ನಮ್ಮ ಮನೆ ಸುಟ್ಟಿದ್ದು ರಜಾಕಾರರೇ ಹೊರತು ಮುಸ್ಲಿಮರಲ್ಲ: ಸಿಎಂ ಯೋಗಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಯೋಗಿ ಆದಿತ್ಯನಾಥ್ ಅವರಿಗೆ ಖರ್ಗೆ ಅವರ ಇತಿಹಾಸ ಗೊತ್ತಿಲ್ಲ. ಹೌದು, ರಜಾಕರು ನಮ್ಮ ಮನೆ ಸುಟ್ಟು ಹಾಕಿದರು. ಸುಟ್ಟಿದ್ದು ರಜಾಕಾರರೇ ಹೊರತು ಮುಸ್ಲಿಮರಲ್ಲ, ಪ್ರತಿಯೊಂದು ಸಮುದಾಯದಲ್ಲೂ ಕೆಟ್ಟವರು, ಒಳ್ಳೆಯವರು ಇದ್ದೇ ಇರುತ್ತಾರೆ. ಒಬ್ಬರು ಮಾಡಿದ ಕೆಲಸಕ್ಕೆ ಇಡೀ ಸಮುದಾಯವನ್ನು ದೂಷಿಸಲು ಆಗುತ್ತಾ?.
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ನಮ್ಮ ಮನೆಯನ್ನು ಸುಟ್ಟಿದ್ದು ರಜಾಕಾರರು, ಮುಸ್ಲಿಮರಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬುಧವಾರ ತಿರುಗೇಟು ನೀಡಿದ್ದಾರೆ.

ರಜಾಕಾರರಿಂದ ತನ್ನ ತಾಯಿ, ಸಹೋದರಿ ಸುಟ್ಟು ಹೋದರೂ ಖರ್ಗೆ ಮೌನ ವಹಿಸಿದ್ದಾರೆ’ ಎಂಬ ಯೋಗಿ ಆದಿತ್ಯನಾಥ ಟೀಕೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆಯವರು, ಹೌದು 1948 ರಲ್ಲಿ, ರಜಾಕಾರರು ಮಲ್ಲಿಕಾರ್ಜುನ ಖರ್ಗೆಯವರು ಅವರ ಮನೆಯನ್ನು ಸುಟ್ಟು ಹಾಕಿದ್ದರು. ಘಟನೆಯಲ್ಲಿ ಖರ್ಗೆಯವರ ತಾಯಿ ಮತ್ತು ಸಹೋದರಿ ಮೃತಪಟ್ಟಿದ್ದು, ಅದೃಷ್ಟವಶಾತ್ ಖರ್ಗೆಯವರು ಪ್ರಾಣಾಪಾಯದಿಂದ ಪಾರಾಗಿದ್ದು. ಆದರೂ ಅವರು ಕುಗ್ಗಲಿಲ್ಲ. 9 ಬಾರಿ ಶಾಸಕರಾಗಿ, ಎರಡು ಬಾರಿ ಲೋಕಸಭೆ ಮತ್ತು ರಾಜ್ಯಸಭಾ ಸಂಸದರಾಗಿ, ಕೇಂದ್ರ ಸಚಿವರಾಗಿ, ಲೋಕಸಭೆಯ ನಾಯಕರಾಗಿ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ದುರಂತದ ಹೊರತಾಗಿಯೂ, ಅವರು ಅದನ್ನು ಎಂದಿಗೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಿಲ್ಲ, ಬಲಿಪಶು ಎಂದು ಆಟವಾಡಲಿಲ್ಲ. ದ್ವೇಷವು ಬಿತ್ತುವ ಕೆಲಸ ಮಾಡಲಿಲ್ಲ ಎಂದು ಹೇಳಿದರು.

ಯೋಗಿ ಆದಿತ್ಯನಾಥ್ ಅವರಿಗೆ ಖರ್ಗೆ ಅವರ ಇತಿಹಾಸ ಗೊತ್ತಿಲ್ಲ. ಹೌದು, ರಜಾಕರು ನಮ್ಮ ಮನೆ ಸುಟ್ಟು ಹಾಕಿದರು. ಸುಟ್ಟಿದ್ದು ರಜಾಕಾರರೇ ಹೊರತು ಮುಸ್ಲಿಮರಲ್ಲ, ಪ್ರತಿಯೊಂದು ಸಮುದಾಯದಲ್ಲೂ ಕೆಟ್ಟವರು, ಒಳ್ಳೆಯವರು ಇದ್ದೇ ಇರುತ್ತಾರೆ. ಒಬ್ಬರು ಮಾಡಿದ ಕೆಲಸಕ್ಕೆ ಇಡೀ ಸಮುದಾಯವನ್ನು ದೂಷಿಸಲು ಆಗುತ್ತಾ? ಮುಸ್ಲಿಮರ ಮೇಲೆಲ್ಲ ಆರೋಪ ಮಾಡಲು ಆಗುತ್ತಾ? ಇದೆಲ್ಲ ಈಗ ಅಪ್ರಸ್ತುತ ಚರ್ಚೆ ಎಂದು ತಿಳಿಸಿದರು.

