ಪ್ರಿಯಾಂಕಾ ಗಾಂಧಿ ದೇಶದ ಭವಿಷ್ಯದ ನಾಯಕಿ: ವಯನಾಡು ಪ್ರಚಾರದಲ್ಲಿ ಡಿಕೆ ಶಿವಕುಮಾರ್ ಹೇಳಿಕೆ

ಪ್ರಿಯಾಂಕಾ ಗಾಂಧಿ ಅವರ ಆಯ್ಕೆಯ ಮೂಲಕ, ಶೋಷಿತರ ಬಡವರ ತಳವರ್ಗದ ಜನರ ಪರವಾದ ಪ್ರಬಲವಾದ ಮತ್ತೊಂದು ದನಿ ಸಂಸತ್ತಿನಲ್ಲಿ ಮೊಳಗಿದಂತಾಗುತ್ತದೆ. ಈ ಅವಕಾಶವನ್ನು ದಯವಿಟ್ಟು ಕೈ ಚೆಲ್ಲಬೇಡಿ ಎಂದು ಮನವಿ ಮಾಡಿದರು.
DK Shivakumar
ಡಿ.ಕೆ ಶಿವಕುಮಾರ್
Updated on

ವಯನಾಡು: ವಯನಾಡಿನ ಜನ ಕೇವಲ ಒಬ್ಬ ಸಂಸತ್ ಸದಸ್ಯರನ್ನು ಆಯ್ಕೆ ಮಾಡುತ್ತಿಲ್ಲ. ಬದಲಾಗಿ ಈ ದೇಶದ ಭವಿಷ್ಯದ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಆಯ್ಕೆ ಮಾಡುತ್ತಿದ್ದೀರಿ. ಇದು ವಯನಾಡಿನ ಹಾಗೂ ಕೇರಳದ ಜನತೆಗೆ ಸಿಕ್ಕಿರುವ ಸುವರ್ಣ ಅವಕಾಶ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರ ಪರವಾಗಿ ಕೇರಳದ ತಿರುವಂಬಾಡಿ ವಿಧಾನಸಭಾ ಕ್ಷೇತ್ರದ ಮುಕ್ಕಾಂ ನಲ್ಲಿ ಚುನಾವಣಾ ಪ್ರಚಾರ ನಡೆಸಿ, ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ಅವರ ಆಯ್ಕೆಯ ಮೂಲಕ, ಶೋಷಿತರ ಬಡವರ ತಳವರ್ಗದ ಜನರ ಪರವಾದ ಪ್ರಬಲವಾದ ಮತ್ತೊಂದು ದನಿ ಸಂಸತ್ತಿನಲ್ಲಿ ಮೊಳಗಿದಂತಾಗುತ್ತದೆ. ಈ ಅವಕಾಶವನ್ನು ದಯವಿಟ್ಟು ಕೈ ಚೆಲ್ಲಬೇಡಿ ಎಂದು ಮನವಿ ಮಾಡಿದರು. ಪ್ರಿಯಾಂಕಾ ಗಾಂಧಿಯವರು ತಮ್ಮ ಸಮಯ, ತಮ್ಮ ಪ್ರೀತಿ, ಚಿಂತನೆಯನ್ನು ಕೇರಳದ ಅಭಿವೃದ್ಧಿಗಾಗಿ ಮುಡುಪಾಗಿ ಇಟ್ಟಿದ್ದಾರೆ ಮತ್ತು ಇಡಲಿದ್ದಾರೆ ಎಂದು ಹೇಳಿದರು.

ಮೂರು ದಿನಗಳ ಹಿಂದೆ ಪ್ರಿಯಾಂಕಾ ಗಾಂಧಿಯವರು ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ರಾತ್ರಿ ವೇಳೆ ಬಂಡಿಪುರದಲ್ಲಿ ವಾಹನ ಸಂಚಾರ ಕುರಿತು ಚರ್ಚೆ ನಡೆಸಿದರು. ಪ್ರಿಯಾಂಕಾ ಗಾಂಧಿ ಅವರು ಆಯ್ಕೆಯಾದ ನಂತರ, ಈ ವಿಚಾರವಾಗಿ ಎರಡು ರಾಜ್ಯಗಳ ಪ್ರತಿನಿಧಿಗಳು ಕುಳಿತು ಸಮಸ್ಯೆ ಬಗೆಹರಿಸುವ ಬಗ್ಗೆ ಯೋಚಿಸಲಾಗುವುದು" ಎಂದು ಹೇಳಿದರು. ಎರಡು ತಿಂಗಳ ಹಿಂದೆ ನಾನು ವೈಯಕ್ತಿಕವಾಗಿ ಸಮೀಕ್ಷೆ ನಡೆಸುವ ತಂಡವನ್ನು ಕಳುಹಿಸಿ, ಕಾಂಗ್ರೆಸ್ ಪಕ್ಷದ ಗೆಲುವಿನ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದೆ. ಎಲ್ ಡಿ ಎಫ್ ಹಾಗೂ ಬಿಜೆಪಿ ನಾಯಕರೇ ಪ್ರಿಯಾಂಕಾ ಗಾಂಧಿ ಅವರು ಗೆದ್ದೇ ಗೆಲ್ಲುತ್ತಾರೆ, ಈ ಕ್ಷೇತ್ರದ ಜನರಿಗೆ ಭವಿಷ್ಯದ ರಾಷ್ಟ್ರೀಯ ನಾಯಕಿಯನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ, ನಾವುಗಳು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಪ್ರಿಯಾಂಕ ಗಾಂಧಿ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದ್ದರು" ಎಂದು ಹೇಳಿದ್ದರು.

