ದೊಡ್ಮನೆ ಕುಟುಂಬ ಚಿತ್ರೋದ್ಯಮದ ಆಸ್ತಿ; ಶಿವಮೊಗ್ಗದಲ್ಲಿ ಪ್ರಚಾರ ನಡೆಸುತ್ತೇವೆ: ಗೀತಾ ಬೆಂಬಲಕ್ಕೆ ನಿಂತ Sandalwood!

ಗೀತಾ ಶಿವರಾಜಕುಮಾರ್ ಪರ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ವಿರುದ್ಧ ವ್ಯಾಪಕ ಪ್ರಚಾರ ನಡೆಸಲು ಕನ್ನಡ ಚಿತ್ರರಂಗ ನಿರ್ಧರಿಸಿದೆ.
ಗೀತಾ ಶಿವರಾಜ್ ಕುಮಾರ್
ಗೀತಾ ಶಿವರಾಜ್ ಕುಮಾರ್

ಬೆಂಗಳೂರು: ಕನ್ನಡ ನಟ ಶಿವರಾಜಕುಮಾರ್ ಅವರ ಪತ್ನಿ, ಕರ್ನಾಟಕದ ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಮಗಳು ಮತ್ತು ಕನ್ನಡದ ಆರಾಧ್ಯ ದೈವ ಡಾ ರಾಜಕುಮಾರ್ ಅವರ ಸೊಸೆ ಗೀತಾ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಹೀಗಾಗಿ ಗೀತಾ ಶಿವರಾಜಕುಮಾರ್ ಪರ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ವ್ಯಾಪಕ ಪ್ರಚಾರ ನಡೆಸಲು ಕನ್ನಡ ಚಿತ್ರರಂಗ ನಿರ್ಧರಿಸಿದೆ.

ಬೆಂಗಳೂರಿನ ಗೀತಾ ಮತ್ತು ಶಿವರಾಜಕುಮಾರ್ ಅವರ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಧ್ಯಕ್ಷ ಮತ್ತು ಹಿರಿಯ ನಿರ್ಮಾಪಕ ಎನ್‌ಎಂ ಸುರೇಶ್ , ಗೀತಾ ನಾಮಪತ್ರ ಸಲ್ಲಿಸುವ ದಿನದಂದು ನಿರ್ಮಾಪಕರು, ವಿತರಕರು, ಪ್ರದರ್ಶಕರು ಮತ್ತು ಕೆಲವು ನಟರು ಸೇರಿದಂತೆ ಇಡೀ ಉದ್ಯಮವು ಶಿವಮೊಗ್ಗಕ್ಕೆ ಆಗಮಿಸಲಿದೆ. ದೊಡ್ಮನೆ (ಡಾ ರಾಜ್‌ಕುಮಾರ್ ಅವರ ಮನೆ) ಉದ್ಯಮಕ್ಕೆ ಆಸ್ತಿಯಾಗಿರುವುದರಿಂದ, ನಾವು ಗೀತಾ ಶಿವರಾಜಕುಮಾರ್ ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

ಗೀತಾ ಶಿವರಾಜ್ ಕುಮಾರ್
ಲೋಕಸಭೆ ಚುನಾವಣೆ: 39 ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ, ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್ ಕಣಕ್ಕೆ

ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮಾತನಾಡಿ, ಉದ್ಯಮವು ಡಾ ರಾಜ್‌ಕುಮಾರ್ ಅವರ ಕುಟುಂಬಕ್ಕೆ ಋಣಿಯಾಗಿರುವುದರಿಂದ, ಗೀತಾ ಅವರು ಜನರ ಸೇವೆ ಮಾಡಲು ಬಯಸುತ್ತಿರುವ ಕಾರಣ ಅವರನ್ನು ಬೆಂಬಲಿಸುವುದು ಉದ್ಯಮದ ಸದಸ್ಯರ ಕರ್ತವ್ಯವಾಗಿದೆ ಎಂದರು.

ಗೀತಾ ಅವರು ಬುಧವಾರ ಭದ್ರಾವತಿಯಿಂದ ಪ್ರಚಾರ ಆರಂಭಿಸಿದರೆ, ಶಿವರಾಜಕುಮಾರ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಗುರುವಾರ ಬೈಂದೂರಿನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ, ಗೀತಾ ಬಂಗಾರಪ್ಪ ಅವರ ಪುತ್ರಿಯಾಗಿರುವುದರಿಂದ ತಳಮಟ್ಟದ ಜನರನ್ನು ತಲುಪಲು ಕ್ಷೇತ್ರದಾದ್ಯಂತ ಹೋಬಳಿಗಳಲ್ಲಿಯೂ ಸಹ 300 ಕ್ಕೂ ಪ್ರಚಾರ ಸಭೆ ನಡೆಸಲು ಅವರು ಕ್ರಿಯಾ ಯೋಜನೆ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com