ಕಾರ್ಯಕರ್ತರು ಬೆಟ್ಟಿಂಗ್ ಜಾಲಕ್ಕೆ ಸಿಲುಕದಿರಲಿ ಎಂದು ಯೋಗೇಶ್ವರ್ ಹೇಳಿಕೆ; JDS-BJP ಸತ್ಯಹರಿಶ್ಚಂದ್ರ ವಂಶದ ಒಂದು ಭಾಗ: ಡಿ.ಕೆ ಸುರೇಶ್

ದೇವೇಗೌಡರು ದೇಶದ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜದಲ್ಲಿ ಹಾಗೂ ದಕ್ಷಿಣ ಭಾರತದಿಂದ ಅತ್ಯುನ್ನತ ಸ್ಥಾನಕ್ಕೆ ಏರಿದ ನಾಯಕ. ಹೀಗಾಗಿ ಸಮಾಜದವರು ಅವರ ಮೇಲೆ ಗೌರವ ಇಟ್ಟುಕೊಂಡಿದ್ದಾರೆ. ನನಗೂ ಅವರ ಮೇಲೆ ಗೌರವವಿದೆ
DK Suresh
ಡಿ.ಕೆ ಸುರೇಶ್
Updated on

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಕಾರ್ಯಕರ್ತರು ಬೆಟ್ಟಿಂಗ್ ಜಾಲಕ್ಕೆ ಸಿಲುಕಿ ತೊಂದರೆ ಅನುಭವಿಸದಿರಲಿ ಎಂಬ ಉದ್ದೇಶದಿಂದ ಯೋಗೇಶ್ವರ್ ಹೇಳಿಕೆ ನೀಡಿರಬಹುದು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಚನ್ನಪಟ್ಟಣ ಉಪಚುನಾವಣೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಫಲಿತಾಂಶಕ್ಕೂ ಮುನ್ನವೇ ಸೋಲುವ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ, “ಒಬ್ಬೊಬ್ಬರ ಭಾವನೆ ಒಂದೊಂದು ರೀತಿ ಇದೆ. ಅವರು ಹಾಗೂ ನಮಗೆ ಗೆಲ್ಲುವ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು ಅನಗತ್ಯವಾಗಿ ಬೆಟ್ಟಿಂಗ್ ಕಟ್ಟಿಕೊಂಡು ತೊಂದರೆ ಮಾಡಿಕೊಳ್ಳುತ್ತಾರೋ, ತಮ್ಮಿಂದ ಅವರ ಮನೆಗಳಲ್ಲಿ ಆರ್ಥಿಕ ಸಂಕಷ್ಟವಾಗುತ್ತದೆಯೋ ಎಂದು ಆ ರೀತಿ ಹೇಳಿರಬಹುದು” ಎಂದರು. ಫಲಿತಾಂಶ ಏನಾಗಬಹುದು, ಯೋಗೇಶ್ವರ್ ಅವರು ಯಾಕೆ ಇಷ್ಟು ನಿರಾಸೆಯಾಗಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಫಲಿತಾಂಶ ನಾವು ಗೆಲ್ಲುತ್ತೇವೆ. ಅವರಿಗೆ ನಿಮ್ಮ (ಮಾಧ್ಯಮದವರ) ಮೇಲೆ ಹೇಳಲು ಆಗಿಲ್ಲ. ಹೀಗಾಗಿ ಆ ರೀತಿ ಹೇಳಿದ್ದಾರೆ” ಎಂದರು.

