ಕಾಂಗ್ರೆಸ್-ಬಿಜೆಪಿ ಅಭಿವೃದ್ಧಿ ಸಾಧನೆಗಳ ಬಗ್ಗೆ ಚರ್ಚಿಸಲು ಸಿದ್ಧ: ಸಚಿವ ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್-ಬಿಜೆಪಿ ಅಭಿವೃದ್ಧಿ ಸಾಧನೆಗಳ ಬಗ್ಗೆ ಚರ್ಚಿಸಲು ಸಿದ್ಧ ಎಂದು ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಅವರ ಸವಾಲನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ವೀಕರಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಾಂಗ್ರೆಸ್-ಬಿಜೆಪಿ ಅಭಿವೃದ್ಧಿ ಸಾಧನೆಗಳ ಬಗ್ಗೆ ಚರ್ಚಿಸಲು ಸಿದ್ಧ ಎಂದು ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಅವರ ಸವಾಲನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ವೀಕರಿಸಿದ್ದಾರೆ.

ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ಪ್ರಿಯಾಂಕ್ ಖರ್ಗೆ v/s ಉಮೇಶ್ ಜಾಧವ್ ಅಲ್ಲ. ಈ ಚುನಾವಣೆ ಇರುವುದು ಇಡೀ ಕಲಬುರಗಿ ಅಭಿವೃದ್ಧಿ ಬಗ್ಗೆ. ನೀವು ಕಲಬುರಗಿ ಜನರಿಗೆ ಏನು ಕೊಡುಗೆ ನೀಡಿದ್ದಿರಿ? ಖರ್ಗೆ ಅಂತವರನ್ನು ಸೋಲಿಸಿದ ನೀವು ಕೊನೆ ಪಕ್ಷ ಅವರ ಲೇವಲ್‌ಗೆ ಆದರೂ ಇರಿ. 5-50 ಯೋಜನೆಗಳನ್ನು ತಂದಿದ್ದೇನೆಂದು ಜಾಧವ್ ಸುಳ್ಳು ಹೇಳ್ಳುತ್ತಿದ್ದಾರೆ. ವಾಜಪೇಯಿ ಸರ್ಕಾರ ಅವಧಿಯಲ್ಲಿ 371(J) ಕಲಂನ್ನು ಅಂದಿನ ಗೃಹ ಸಚಿವ ಅಡ್ವಾಣಿ ತಿರಸ್ಕರಿಸಿದ್ದರು ಎಂದು ವಾಗ್ದಾಳಿ ನಡೆಸಿದರು.

ರೈಲ್ವೆ ಡಿವಿಷನ್ ಬಂದಿದ್ರೆ ಕಲಬುರಗಿಗೆ ವಂದೇ ಭಾರತ್ ಅಂತಹ ಹತ್ತಾರು ರೈಲುಗಳು ಬರುತ್ತಿದ್ದವು. ಮಾತೆತ್ತಿದರೇ ಎರಡು ರೈಲು ತಂದಿದ್ದೀನಿ ಅಂತಾರೆ. 5 ವರ್ಷಗಳ ಅವಧಿಯಲ್ಲಿ ಎರಡು ರೈಲು ಬಿಟ್ಟರೇ ಬೇರೆ ಎನು ಅಭಿವೃದ್ಧಿ ಕೆಲಸ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಸಚಿವರಿದ್ದಾಗ 28 ರೈಲುಗಳನ್ನು ತರಲಾಗಿತ್ತು. ನಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ‌. ನೀವು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಎಂದು ಸವಾಲು ಎಸೆದರು.

ಸಚಿವ ಪ್ರಿಯಾಂಕ್ ಖರ್ಗೆ
ಲೋಕಸಭಾ ಚುನಾವಣೆ: ಬಿಜೆಪಿ 400 ಸ್ಥಾನ ಗಳಿಸಲ್ಲ, 'ಅಲುಗಾಡುತ್ತಿರುವ ವಿಕೆಟ್' ಎಂದ ಪ್ರಿಯಾಂಕ್ ಖರ್ಗೆ

ಪ್ರಧಾನಿ ಮೋದಿಯವರ ಯಾವುದೇ ಕಾರ್ಯಕ್ರಮಗಳು ಸ್ವಂತದಲ್ಲ. ನಮ್ಮ ಯೋಜನೆಗಳ ಹೆಸರು ಬದಲಾಯಿಸಿ ತಮ್ಮ ಯೋಜನೆಗಳೆಂದು ಹೇಳುತ್ತಿದ್ದಾರೆ. ಮೋದಿಜೀ ಕೀ ಗ್ಯಾರಂಟಿ ಎಂದು ಹೊಸ ಟ್ರೆಂಡ್ ಶುರು ಮಾಡಿದ್ದಾರೆ. ನಮ್ಮ ರಾಜ್ಯದ ಯೋಜನೆಗಳನ್ನೇ ಮೋದಿ ಗ್ಯಾರಂಟಿ ಯೋಜನೆಗಳೆಂದು ಬಿಂಬಿಸುತ್ತಿದ್ದಾರೆ. ನಮ್ಮ ಯೋಜನೆಗಳಿಗೆ ಬೇರೆ ಹೆಸರಿಟ್ಟು ಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಳಿಕ ಕೇಂದ್ರದ ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಅವರು, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಲು 371 (ಜೆ) ಕಲಂ ತಿದ್ದುಪಡಿ ಮಾಡುವಲ್ಲಿ ನಮ್ಮ ತಂದೆ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ನನ್ನ ತಂದೆ ಹಾಗೂ ಮಾಜಿ ಸಿಎಂ ಧರಂ ಸಿಂಗ್ ಅವರ ಶ್ರಮದಿಂದ ಕರ್ನಾಟಕದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ.

ನನ್ನ ತಂದೆ ಕೇಂದ್ರ ಕಾರ್ಮಿಕ ಸಚಿವರಾಗಿದ್ದಾಗ ಇಎಸ್‌ಐಸಿ ವೈದ್ಯಕೀಯ ಸಂಕೀರ್ಣವನ್ನು ಸ್ಥಾಪನೆಯಾಯಿತು. ಮತ್ತು ರೈಲ್ವೆ ಸಚಿವರಾಗಿದ್ದಾಗ ಕಲಬುರಗಿಗೆ ರೈಲ್ವೆ ವಿಭಾಗವನ್ನು ಮಂಜೂರು ಮಾಡಲಾಗಿತ್ತು, ಇದೀಗ ಕಲಬುರಗಿಗಾಗಿ ಬಿಜೆಪಿ ಏನು ಮಾಡಿದೆ ಎಂಬುದನ್ನು ಡಾ.ಜಾಧವ್ ಪಟ್ಟಿ ಮಾಡಲಿ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com