ಪ್ರಿಯಾಂಕ್ ಖರ್ಗೆ
ಓಲೈಕೆಗೆ ಬಿದ್ದು ಮುಸ್ಲಿಂರ ಅಗ್ನಿಜ್ವಾಲೆಗೆ ಬಲಿಯಾದ ನಿಮ್ಮ ತಾಯಿಯ ತ್ಯಾಗವನ್ನೇ ಮರೆತೀರಾ: ಖರ್ಗೆಗೆ ಇತಿಹಾಸ ನೆನಪಿಸಿದ ಯೋಗಿ

ಇವರು ಇಷ್ಟೆಲ್ಲ ಮಾತನಾಡುತ್ತಾರಲ್ಲ ಇನ್ನೂ ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡುತ್ತಾರಾ?... ಮೊದಲು ಬಿಜೆಪಿ, ಆರ್‌ಎಸ್‌ಎಸ್‌ ಸಿದ್ಧಾಂತಗಳಲ್ಲಿ ಸಮಾನತೆ ತರಲಿ. ಬಿಜೆಪಿಯವರು ಅಪಾಯದಲ್ಲಿದ್ದರೆ ಮಾತ್ರ ಆಗ ಹಿಂದೂಗಳು ಅಪಾಯದಲ್ಲಿದ್ದಾರೆಂದು ಬಿಂಬಿಸುತ್ತಾರೆ. ನಿಜಕ್ಕೂ ಅಪಾಯದಲ್ಲಿ ಇರೋರು ಬಿಜೆಪಿಯವರು, ಹಿಂದೂಗಳಲ್ಲ. ತಾವು ಅಪಾಯದಲ್ಲಿ ಇದ್ದಾಗ ಹಿಂದೂಗಳ ಹೆಸರು ಬಳಸಿಕೊಳ್ಳುತ್ತಾರೆ.

ಖರ್ಗೆಯವರಿಗೆ ಇವರು ದೇವಸ್ಥಾನದ ಒಳಗೆ ಬಿಡುತ್ತಾರೆ. ಮನು ಸ್ಮೃತಿ ಪಾಲನೆ ಮಾಡುವ ಎಲ್ಲರೂ ಕೆಟ್ಟವರಾ? 11 ವರ್ಷ ಆಯ್ತು ಮೋದಿ ಅಧಿಕಾರಕ್ಕೆ ಬಂದು. ಏನೇನು ಸಾಧನೆ ಮಾಡಿದ್ದಾರೆ, ಏನೇನು ಕೊಟ್ಟಿದ್ದಾರೆ? ಖರ್ಗೆ ಸಾಹೆಬ್ರ ಮೇಲೆ ಈಗ ಪ್ರೀತಿ ಬಂತಾ? ಕಾನ್ವೆಂಟ್ ದಲಿತ ಎಂದಾಗ ಅನುಕಂಪ ಬರಲಿಲ್ವಾ? ಜಮೀರ್ ಹೇಳಿಕೆ ಬಗ್ಗೆ ಮಾತನಾಡುತ್ತಾರೆ, ಅರಗ ಜ್ಞಾನೇಂದ್ರ ಏನು ಹೇಳಿದ್ದರು ಗೊತ್ತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

82 ನೇ ವಯಸ್ಸಿನಲ್ಲೂ ಬುದ್ಧ-ಬಸವಣ್ಣ-ಅಂಬೇಡ್ಕರ್ ಅವರ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ದೌರ್ಜನ್ಯ ಮತ್ತು ದ್ವೇಷದಿಂದ ಸಂವಿಧಾನವನ್ನು ರಕ್ಷಿಸಲು ಖರ್ಗೆಯವರು ಅವಿರತವಾಗಿ ಹೋರಾಡುತ್ತಿದ್ದಾರೆ. ಅವರ ಈ ಹೋರಾಟ ಅಚಲ ದೃಢವಿಶ್ವಾಸದಿಂದ ಮುಂದುವರೆಯುತ್ತದೆ. ಹೀಗಾಗಿ, ಸಮಾಜದಲ್ಲಿ ದ್ವೇಷ ಬಿತ್ತಿ ಚುನಾವಣೆ ಗೆಲ್ಲುವ ಬದಲು ಮೋದಿ ಸರ್ಕಾರದ ಸಾಧನೆಗಳ ಮೂಲಕ ಗೆಲ್ಲಲು ಯತ್ನಿಸಿದ ಎಂದು ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com