ಮರುಕಳಿಸಲಿದೆ 35 ವರ್ಷಗಳ ಹಿಂದಿನ ಇತಿಹಾಸ: ಯದುವೀರ್ ಸ್ಫರ್ಧಿಸಿದರೇ ಕಾಂಗ್ರೆಸ್ ನಿಂದ ಅರಸು ಮೊಮ್ಮಗ ಕಣಕ್ಕೆ; ಬಿಜೆಪಿಗೆ 'ಕೈ' ಠಕ್ಕರ್!

ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ಮೊಮ್ಮಗ ಸೂರಜ್ ಹೆಗ್ಡೆ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಬಹುದು ಎಂದು ಬಲ್ಲ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.
ಸೂರಜ್ ಹೆಗ್ಡೆ ಮತ್ತು ಯದುವೀರ್ ಒಡೆಯರ್
ಸೂರಜ್ ಹೆಗ್ಡೆ ಮತ್ತು ಯದುವೀರ್ ಒಡೆಯರ್
Updated on

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಹಾಲಿ ಸಂಸದ ಪ್ರತಾಪ್ ಸಿಂಹ ಬದಲಿಗೆ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದರೆ ಮೈಸೂರು-ಕೊಡಗು ಸಂಸದೀಯ ಸ್ಥಾನದ ಕದನ ಇತಿಹಾಸದ ಪುಟಗಳನ್ನು ನೆನಪಿಸುತ್ತದೆ.

ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ಮೊಮ್ಮಗ ಸೂರಜ್ ಹೆಗ್ಡೆ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಬಹುದು ಎಂದು ಬಲ್ಲ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ. ಸೂರಜ್ ಹೆಗ್ಡೆ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಉಪಾಧ್ಯಕ್ಷರು, ಕರ್ನಾಟಕ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಮತ್ತು ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ, ಗೋವಾ ಮತ್ತು ಅಂಡಮಾನ್ ಮತ್ತು ನಿಕೋಬಾರ್‌ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಚುನಾವಣಾ ಸ್ಕ್ರೀನಿಂಗ್ ಸಮಿತಿಯ ಸದಸ್ಯರಾಗಿದ್ದಾರೆ.

ಬಿಜೆಪಿ ಮೂಲಗಳ ಪ್ರಕಾರ, ಇತ್ತೀಚಿನ ಸಂಸತ್ತಿನ ಭದ್ರತಾ ಉಲ್ಲಂಘನೆಯ ಸುತ್ತಲಿನ ವಿವಾದ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಎರಡು ಬಾರಿ ಸಂಸದರಾಗಿರುವ ಸಿಂಹ ಅವರನ್ನು ಪಕ್ಷವು ಕೈಬಿಡಬಹುದು ಎಂದು ಹೇಳಲಾಗುತ್ತಿದೆ.

ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ಕಾಯುತ್ತಿದೆ. ಮೈಸೂರು-ಕೊಡಗು ಕ್ಷೇತ್ರದಿಂದ ಯದುವೀರ್ ಅವರ ಹೆಸರನ್ನು ಘೋಷಿಸಿದರೆ, ಯದುವೀರ್ ವಿರುದ್ಧ ಸೂರಜ್ ಹೆಗಡೆ ಸ್ಪರ್ಧಿಸಬಹುದು. ಆದರೆ ಜೊತೆಗೆ ಮೈಸೂರು-ಕೊಡಗು ಕ್ಷೇತ್ರಕ್ಕೆ ಪಕ್ಷದ ವಕ್ತಾರ ಎಂ.ಲಕ್ಷ್ಮಣ ಮತ್ತು ಡಿಸಿಸಿ ಅಧ್ಯಕ್ಷ ವಿಜಯಕುಮಾರ್ ಹೆಸರುಗಳನ್ನು ಕಾಂಗ್ರೆಸ್ ಪರಿಗಣಿಸಿದೆ.

ಸೂರಜ್ ಹೆಗ್ಡೆ ಮತ್ತು ಯದುವೀರ್ ಒಡೆಯರ್
ಲೋಕಸಭೆ: ಬಿಜೆಪಿಗೆ ಆ ನಾಲ್ಕು ಕ್ಷೇತ್ರಗಳದ್ದೇ ತಲೆನೋವು (ಸುದ್ದಿ ವಿಶ್ಲೇಷಣೆ)

ಸೂರಜ್ ಹೆಗ್ಡೆ ಅವರ ಹೆಸರೂ ಪಟ್ಟಿಯಲ್ಲಿತ್ತು ಆದರೆ ಯದುವೀರ್ ಒಡೆಯರ್ ಅವರ ಹೆಸರು ಕೇಳಿಬಂದ ನಂತರ ಮುನ್ನಲೆಗೆ ಬಂದಿದೆ ಎಂದು ಹೇಳಲಾಗಿದೆ. ಯದುವೀರ್ ವಿರುದ್ಧ ಹೆಗ್ಡೆ ಸ್ಪರ್ಧಿಸಿದರೆ 35 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಿದಂತಾಗುತ್ತದೆ.

ಹಿಂದಿನ ಮೈಸೂರು ರಾಜಮನೆತನದ ವಂಶಸ್ಥ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ ಅರಸ್ ಅವರ ಪುತ್ರಿ ದಿವಂಗತ ಚಂದ್ರಪ್ರಭಾ ಅರಸ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1991 ರಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ, 1994ರಲ್ಲಿ ನಡೆದ ಚುನಾವಣೆಯಲ್ಲಿ ಸೋತಿದ್ದರು.

ಸೂರಜ್ ಹೆಗ್ಡೆ ಮತ್ತು ಯದುವೀರ್ ಒಡೆಯರ್
ಸಂಚಲನ ಸೃಷ್ಟಿಸಿದ ಹಳೇ ಮೈಸೂರು ಭಾಗ: ಸಂಸತ್ ಪಾಸ್ ಪ್ರಕರಣದಲ್ಲಿ 'ಸಿಂಹ' ತಲೆದಂಡ; ಮೈತ್ರಿ ಹಿತಾಸಕ್ತಿಗಾಗಿ 'ಸುಮಲತಾ' ಬಲಿ!

ಅಸ್ಸಾಂ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ ಮತ್ತು ದಮನ್ ಮತ್ತು ದಿಯುಗೆ ಮಂಗಳವಾರ 43 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಚಂಡೀಗಢದ 99 ಸ್ಥಾನಗಳಿಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಅಂತಿಮಗೊಳಿಸಲು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸೋಮವಾರ ತನ್ನ ಎರಡನೇ ಸಭೆ ನಡೆಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com