ದೇವೇಗೌಡರು ದೇಶದ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜದಲ್ಲಿ ಹಾಗೂ ದಕ್ಷಿಣ ಭಾರತದಿಂದ ಅತ್ಯುನ್ನತ ಸ್ಥಾನಕ್ಕೆ ಏರಿದ ನಾಯಕ. ಹೀಗಾಗಿ ಸಮಾಜದವರು ಅವರ ಮೇಲೆ ಗೌರವ ಇಟ್ಟುಕೊಂಡಿದ್ದಾರೆ. ನನಗೂ ಅವರ ಮೇಲೆ ಗೌರವವಿದೆ. ರಾಜಕಾರಣ ವಿಚಾರ ಬಂದಾಗ ನಾನು ಹೋರಾಟ ಮಾಡುತ್ತೇನೆ. ಅದರ ಹೊರತಾಗಿ ವೈಯಕ್ತಿಕವಾಗಿ ನನಗೆ ಅವರ ಮೇಲೆ ಗೌರವವಿದೆ” ಎಂದು ತಿಳಿಸಿದರು. ಚುನಾವಣೆ ಸಮಯದಲ್ಲಿ ಜೆಡಿಎಸ್ ನವರು ಮತದಾರರಿಗೆ ಹಣ ಹಂಚಿ ಮತ ಖರೀದಿ ಮಾಡುತ್ತಿದ್ದಾರೆ. ನೀವು ಅದನ್ನು ಪಡೆಯಬೇಡಿ. ಕುಮಾರಸ್ವಾಮಿ ಹಣದ ಹೊಳೆ ಹರಿಸುತ್ತಿದ್ದು, ನೀವು ಅದಕ್ಕೆ ಬಲಿಯಾಗಬೇಡಿ. ನಾವೇ ನಿಮಗೆ ಏನು ಬೇಕೋ ಕೊಡುತ್ತೇವೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಜಮೀರ್ ಅವರು ಕೂಡಲೇ ಸ್ಪಷ್ಟನೆ ನೀಡಿದ್ದಾರೆ ಎಂದರು. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಣದ ಹೊಳೆ ಹರಿಸಿದ್ದಾರೆ. ಇಲ್ಲಿ ಕೆಲಸಕ್ಕೆ, ಸಮಾಜ ಸೇವೆಗೆ ಬೆಲೆ ಇಲ್ಲ. ಇಲ್ಲಿ ಹಣ, ಜಾತಿ, ಧರ್ಮ ಮಾತ್ರ ಜನರಿಗೆ ಬೇಕಾಗಿದೆ ಎಂಬುದು ಸತ್ಯ ಎಂಬ ವಿಚಾರ ಜನರ ಮುಂದಿದೆ. ಕೆಲಸ ಮಾಡಿದ್ದೀನಿ ಮತ ಹಾಕಿ ಎಂದುಕೊಳ್ಳುವ ಪರಿಸ್ಥಿತಿಯಲ್ಲಿ ಯಾವುದಾದರೂ ರಾಜಕಾರಣಿ ಇದ್ದರೆ ಅವರ ರಾಜಕಾರಣ ಕಷ್ಟವಾಗುತ್ತದೆ. ಸುಳ್ಳು ಹೇಳುವುದನ್ನು ಕಲಿಯಬೇಕು. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಬೇರೆ ಬೇರೆ ಸುಳ್ಳು ಹೇಳಬೇಕು” ಎಂದರು.

DK Suresh
ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು NDA ನಿರ್ಧರಿಸಿದೆ- ದೇವೇಗೌಡ; ಯಾರಿಂದಲೂ ಸಾಧ್ಯವಿಲ್ಲ ಎಂದ ಸಿದ್ದರಾಮಯ್ಯ

