ನನ್ನ ಬಳಿ ಅಷ್ಟೊಂದು ಹಣವಿಲ್ಲ, ನಾನು ಈಗ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ: ಮಾಜಿ ಸಿಎಂ ಎಸ್ ಎಂ ಕೃಷ್ಣ

ಪ್ರಸ್ತುತ ರಾಜ್ಯ ರಾಜಕಾರಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಾಂವಿಧಾನಿಕ ಮೌಲ್ಯಗಳ ಸವಕಳಿ ಮತ್ತು ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಎಸ್ ಎಂ ಕೃಷ್ಣ ಮತ್ತು ಶ್ರೀನಿವಾಸ್ ಪ್ರಸಾದ್
ಎಸ್ ಎಂ ಕೃಷ್ಣ ಮತ್ತು ಶ್ರೀನಿವಾಸ್ ಪ್ರಸಾದ್
Updated on

ಮೈಸೂರು: ಪ್ರಸ್ತುತ ರಾಜ್ಯ ರಾಜಕಾರಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಾಂವಿಧಾನಿಕ ಮೌಲ್ಯಗಳ ಸವಕಳಿ ಮತ್ತು ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಮೈಸೂರಿನಲ್ಲಿ ಬಿಜೆಪಿ ಮುಖಂಡ ಮತ್ತು ಸಂಸದ ಶ್ರೀನಿವಾಸ ಪ್ರಸಾದ್ ಅವರ ರಾಜಕೀಯ ಪಯಣದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣೆ ಗೆಲ್ಲಲು ಪ್ರತಿ ಕ್ಷೇತ್ರಕ್ಕೆ 100-200 ಕೋಟಿ ರೂಪಾಯಿಗಳವರೆಗೆ ಗಣನೀಯ ಮೊತ್ತವನ್ನು ಖರ್ಚು ಮಾಡಲಾಗುತ್ತಿದೆ.ಅನೇಕರು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೆಚ್ಚುತ್ತಾರೆ ಮತ್ತು ಹೊಗಳುತ್ತಾರೆ, ಆದರೆ ಅದು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಇದು ಸಕಾಲವಾಗಿದೆ.

ಇತ್ತೀಚೆಗಿನ ಬೆಳವಣಿಗೆಗಳು ರಾಜಕೀಯದಲ್ಲಿ ಹಣದ ಪ್ರಭಾವವನ್ನು ಹೆಚ್ಚಿಸಿರುವುದು ಆತಂಕಕಾರಿಯಾಗಿದೆ. 1960 ಅಥವಾ 70ರ ದಶಕದಲ್ಲಿ ರಾಜಕಾರಣಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಜನರು ಹಣ ದೇಣಿಗೆ ನೀಡುತ್ತಿದ್ದ ಸಂದರ್ಭ ಇರಲಿಲ್ಲ. ಕಾಂಗ್ರೆಸ್ ಕಚೇರಿಯಲ್ಲಿ ಚುನಾವಣೆಗೆ ಹಣ ಹಂಚುತ್ತಿದ್ದಾಗ ಮೊದಲ ಬಾರಿಗೆ 10,000 ರೂಪಾಯಿಯ ಬಂಡಲ್ ನೋಡಿದ್ದೆ ಎಂದು ಸ್ಮರಿಸಿದ ಅವರು, ಈಗ ಚುನಾವಣಾ ವೆಚ್ಚವು ಹಲವಾರು ಪಟ್ಟು ಹೆಚ್ಚಾಗಿದೆ, ಇದು ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಹೈಜಾಕ್ ಮಾಡುತ್ತಿದೆ, ನನ್ನ ಬಳಿ ಅಂತಹ ಹಣವಿಲ್ಲ. ಹೀಗಾಗಿ ನಾನು ಈಗ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದರು.

ಎಸ್ ಎಂ ಕೃಷ್ಣ ಮತ್ತು ಶ್ರೀನಿವಾಸ್ ಪ್ರಸಾದ್
ಮೈಸೂರು ವಿವಿ ಘಟಿಕೋತ್ಸವ: ಮಾಜಿ ಸಿಎಂ ಎಸ್ ಎಂ ಕೃಷ್ಣ ಸೇರಿದಂತೆ ನಾಲ್ವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಮತದಾರರ ಮೇಲೆ ಹಣದ ಅನಗತ್ಯ ಪ್ರಭಾವಕ್ಕೆ ಕಡಿವಾಣ ಹಾಕಲು ಚುನಾವಣಾ ಸುಧಾರಣೆಗಳ ತುರ್ತು ಅಗತ್ಯವಿದೆ. ಚುನಾವಣಾ ಆಯೋಗವನ್ನು ಬಲಪಡಿಸಲು ಮತ್ತು ಚುನಾವಣೆಯಲ್ಲಿ ಹಣದ ಬಲವನ್ನು ತಗ್ಗಿಸುವ ಕ್ರಮಗಳನ್ನು ಜಾರಿಗೆ ತರಲು ಆದ್ಯತೆ ನೀಡುವಂತೆ ಅವರು ಕೇಂದ್ರ ಸರ್ಕಾರಕ್ಕೆ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದರು, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಮರು ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.