DK Shivakumar
ಬಡವರ ಲೂಟಿ ಮಾಡಲೆಂದೇ ಹೊಸ ತೆರಿಗೆ ವ್ಯವಸ್ಥೆ ರಚನೆ: ಮೋದಿ ಸರ್ಕಾರದ ವಿರುದ್ಧ Rahul Gandhi ವಾಗ್ದಾಳಿ!

ರಾಹುಲ್ ಗಾಂಧಿ ಅವರ ವಿರುದ್ಧ ಸಂಚು ಮಾಡಿ ಸಂಸತ್ ಸದಸ್ಯ ಸ್ಥಾನದಿಂದ ಕೆಳಗೆ ಇಳಿಸಲಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡಿನಿಂದ ಮತ್ತೆ ಆಯ್ಕೆ ಆಗುತ್ತಾರೆ ಎನ್ನುವ ನಂಬಿಕೆ ನಮಗಿತ್ತು. ವಯನಾಡಿನ ಜನರನ್ನು ಕಾಂಗ್ರೆಸ್ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಮೇಥಿಯಿಂದ ವಯನಾಡಿಗೆ ಬಂದಂತಹ ರಾಹುಲ್ ಗಾಂಧಿ ಅವರಿಗೆ ಮರುಜನ್ಮ ನೀಡಿದವರು ನೀವು. ಜೊತೆಗೆ ಕಾಂಗ್ರೆಸ್ ಈ ದೇಶದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎನ್ನುವ ಸಂದೇಶವನ್ನು ಇಡೀ ದೇಶಕ್ಕೆ ಕೊಟ್ಟವರು ನೀವು" ಎಂದರು.

ಕರ್ನಾಟಕ ಅಥವಾ ತೆಲಂಗಾಣದಲ್ಲಿ ಸ್ಪರ್ಧಿಸಬೇಕು ಎಂದು ನಾನು ಮತ್ತೆ ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಅವರು ರಾಹುಲ್ ಗಾಂಧಿಯವರಿಗೆ ಮನವಿ ಮಾಡಿದೆವು. ನಿಮ್ಮನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ಹೇಳಿದ್ದೆವು. ಏಕೆಂದರೆ ಈ ಹಿಂದೆ ಇಂದಿರಾ ಗಾಂಧಿಯವರು ಹಾಗೂ ಸೋನಿಯಾ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧಿಸಿದ್ದರು. ಹೀಗೆ ಹೇಳಿದಾಗ ರಾಹುಲ್ ಗಾಂಧಿಯವರು ವಯನಾಡಿನ ಜನ ನನಗೆ ಸಾಕಷ್ಟು ಪ್ರೀತಿ ವಿಶ್ವಾಸವನ್ನು ತೋರಿಸಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ನಾನು ಬಿಟ್ಟು ಬರುವುದಿಲ್ಲ ಎಂದು ಉತ್ತರಿಸಿದ್ದರು" ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಉತ್ತಮ ಮತವನ್ನು ನೀಡಿದ್ದೀರಿ. ಈ ಬಾರಿಯೂ ಅದೇ ರೀತಿ, ಯುಪಿಎ ಜೊತೆ ಬೆಂಬಲವಾಗಿ ನಿಂತು ಇಂಡಿಯಾ ಒಕ್ಕೂಟದ ಶಕ್ತಿಯನ್ನು ದೇಶಕ್ಕೆ ತಿಳಿಸಬೇಕು. ಭವಿಷ್ಯದ ಫಲಿತಾಂಶವನ್ನು ಈಗಲೇ ನೀವು ಹೇಳಬೇಕು ಎಂದರು. ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ನೆಹರು ಕುಟುಂಬದ ಕೊಡುಗೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಈ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಈ ದೇಶದ ಪ್ರಧಾನಿಯಾಗುವ ಅವಕಾಶ ಸಿಕ್ಕಿತು. ಆದರೆ ಈ ದೇಶದ ಭವಿಷ್ಯ ಮುಖ್ಯ ಎಂದು ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಅವರು ಘೋಷಿಸಿದರು. ಈ ರೀತಿಯಾಗಿ ಈ ಕುಟುಂಬವು ದೇಶಕ್ಕಾಗಿ ಪ್ರಾಣ, ಅಧಿಕಾರವನ್ನೇ ತ್ಯಾಗ ಮಾಡಿದೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com