ಜೂನ್ 4 ಲೋಕಸಭೆ ಚುನಾವಣೆ ಫಲಿತಾಂಶ: ಕರ್ನಾಟಕ ಬಿಜೆಪಿಯಲ್ಲಿ ಪ್ರಮುಖ ಬದಲಾವಣೆ ನಿರೀಕ್ಷೆ!

ರಾಜ್ಯ ಬಿಜೆಪಿ ಘಟಕವು ಮುಂಬರುವ ತಿಂಗಳುಗಳಲ್ಲಿ ಬಹುಶಃ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಪುನಶ್ಚೇತನ ಕಾಣುವ ಸಾಧ್ಯತೆಯಿದೆ. ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಅವರ ದಿಢೀರ್ ನಿರ್ಗಮನವು ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳನ್ನು ಸೂಚಿಸುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಬಿಜೆಪಿ ಘಟಕವು ಮುಂಬರುವ ತಿಂಗಳುಗಳಲ್ಲಿ ಬಹುಶಃ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಪುನಶ್ಚೇತನ ಕಾಣುವ ಸಾಧ್ಯತೆಯಿದೆ. ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಅವರ ದಿಢೀರ್ ನಿರ್ಗಮನವು ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಆಗುವ ಲಕ್ಷಣಗಳನ್ನು ತೋರುತ್ತಿದೆ.

ರಾಜ್ಯ ಬಿಜೆಪಿಯಲ್ಲಿ ಎರಡು ಶಕ್ತಿಗಳಾದ ಬಿ.ಎಲ್.ಸಂತೋಷ್ ಮತ್ತು ಬಿ.ಎಸ್.ಯಡಿಯೂರಪ್ಪ ಇಬ್ಬರನ್ನೂ ಬದಿಗೆ ಸರಿಸಿ ಸಂಸತ್ತು ಚುನಾವಣಾ ಫಲಿತಾಂಶದ ನಂತರ ದೊಡ್ಡ ಮಟ್ಟದಲ್ಲಿ ಬದಲಾವಣೆಗಳನ್ನು ಜಾರಿಗೆ ತರುವ ನಿರೀಕ್ಷೆಯಿದೆ. ಬಿಜೆಪಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 15ರಿಂದ 16 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಕಾಂಗ್ರೆಸ್ 12ರಿಂದ 13 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.

ಬಿಜೆಪಿ ಕೇಂದ್ರ ನಾಯಕತ್ವವು ಹರ್ಯಾಣ ಮತ್ತು ಮಧ್ಯಪ್ರದೇಶದಲ್ಲಿ ನಾಯಕತ್ವದ ಬದಲಾವಣೆಗೆ ಕೆಲಸ ಮಾಡುತ್ತಿದೆ, ಇದು ಪಕ್ಷವು ರಾಷ್ಟ್ರೀಯವಾಗಿ ತನ್ನನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ ಎಂಬುದರ ಸೂಚನೆಯಾಗಿದೆ. ಎನ್ ಡಿಎ ಪಾಲುದಾರ ಜೆಡಿಎಸ್ ಎದುರಿಸುತ್ತಿರುವ ಪ್ರಸ್ತುತ ಸವಾಲುಗಳು ಅಲ್ಪಾವಧಿಯಲ್ಲಿ ಬಿಜೆಪಿಗೆ ಅನನುಕೂಲವಾಗಬಹುದು, ಆದರೆ "ನಾವು ಭವಿಷ್ಯದಲ್ಲಿ ಬಲಶಾಲಿಯಾಗುತ್ತೇವೆ" ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಕಳೆದ ಕೆಲವು ತಿಂಗಳುಗಳಲ್ಲಿ ಅಶಿಸ್ತು ಮತ್ತು ಬಂಡಾಯವನ್ನು ಕಂಡಿದೆ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ನಡೆಸಲು ಯತ್ನಿಸಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಹಿರಂಗವಾಗಿಯೇ ಬಂಡಾಯವೆದ್ದಿದ್ದಾರೆ. ಇತರ ಆಂತರಿಕ ಕಲಹಗಳು ಮತ್ತು ಬಂಡಾಯಗಳೂ ಪಕ್ಷಕ್ಕೆ ಸವಾಲಾಗಿವೆ. ಇತ್ತೀಚೆಗೆ ಮೂರು ಬಾರಿ ಉಡುಪಿ ಶಾಸಕರಾಗಿದ್ದ ರಘುಪತಿ ಭಟ್ ಅವರು ಬಂಡಾಯದ ನಂತರ ಪಕ್ಷದಿಂದ ಹೊರಹಾಕಲ್ಪಟ್ಟರು.

