ಪ್ರಧಾನಿ ಮೋದಿ ಈ ಬಾರಿ ಗೆದ್ದರೆ ಪ್ರತಿ ಹಳ್ಳಿಯಲ್ಲೂ ತಮ್ಮ ದೇವಸ್ಥಾನ ನಿರ್ಮಿಸುತ್ತಾರೆ: ಶಿವರಾಜ್ ತಂಗಡಗಿ

ಪ್ರಧಾನಿ ನರೇಂದ್ರ ಮೋದಿಯವರು ತಾವೇ ದೇವರೆಂಬ ಭ್ರಮೆಯಲ್ಲಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದರೆ ಮೋದಿ ಅವರು ಪ್ರತಿ ಹಳ್ಳಿಯಲ್ಲಿಯೂ ತಾವೇ ತಮ್ಮ ದೇವಸ್ಥಾನಗಳನ್ನು ನಿರ್ಮಿಸಿಕೊಳ್ಳುತ್ತಾರೆ ಎಂದು ಸಚಿವ ಶಿವರಾಜ್ ತಂಗಡಗಿ ಶನಿವಾರ ಹೇಳಿದ್ದಾರೆ.
ಶಿವರಾಜ್ ತಂಗಡಗಿ
ಶಿವರಾಜ್ ತಂಗಡಗಿ
Updated on

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿಯವರು ತಾವೇ ದೇವರೆಂಬ ಭ್ರಮೆಯಲ್ಲಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದರೆ ಮೋದಿ ಅವರು ಪ್ರತಿ ಹಳ್ಳಿಯಲ್ಲಿಯೂ ತಾವೇ ತಮ್ಮ ದೇವಸ್ಥಾನಗಳನ್ನು ನಿರ್ಮಿಸಿಕೊಳ್ಳುತ್ತಾರೆ ಎಂದು ಸಚಿವ ಶಿವರಾಜ್ ತಂಗಡಗಿ ಶನಿವಾರ ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನೂ ಹೊಂದಿರುವ ತಂಗಡಗಿ ಅವರು, ಪ್ರಧಾನಿಯವರ ಹೇಳಿಕೆಗಳು ದೇಶದ ಪ್ರತಿ ಹಳ್ಳಿಯಲ್ಲಿ ಅವರ ದೇವಾಲಯಗಳನ್ನು ನಿರ್ಮಿಸುವಂತೆ ಮಾಡುತ್ತದೆ. ಮೋದಿ ತಾವೇ ದೇವರು, ದೇವರು ಸಹ ತಮ್ಮ ಭಕ್ತರು ಎಂಬ ಹುಚ್ಚಿನಲ್ಲಿದ್ದಾರೆ. ಬಿಜೆಪಿ ಜನಪ್ರತಿನಿಧಿಗಳು ಮೋದಿ ದೇವಾಲಯ ನಿರ್ಮಿಸಿ, ಜಪ, ತಪದಲ್ಲಿ ಮಗ್ನರಾಗಿರಬೇಕಾಗುತ್ತದೆ ಎಂದು ಹೇಳಿದರು.

