ವಿಧಾನಸಭೆಯಿಂದ ಪರಿಷತ್ ಚುನಾವಣೆ: ಕಾಂಗ್ರೆಸ್ ನಿಂದ ಯತೀಂದ್ರ, ಬಿಜೆಪಿಯಿಂದ ಸಿ.ಟಿ ರವಿ, ಮಾಧುಸ್ವಾಮಿ ಆಯ್ಕೆಗೆ ಒಲವು!

ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಮತ್ತು ಬಿಜೆಪಿಯಿಂದ ಹಿರಿಯ ನಾಯಕ ಸಿ.ಟಿ.ರವಿ ಮುಂಚೂಣಿಯಲ್ಲಿದ್ದಾರೆ.
ಯತೀಂದ್ರ, ಮಾಧುಸ್ವಾಮಿ ಮತ್ತು ಸಿ.ಟಿ ರವಿ
ಯತೀಂದ್ರ, ಮಾಧುಸ್ವಾಮಿ ಮತ್ತು ಸಿ.ಟಿ ರವಿ
Updated on

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಮತ್ತು ಬಿಜೆಪಿಯಿಂದ ಹಿರಿಯ ನಾಯಕ ಸಿ.ಟಿ.ರವಿ ಮುಂಚೂಣಿಯಲ್ಲಿದ್ದಾರೆ.

136 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಏಳು ಸ್ಥಾನಗಳನ್ನು, 66 ಶಾಸಕರನ್ನು ಹೊಂದಿರುವ ಬಿಜೆಪಿ ಮೂರು ಮತ್ತು 19 ಶಾಸಕರನ್ನು ಹೊಂದಿರುವುದರಿಂದ ಜೆಡಿಎಸ್ ಒಂದು ಸ್ಥಾನವನ್ನು ಗೆಲ್ಲಬಹುದು.

ಶಾಸಕರಾಗಿದ್ದ ಯತೀಂದ್ರ ವರುಣಾ ವಿಧಾನಸಭಾ ಸ್ಥಾನವನ್ನು 2023 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ತ್ಯಾಗ ಮಾಡಿದ್ದಾರೆ, ಹೀಗಾಗಿ ಅವರನ್ನು ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವ ಭರವಸೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರ ಹೆಸರು ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರ ಮರುನಾಮಕರಣ ಸಾಧ್ಯತೆ ಹೆಚ್ಚಿದೆ. ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಕೆ.ಪಿ.ನಂಜುಂಡಿ ಮತ್ತು ಸಂಗಣ್ಣ ಕರಡಿ ಅವರಿಗೂ ಕೂಡ ಕಾಂಗ್ರೆಸ್ ನಾಯಕತ್ವ ಭರವಸೆ ನೀಡಿದ್ದರಿಂದ ಸ್ಥಾನ ಪಡೆಯಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯತೀಂದ್ರ, ಮಾಧುಸ್ವಾಮಿ ಮತ್ತು ಸಿ.ಟಿ ರವಿ
ವಿಧಾನ ಪರಿಷತ್ ಚುನಾವಣೆ: ನಾಲ್ಕು ಸ್ಥಾನಗಳಿಗೆ ಬಂಡಾಯ ಬಿಸಿ, ತೀವ್ರ ಪೈಪೋಟಿ ಸಾಧ್ಯತೆ

ಉಳಿದ ಸ್ಥಾನಗಳಿಗೆ ತೀವ್ರ ಲಾಬಿ ನಡೆಯುತ್ತಿದೆ. ಮುಖಂಡರಾದ ವಿ.ಎಸ್.ಸುದರ್ಶನ್, ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್.ನಟರಾಜ್ ಗೌಡ, ಐವನ್ ಡಿಸೋಜಾ, ಬೆಂಗಳೂರು ಮಾಜಿ ಮೇಯರ್ ಗಂಗಾಬಿಕಾ ಮಲ್ಲಿಕಾರ್ಜುನ್, ಐಶ್ವರ್ಯ ಮಹದೇವ್, ಕವಿತಾ ರೆಡ್ಡಿ, ಮಹಿಳಾ ಕೋಟಾದಿಂದ ಕಮಲಾಕ್ಷಿ ರಾಜಣ್ಣ, ಎಂ.ಸಿ.ವೇಣುಗೋಪಾಲ್, ಬಿ.ಎಲ್.ಶಂಕರ್, ವಿ.ಎಸ್ ಉಗ್ರಪ್ಪ, ಡಿ.ಟಿ.ವೆಂಕಟೇಶ್, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಡಾ.ಸಿ.ಎಸ್.ದ್ವಾರಕಾನಾಥ್, ಬಿ.ಎಂ.ಸಂದೀಪ್, ಶ್ರೀವತ್ಸ, ಎಸ್.ಎ.ಹುಸೇನ್. ಐದು ಖಾತ್ರಿಗಳ ಅನುಷ್ಠಾನ ಸಮಿತಿಗೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಚ್‌ಎಂ ರೇವಣ್ಣ ಸೇರಿದಂತೆ ಕೆಲ ಮುಖಂಡರು ಲಾಬಿ ನಡೆಸುತ್ತಿದ್ದಾರೆ. ಪಾಲಿಕೆ, ನಿಗಮಗಳಿಗೆ ನೇಮಕಗೊಂಡಿರುವ ಆರತಿ ಕೃಷ್ಣ, ರಘುನಂದನ ರಾಮಣ್ಣ ರೇಸ್‌ನಿಂದ ಹೊರಗುಳಿದಿದ್ದಾರೆ ಎಂದು ಮುಖಂಡರೊಬ್ಬರು ಅಭಿಪ್ರಾಯಪಟ್ಟರು.