ಸಾಂದರ್ಭಿಕ ಚಿತ್ರ
ಅಡ್ಡಿಯಾಗದ ಪ್ರಜ್ವಲ್ ರೇವಣ್ಣ ಪ್ರಕರಣ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತಷ್ಟು ಗಟ್ಟಿ!

ಈ ಬಗ್ಗೆ ರಘುಪತಿ ಭಟ್ ಅವರನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಸಂಪರ್ಕಿಸಿದಾಗ, ನಾನು ಪಕ್ಷದಲ್ಲಿ ಅತ್ಯಂತ ಶಿಸ್ತುಬದ್ಧನಾಗಿದ್ದೆ. ಆದರೆ ಶಾಸಕನಾಗಿದ್ದ ನನಗೆ 2023ರಲ್ಲಿ ವಿನಾಕಾರಣಗಳಿಂದ ವಿಧಾನಸಭೆ ಟಿಕೆಟ್ ನಿರಾಕರಿಸಿದ ಬಳಿಕ ಪಕ್ಷದ ನಾಯಕತ್ವದ ಜತೆ ಮಾತನಾಡಿದಾಗ ಪರಿಷತ್ ಸದಸ್ಯನನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ವಿಧಾನ ಪರಿಷತ್ ಟಿಕೆಟ್ ಕೂಡ ನಿರಾಕರಿಸಿ ನನ್ನ ಸ್ಥಾನಕ್ಕೆ ನನ್ನ ಕಿರಿಯ ಶ್ರೇಣಿಯವರನ್ನು ನಿಲ್ಲಿಸಿದಾಗ, ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷವು ಪಾರದರ್ಶಕವಲ್ಲದ ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳನ್ನು ಅಳವಡಿಸಿಕೊಂಡಾಗ, ಬಂಡಾಯವೊಂದೇ ನಮಗೆ ಉಳಿದಿರುವ ಆಯ್ಕೆಯಾಗುತ್ತದೆ ಎಂದರು.

ಕೇಂದ್ರ ನಾಯಕತ್ವವು ಈ ಎಲ್ಲವನ್ನು ಪರಿಗಣನೆಗೆ ತೆಗೆದುಕೊಂಡಿದೆ. ಜಾತಿ ಸವಾಲುಗಳು ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಬಲ ಅಸ್ತಿತ್ವ ಪಕ್ಷವನ್ನು ಪುನರುಜ್ಜೀವನಗೊಳಿಸಲು ಚಿಂತನೆಗೆ ಪ್ರಮುಖ ಕಾರಣವಾಗಿದೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ ತ್ರಿಕೋನ ಸ್ಪರ್ಧೆ ಇತ್ತು ಆದರೆ ಜೆಡಿಎಸ್ ದುರ್ಬಲಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡಬಹುದು. ಆ ಬದಲಾವಣೆಗೆ ಪಕ್ಷ ಸಜ್ಜಾಗುತ್ತಿದೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ಹೇಳುತ್ತಾರೆ.

ಬಿಜೆಪಿ ಕೇಂದ್ರ ನಾಯಕತ್ವವು ಈಗ ಕರ್ನಾಟಕದತ್ತ ಹೆಚ್ಚು ಸ್ಪಷ್ಟವಾಗಿ ನೋಡುತ್ತಿದೆ. ಕೆಲವು ನಾಯಕರು ತಮ್ಮದೇ ಆದ ಹಿಡನ್ ಅಜೆಂಡಾಗಳೊಂದಿಗೆ ದೆಹಲಿಗೆ ಕೊಂಡೊಯ್ಯುತ್ತಿರುವ ಸುಳ್ಳು ಮತ್ತು ಅರ್ಧ ಸತ್ಯಗಳ ಬಲೆಗೆ ಬೀಳುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com