ವ್ಯವಸ್ಥೆಯನ್ನು ಉಳಿಸಲು ಅದನ್ನು ಎದುರಿಸಲು ತಂತ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ಕೃಷ್ಣ ತಿಳಿಸಿದರು. ಟಿಎನ್ ಶೇಷನ್ ಅವರು ಚುನಾವಣಾ ಆಯುಕ್ತರಾಗಿದ್ದ ಸಮಯವನ್ನು ನೆನಪಿಸಿಕೊಂಡ ಅವರು, ರಾಜಕಾರಣಿಗಳು ಅಧಿಕಾರಿಗೆ ಭಯಪಡುತ್ತಿದ್ದರು, ಏಕೆಂದರೆ ಅವರು ವೆಚ್ಚದ ಮೇಲೆ ಮಿತಿಯನ್ನು ನಿಗದಿಪಡಿಸಿದರು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಸಮಗ್ರತೆಯನ್ನು ತುಂಬಿದರು.

ಶ್ರೀನಿವಾಸ್ ಪ್ರಸಾದ್ ಅವರನ್ನು ಪ್ರತಿಷ್ಠಿತ ಉಪಚುನಾವಣೆಯಲ್ಲಿ ಸೋಲಿಸಲು ತಾನು ಮತ್ತು ಆಗಿನ ಮುಖ್ಯಮಂತ್ರಿ ದೇವರಾಜ್ ಅರಸ್ ಹೇಗೆ ಸಂಚು ರೂಪಿಸಿದರು ಎಂದು ಕೃಷ್ಣ ನೆನಪಿಸಿಕೊಂಡರು, ಏಕೆಂದರೆ ಅವರ ಮುಖ್ಯಮಂತ್ರಿ ಹುದ್ದೆ ಅವದಿ ಕೇವಲ ಎರಡು ವರ್ಷಗಳು ಇದ್ದ ಕಾರಣ ಅರಸ್ ಅವರು ಚುನಾವಣೆಯಲ್ಲಿ ಗೆಲ್ಲುವ ರಾಜಕಾರಣಿಯಾಗಿ ತಮ್ಮ ಇಮೇಜ್ ಅನ್ನು ಗಟ್ಟಿಗೊಳಿಸಲು ಬಯಸಿದ್ದರು.

ಎಸ್ ಎಂ ಕೃಷ್ಣ ಮತ್ತು ಶ್ರೀನಿವಾಸ್ ಪ್ರಸಾದ್
ದಶಕಗಳ ಚುನಾವಣಾ ರಾಜಕೀಯಕ್ಕೆ ಶ್ರೀನಿವಾಸ್ ಪ್ರಸಾದ್ ವಿದಾಯ!

ಆದರೆ ಪ್ರಭಾವಿ ಜನನಾಯಕರಾಗಿದ್ದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಕೆಲಸ ಮಾಡಲು ನಮಗೆ ಸಾಧ್ಯವಾಗಲಿಲ್ಲ, ಏಕೆಂದರೆ ಅವರು ಜನರನ್ನು ಆಕರ್ಷಿಸುವ ಮತ್ತು ಸಂಘಟಿಸುವ ಶಕ್ತಿಯನ್ನು ಹೊಂದಿದ್ದರು ಎಂದು ಅವರು ಹೇಳಿದರು. ಪ್ರಸಾದ್ ಅವರ ರಾಜಕೀಯ ಪ್ರಾಮುಖ್ಯತೆಯನ್ನು ಮತ್ತು ಮೈಸೂರಿನ ಅಶೋಕಪುರಂ ಪ್ರದೇಶದ ಜನರಲ್ಲಿ ಅವರ ಅಚಲ ಬೆಂಬಲದ ನೆಲೆಯನ್ನು ಅವರು ನೆನಪಿಸಿಕೊಂಡರು. ಹಿಂದೆ ಚುನಾಯಿತ ಪ್ರತಿನಿಧಿಗಳು ಸಭ್ಯತೆಯ ಚೌಕಟ್ಟಿನಲ್ಲಿ ಮಾತನಾಡುತ್ತಿದ್ದರು, ಆದರೆ ಈಗ ಬಳಸುತ್ತಿರುವ ಭಾಷೆ ಮೌಲ್ಯಗಳ ಅವನತಿಗೆ ಕನ್ನಡಿಯಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com