಮೇಶ್ವರ್ ಅವರನ್ನು ಸಿಎಂ ಮಾಡಲಿ ಎಂದು ಹೇಳಿದ್ದಾರೆ.
ಸಚಿವ ರಾಜಣ್ಣ
ಸಚಿವ ರಾಜಣ್ಣ

ತುಮಕೂರು: ಮತ್ತೆ ಮುನ್ನೆಲೆಗೆ ಬಂದಿರುವ ದಲಿತ ಸಿಎಂ ಕೂಗಿಗೆ ಸಚಿವ ರಾಜಣ್ಣ ಧ್ವನಿಗೂಡಿಸಿದ್ದು, ರಾಜ್ಯದಲ್ಲಿ ಒಂದು ವೇಳೆ ಸಿಎಂ ಬದಲಾವಣೆಯಾಗಬೇಕಿದ್ದರೆ, ಗೃಹ ಸಚಿವ ಡಾ.ಪರಮೇಶ್ವರ್ ಅವರನ್ನು ಸಿಎಂ ಮಾಡಲಿ ಎಂದು ಹೇಳಿದ್ದಾರೆ. ದಲಿತ ಸಿಎಂ ಆಗ್ರಹದಲ್ಲಿ ಯಾವುದೇ ತಪ್ಪು ಇಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಾಜಣ್ಣ, ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುವುದೇ ಆದಲ್ಲಿ ದಲಿತರೊಬ್ಬರು ಸಿಎಂ ಆಗಲಿ, ಬಹುತೇಕ ಶಾಸಕರ ಅಭಿಪ್ರಾಯ ಇದೇ ಆಗಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಬೇಕು ಎಂದು ರಾಜಣ್ಣ ಹೇಳಿದ್ದಾರೆ.

‘‘ದಲಿತ ಸಿಎಂ ಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿದೆ, ಇಂದು ಸಂಜೆಯೇ ದಲಿತ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಕೊಡುತ್ತಾರೆ ಎಂದಲ್ಲ, ಇವತ್ತು ದಲಿತ ಸಿಎಂಗಾಗಿ ಧ್ವನಿ ಎತ್ತಲು ಆರಂಭಿಸಿದರೆ ಅದು ಮುಂಬರುವ ದಿನಗಳಲ್ಲಿ ಈಡೇರಬಹುದು ಎಂದು ಹೇಳಿದ್ದಾರೆ.

ಸಚಿವ ರಾಜಣ್ಣ
ಕರ್ನಾಟಕದಲ್ಲಿ ಪ್ರಭಾವಿ ದಲಿತ ನಾಯಕರಿದ್ದರೂ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಲಿಲ್ಲ: ಬೇಸರ ಹೊರಹಾಕಿದ ಸಚಿವ ಮಹದೇವಪ್ಪ

ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಪರಮೇಶ್ವರ ಅವರು ಸಿಎಂ ಆಗುವ ಅರ್ಹತೆ ಹೊಂದಿದ್ದಾರೆ. ಇದು ನಮ್ಮ ಆಶಯ. ಚುನಾವಣೆ ಸಮೀಪಿಸುತ್ತಿರುವ ಕಾರಣ ನಾವು ಈಗ ಈ ವಿಷಯಗಳ ಬಗ್ಗೆ ಪ್ರಸ್ತಾಪಿಸುವುದಿಲ್ಲ ಎಂದು ಅವರು ಸಮರ್ಥಿಸಿಕೊಂಡರು.

ಶಿವಕುಮಾರ್ ಕೂಡ ಮುಖ್ಯಮಂತ್ರಿಯಾಗಲಿ, ಸಿಎಂ ಆಗಬಾರದು ಎಂದು ನಾವು ಹೇಳುತ್ತಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com