ಬಿಜೆಪಿಯಿಂದ ರವಿ ಅವರ ನಾಮನಿರ್ದೇಶನ ಬಹುತೇಕ ಖಚಿತವಾಗಿದೆ. ಏಕೆಂದರೆ ವಿಧಾನ ಪರಿಷತ್ ನಲ್ಲಿ ಬಿಜೆಪಿ ಅವರ ಅನುಭವವನ್ನು ಬಳಸಿಕೊಳ್ಳಲು ಬಯಸುತ್ತದೆ ಎಂದು ಮೂಲಗಳು ತಿಳಿಸಿವೆ. ಎನ್ ರವಿಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರ ಕಟ್ಟಾ ಬೆಂಬಲಿಗರಾದ ಮುನಿರಾಜು ಗೌಡ ಪಿಎಂ ಕೂಡ ಮರುನಾಮಕರಣದ ನಿರೀಕ್ಷೆಯಲ್ಲಿದ್ದಾರೆ.

ಆದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಾಜಿ ಸಚಿವ ಜೆಸಿ ಮಾಧು ಸ್ವಾಮಿ ಅವರನ್ನು ಸದನದಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡುವ ಉದ್ದೇಶದಿಂದ ಎಂಎಲ್‌ಸಿ ಸ್ಥಾನದ ಭರವಸೆ ನೀಡಿದ್ದಾರೆ.

ಯತೀಂದ್ರ, ಮಾಧುಸ್ವಾಮಿ ಮತ್ತು ಸಿ.ಟಿ ರವಿ
ವಿಧಾನ ಪರಿಷತ್ ಚುನಾವಣೆ: ಹಣ, ಉಡುಗೊರೆ ಮೂಲಕ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳ ಆಮಿಷ!

ಆದರೆ ಪಕ್ಷದೊಳಗಿನ ಕೆಲವರು ಅವರ ಆಯ್ಕೆಯನ್ನು ವಿರೋಧಿಸಿದ್ದಾರೆ, ಏಕೆಂದರೆ ಅವರು ಪಕ್ಷದ ನಿಷ್ಠಾವಂತರಲ್ಲ ಎಂದು ಅವರು ಭಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಮ್ಮ ಪಕ್ಷದಲ್ಲಿ ಸಾಕಷ್ಟು ಉತ್ತಮ ವಾಗ್ಮಿಗಳಿದ್ದಾರೆ, ಆದರೆ ಭವಿಷ್ಯದಲ್ಲಿ ಪಕ್ಷ ಸಂಘಟನೆಗೆ ಕೊಡುಗೆ ನೀಡುವವರು ನಮಗೆ ಬೇಕು ಎಂದು ಬಿಜೆಪಿ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಹಾಗೂ ಮಾಜಿ ಎಂಎಲ್ ಸಿ ಅಶ್ವತ್ಥ್ ನಾರಾಯಣಗೌಡ ಹೆಸರು ಕೂಡ ಹರಿದಾಡುತ್ತಿದೆ.

ಜೆಡಿಎಸ್ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೆ ಹಾಲಿ ಎಂಎಲ್ ಸಿ ಬಿ.ಎಂ.ಫಾರೂಕ್ ಮರುನಾಮಕರಣದ ನಿರೀಕ್ಷೆಯಲ್ಲಿದ್ದಾರೆ, ಯಶವಂತಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಜವರಾಯಿಗೌಡ ಕೂಡ ಪರಿಷತ್ ಗೆ ನಾಮ ನಿರ್ದೇಶನಗೊಳ್ಳಲು ಉತ್ಸುಕರಾಗಿದ್ದಾರೆ.

ಮೇ 27: ಅಧಿಸೂಚನೆ

ಜೂನ್ 3: ನಾಮನಿರ್ದೇಶನಕ್ಕೆ ಕೊನೆಯ ದಿನಾಂಕ

ಜೂನ್ 13: ಮತದಾನ ಮತ್ತು ಎಣಿಕೆ ದಿನಾಂಕ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com