ಪಕ್ಷೇತರನಾಗಿ ಗೆದ್ದ ಕೂಡಲೇ ನಿನ್ನ ಕಾವಲುಗಾರರು ನನ್ನ ಮನೆ ಮುಂದೆ ನಿಂತು ಕಾಯುತ್ತಿದ್ದದ್ದು ಮರೆತು ಹೋಯಿತೆ? ತಂಗಡಗಿ

ಪಕ್ಷೇತರನಾಗಿ ಗೆದ್ದ ಕೂಡಲೇ ನಿನ್ನ ಕಾವಲುಗಾರರು ನನ್ನ ಮನೆ ಮುಂದೆ ನಿಂತು ಕಾಯುತ್ತಿದ್ದದ್ದು ಮರೆತು ಹೋಯಿತೆ? ಎಂದು ಸಚಿವ ಶಿವರಾಜ್ ತಂಗಡಗಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶಿವರಾಜ್ ತಂಗಡಗಿ
ಶಿವರಾಜ್ ತಂಗಡಗಿ

ಕೊಪ್ಪಳ: ಪಕ್ಷೇತರನಾಗಿ ಗೆದ್ದ ಕೂಡಲೇ ನಿನ್ನ ಕಾವಲುಗಾರರು ನನ್ನ ಮನೆ ಮುಂದೆ ನಿಂತು ಕಾಯುತ್ತಿದ್ದದ್ದು ಮರೆತು ಹೋಯಿತೆ? ಎಂದು ಸಚಿವ ಶಿವರಾಜ್ ತಂಗಡಗಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಕಾರಟಗಿಯಲ್ಲಿ ಕಾಂಗ್ರೆಸ್‍ನ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ನನಗೂ ನಾಲಿಗೆ ಇದೆ. ನಾನು ಸಂಸ್ಕಾರವುಳ್ಳ ಕುಟುಂಬದಿಂದ ಬಂದಿದ್ದರಿಂದ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಇನ್ನೊಮ್ಮೆ ನಾಲಿಗೆ ಹರಿಬಿಟ್ಟರೆ ಎರಡು ಹೆಜ್ಜೆ ಮುಂದೆ ಹೋಗಿ ನಿನ್ನ ಬಗ್ಗೆ ಮಾತನಾಡಬೇಕಾದಿತ್ತು ಹುಷಾರ್‌ ಎಂದು ಎಚ್ಚರಿಕೆ ನೀಡಿದ್ದಾರೆ.

ಟಗರು ಬೆಂಗಳೂರಿಂದ ಬಳ್ಳಾರಿಗೆ ಬಂದು ಗುದ್ದಿದ್ದು ನೆನಪಿದೆಯಾ? ರಾಜ್ಯಸಭಾ ಚುನಾವಣೆಗೂ ಮುನ್ನ ನನ್ನ ಮನೆ ಸುತ್ತಾ ಓಡಾಡಿದ್ದನ್ನು ಬಹಿರಂಗಪಡಿಸಬೇಕಾ? ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ತಂಗಡಗಿ ‘ನಾವು ಐದು ಜನ ಬೆಂಬಲ ಕೊಟ್ಟ ಕಾರಣದಿಂದಲೇ ನಿಮ್ಮ ಪಕ್ಷಕ್ಕೆ ಅಧಿಕಾರ ಲಭಿಸಿತ್ತು. ನೀನೂ ಸಚಿವನಾದೆ. ನಾನು ಪಕ್ಷೇತರ‌ ಶಾಸಕನಾಗಿ ಗೆದ್ದ ಕೂಡಲೇ ನಿಮ್ಮ ಕಾವಲುಗಾರರು ನನ್ನ ಮನೆ ಮುಂದೆ ಬಂದು ನಿಂತಿದ್ದರು.

ಶಿವರಾಜ್ ತಂಗಡಗಿ
ಸಿದ್ದರಾಮಯ್ಯ ಯಾರ ಬಳಿಯೂ ದುಡ್ಡು ತೆಗೆದುಕೊಳ್ಳಲ್ಲ, ಹೀಗಾಗಿ ಸಿಎಂ ಸ್ಥಾನದಿಂದ ಇಳಿಸಲು ಕಾಯ್ತಿದ್ದಾರೆ: ಜನಾರ್ದನ ರೆಡ್ಡಿ

ನಾನು ನಿನ್ನ ಮನೆ ಬಾಗಿಲಿಗೆ ಬಂದಿರಲಿಲ್ಲ. ನನ್ನನ್ನು ಕರೆದುಕೊಂಡ ಹೋದ ಮೇಲೆ‌ ನೀನು ಮಂತ್ರಿಯಾದೆ. ರೆಡ್ಡಿ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದೀಯಾ’ ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು.

ರೆಡ್ಡಿ ನಿನ್ನ ಹಣೆಬರಹ ಚೆನ್ನಾಗಿ ಗೊತ್ತು. ಅಂದು ನಿನ್ನಿಂದ ಮಂತ್ರಿಯಾಗಿರಲಿಲ್ಲ. ಕನಕಗಿರಿ ಕ್ಷೇತ್ರದ ಜನರ ಆಶೀರ್ವಾದದಿಂದ ಸಚಿವನಾಗಿದ್ದೆ. ನಾನು‌ ನೀನು ಹೇಳಿದ ಪದ ಬಳಸಬಲ್ಲೇ, ಆ ತಾಕತ್ತು ನನಗೂ ಇದೆ; ನಿನ್ನ ಸಂಸ್ಕಾರ ನನ್ನದ್ದಲ್ಲ. ನಾನು ನಿನ್ನ ರೀತಿ ಅಲ್ಲ.

ನಿನ್ನಂತಹ ಅದೆಷ್ಟೋ ಜನರನ್ನು ನೋಡಿದ್ದೇನೆ. ರಾಜ್ಯಸಭಾ ಚುನಾವಣಾ ವೇಳೆ ನನ್ನ ಮನೆ‌ ಸುತ್ತಲೂ ಓಡಾಡಿದೆ. ಅದನ್ನು ಬಹಿರಂಗಪಡಿಸಬೇಕಾ? ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ ಗಿರಾಕಿ ನೀನು, ಬಿಜೆಪಿಗೆ ಸೇರಿ ನನ್ನ ಬಗ್ಗೆ ಮಾತನಾಡುತ್ತೀಯಾ’ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com