ಇತ್ತೀಚೆಗೆ ಪ್ರಧಾನಿ ಮೋದಿಯವರು ರಾಷ್ಟ್ರೀಯ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ನನ್ನ ತಾಯಿ ಜೀವಂತ ಇದ್ದಾಗ, ನಾನು ಜೈವಿಕವಾಗಿ ಜನಿಸಿದ್ದೇನೆ ಎಂದು ನಂಬುತ್ತಿದ್ದೆ. ಆಕೆ ನಿಧನರಾದ ಬಳಿಕ, ನನ್ನ ಎಲ್ಲ ಅನುಭವಗಳನ್ನು ಗಮನಿಸಿದಾಗ, ನನ್ನನ್ನು ಪರಮಾತ್ಮನೇ ಕಳುಹಿಸಿದ್ದು ಎನ್ನುವುದು ನನಗೆ ಮನವರಿಕೆಯಾಗಿದೆ. ಈ ಚೈತನ್ಯವು ತನ್ನ ಜೈವಿಕ ದೇಹದಿಂದ ಬಂದಿರಲಾರದು. ನಾನು ದೇವರು ಕಳುಹಿಸಿದ ಸಾಧನವಲ್ಲದೆ ಬೇರೇನೂ ಅಲ್ಲ ಎಂದು ತಿಳಿಸಿದ್ದರು. ಅವರ ಈ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಶಿವರಾಜ್ ತಂಗಡಗಿ
ಪ್ರಧಾನಿ ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ; ಸಚಿವ ಶಿವರಾಜ್ ತಂಗಡಗಿ ವಿರುದ್ಧ ದೂರು ದಾಖಲು

ಭಗವಾನ್ ಜಗನ್ನಾಥ ಪ್ರಧಾನಿ ಮೋದಿಯ ಭಕ್ತ ಎಂಬ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ತಂಗಡಗಿ, ‘ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಗೆದ್ದರೆ ಎಲ್ಲೆಂದರಲ್ಲಿ ಅವರ ದೇಗುಲಗಳನ್ನು ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಲಿದೆ. ರಾಮ ಮಂದಿರ ನಿರ್ಮಾಣವಾಗಿದೆ ಮತ್ತು ಇನ್ನು ಕೆಲವು ದೇಗುಲಗಳು ನಿರ್ಮಾಣವಾಗುತ್ತಿವೆ. ‘ಈಗ (ಅವರು) ನನ್ನದೇ ಮಂದಿರ ನಿರ್ಮಾಣವಾಗಬೇಕು’ ಎಂಬ ರೀತಿಯ ಹೇಳಿಕೆ ನೀಡಿದ್ದಾರೆ' ಎಂದು ಜಿಲ್ಲೆಯ ಕಾರಟಗಿಯಲ್ಲಿ ತಂಗಡಗಿ ಸುದ್ದಿಗಾರರಿಗೆ ತಿಳಿಸಿದರು.

‘ಜನರು ಈ ಬಾರಿ ಅವಕಾಶ ಕೊಟ್ಟರೆ ಹಳ್ಳಿಗೊಂದು ದೇವಸ್ಥಾನ ಕಟ್ಟಬೇಕು’ ಎಂದು ಹೇಳುವ ಮಟ್ಟಕ್ಕೆ ಮೋದಿ ಮನಸ್ಸು ತಲುಪಿದೆ. ಜನಪ್ರತಿನಿಧಿಗಳು ಜನಸೇವಕರೇ ಹೊರತು ದೇವರಲ್ಲ. ಅವರು (ಬಿಜೆಪಿ ನಾಯಕರು) ಪುರಿ ಜಗನ್ನಾಥ ಮೋದಿಯ ಭಕ್ತ ಎಂದು ಹೇಳುತ್ತಾರೆ. ದೇವರು ಅವರ ಭಕ್ತನಾಗಿದ್ದರೆ, ಬಿಜೆಪಿ ನಾಯಕರ ಮನಸ್ಥಿತಿ ಎಲ್ಲಿಗೆ ತಲುಪಿದೆ ಎಂಬುದನ್ನು ನೀವು ಊಹಿಸಬಹುದು' ಎಂದು ಹೇಳಿದರು.

ತಪ್ಪಾಗಿ ತಾವು ಹೇಳಿಕೆಯನ್ನು ನೀಡಿದ್ದೇನೆ ಎಂದ ಒಡಿಶಾದ ಜಗನ್ನಾಥ್ ಪುರಿಯ ಬಿಜೆಪಿ ಅಭ್ಯರ್ಥಿ ಪಾತ್ರಾ, ಜನರಲ್ಲಿ ಕ್ಷಮೆಯಾಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com