BJP ಆಡಳಿತಾವಧಿಯಲ್ಲಿ ರೈತರಿಗೆ ಯಾವ ನೋಟಿಸ್ ನೀಡಿಲ್ಲ, ಜಮೀರ್ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ‌: ಸಂಸದ ಬೊಮ್ಮಾಯಿ

ನಾನು ವಕ್ಪ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವಿಡಿಯೊ ಹರಿಬಿಟ್ಟು ಜಮೀರ್ ಅಪಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ರೈತರಿಗೆ ಯಾವ ನೋಟಿಸ್ ನೀಡಿಲ್ಲ. ಆದರೆ, ಸಚಿವ ಜಮೀರ್ ಅಹಮದ್ ಖಾನ್ ಹಳೆಯ ವಿಡಿಯೋ ಬಿಡುಗಡೆ ಮಾಡಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ವಕ್ಪ್ ಬೋರ್ಡ್ ಸಮಾರಂಭದಲ್ಲಿ ಮಾತನಾಡಿರುವ ಹಳೆಯ ವಿಡಿಯೊ ಹರಿಬಿಟ್ಟು ಜಮೀರ್ ಅಪಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ನಾನು ಯಾವುದೇ ವಕ್ಪ್ ಬೋರ್ಡ್ ಸಭೆ ಮಾಡಿಲ್ಲ. ವಕ್ಪ್ ಬೋರ್ಡ್ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಪ್ ಆಸ್ತಿ ಕಬಳಿಸಿರುವ ಕಾಂಗ್ರೆಸ್ ನಾಯಕರಿಂದ ವಕ್ಪ್ ಆಸ್ತಿ ವಶಪಡಿಸಿಕೊಳ್ಳಬೇಕೆಂದು ಹೇಳಿರುವುದನ್ನು ತಿರುಚಿದ್ದಾರೆ. ಆ ಸಂದರ್ಭದಲ್ಲಿ ರೈತರ ಜಮೀನಿಗೆ ನೊಟೀಸ್ ಕೊಡುವುದಾಗಲಿ, ಪಹಣಿ ತಿದ್ದುಪಡಿ ಮಾಡುವುದಾಗಲಿ ಯಾವೂದೂ ವಿಷಯ ನಮ್ಮ ಮುಂದೆ ಪ್ರಸ್ತಾಪವಾಗಿರಲಿಲ್ಲ. ನಾನು ಅಂದು ಹೇಳಿರುವುದು ಅನ್ವರ್ ಮಾನಿಪ್ಪಾಡಿ ಅವರ ಸಮಿತಿ ವರದಿ ನೀಡಿರುವಂತೆ ಕಾಂಗ್ರೆಸ್ ನ್ ಕೆಲವು ದೊಡ್ಡ ನಾಯಕರು ಮೋಸದಿಂದ ಎಷ್ಡೆಷ್ಟು ವಕ್ಪ್ ಆಸ್ತಿ ನುಂಗಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು.

ಬಸವರಾಜ ಬೊಮ್ಮಾಯಿ
ರಾಜ್ಯ ಸರ್ಕಾರದಿಂದ ವಕ್ಫ್ ಕಾನೂನು ದುರ್ಬಳಕೆ: ಸಂಸದ ಬಸವರಾಜ ಬೊಮ್ಮಾಯಿ ಕಿಡಿ

ನಾವು ರೈತರಿಗೆ ಯಾವುದೇ ನೊಟಿಸ್ ಕೊಟ್ಟಿಲ್ಲ ರೈತರ ಜಮೀನು ವಶ ಪಡೆದುಕೊಂಡಿಲ್ಲ. ಸಚಿವ ಜಮೀರ್ ಅವರು ರೈತರಿಗೆ ನೋಟಿಸ್ ಕೊಡುವ ಮೊದಲು ಕಾಂಗ್ರೆಸ್ ನಾಯಕರು ಎಲ್ಲೆಲ್ಲಿ ವಕ್ಪ್ ಆಸ್ತಿ ಹಡಪ್ ಮಾಡಿದ್ದಾರೆ‌ ಅದನ್ನು ಕೂಡಲೇ ರಿಕವರಿ ಮಾಡಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುವಂತೆ ಹೇಳಿರುವುದು ಕಣ್ಣೊರೆಸುವ ತಂತ್ರ. ನೋಟಿಸ್ ವಾಪಸ್ ಪಡೆದು ಚುನಾವಣೆ ಮುಗಿದ ನಂತರ ಮತ್ತೆ ನೋಟೀಸ್ ಕೊಡುವುದಿಲ್ಲ ಅನ್ನುವುದು ಏನು ಗ್ಯಾರೆಂಟಿ. ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ನಿಜವಾಗಲೂ ಕಾಳಜಿ, ಗೌರವ ಇದ್ದರೆ, ರೈತರ ಆಸ್ತಿ ಉಳಿಸಬೇಕೆಂಬ ಮನಸ್ಸಿದ್ದರೆ ಕೂಡಲೆ ವಕ್ಪ್ ಗೆಜೆಟ್ ನೊಟಿಫಿಕೇಶನ್ ರದ್ದು ಮಾಡಬೇಕೆಂದು ಆಗ್ರಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com