ಮತ ಪ್ರಚಾರ ಮುಗಿದ ನಂತರ ನಾವು ಕ್ಷೇತ್ರದಿಂದ ಹೊರಗೆ ಹೊರಟು ಹೋದೆವು. ನಂತರ ಮತದಾನ ಮುಗಿದ ಬಳಿಕ ಕ್ಷೇತ್ರಕ್ಕೆ ಹೋಗಿ, ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚೆ ಮಾಡಿದೆವು. ವಿಶ್ಲೇಷಣೆ ಮಾಡುವವರು ಒಬ್ಬೊಬ್ಬರೂ ಒಂದೊಂದು ವಿಶ್ಲೇಷಣೆ ಮಾಡುತ್ತಾರೆ. ನಿಮ್ಮ ಬಗ್ಗೆ ನನ್ನ ವಿಶ್ಲೇಷಣೆ ನಾನು ಹೇಳಿದ್ದೇನೆ. ನೀವು ನನ್ನ ಬಗ್ಗೆ ಯಾವ ರೀತಿ ವಿಶ್ಲೇಷಣೆ ಮಾಡುತ್ತೀರಿ ಎಂದು ಸಂಜೆ ಕಾದು ನೋಡುತ್ತೇನೆ” ಎಂದು ತಿಳಿಸಿದರು.

ದಳದವರು ಗೆಲುವಿನ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ನೀವು ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಾ ಎಂದು ಕೇಳಿದಾಗ, “ಅದಕ್ಕೆ ಇನ್ನು ಸಮಯವಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಅವರು ಸಮಾವೇಶ ಮಾಡಲಿ, ಸಂಭ್ರಮಾಚರಣೆ ಮಾಡಲಿ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಮತಗಟ್ಟೆಯಲ್ಲಿ ತೀರ್ಪು ಕೊಟ್ಟಿರುವವನು ಮತದಾರ. ಯೋಗೇಶ್ವರ್ ಗೆ ಮತ ಇತ್ತು. ಅದನ್ನು ಹಾಕಿದ್ದಾನೆ” ಎಂದರು. ಡಿ.ಕೆ ಸಹೋದರರು ಹಣ ಹಂಚಿಕೆ ಮಾಡಿದ್ದಾರೆ ಎಂಬ ಎನ್ ಡಿಎ ಮೈತ್ರಿಕೂಟಗಳ ಆರೋಪದ ಬಗ್ಗೆ ಕೇಳಿದಾಗ, “ಜೆಡಿಎಸ್ ಹಾಗೂ ಬಿಜೆಪಿಯವರು ಸತ್ಯಹರಿಶ್ಚಂದ್ರ ವಂಶದ ಒಂದು ಭಾಗ” ಎಂದು ತಿಳಿಸಿದರು.

ನಿಮಗಿರುವ ಆತ್ಮವಿಶ್ವಾಸ ಯೋಗೇಶ್ವರ್ ಅವರಿಗಿಲ್ಲ ಎಂದು ಕೇಳಿದಾಗ, “ಅವರು ಅವರ ಅಭಿಪ್ರಾಯ ತಿಳಿಸಿದ್ದಾರೆ. ಅವರ ಕಾರ್ಯಕರ್ತರು ಏನು ಸಂದೇಶ ನೀಡಿದ್ದಾರೋ ಅದನ್ನು ಹೇಳಿದ್ದಾರೆ” ಎಂದು ತಿಳಿಸಿದರು. ಲೋಕಸಭೆ ಚುನಾವಣೆಯಲ್ಲೂ ನೀವು ಆತ್ಮವಿಶ್ವಾಸದಲ್ಲಿದ್ದಿರಿ, ಆದರೆ ಫಲಿತಾಂಶ ವ್ಯತಿರಿಕ್ತವಾಗಿ ಬಂತು ಎಂದು ಕೇಳಿದಾಗ, “ಮತದಾನದ ಡಬ್ಬ ಯಾರು ಹಾಕಿದ್ದಾರೆ? ನನಗೆ ಒಂದು ಮತವಿತ್ತು. ನಾನು ಆ ಮತ ಹಾಕಿದ್ದೇನೆ. ಅದರ ಮೇಲೆ ಅವಲಂಬಿತವಾಗಿದ್ದೇನೆ. ಬೇರೆಯವರ ಮೇಲೆ ಅವಲಂಬಿತವಾಗಲು ಸಾಧ್ಯವೇ? ನನ್ನ ಚುನಾವಣೆ ಸಮಯದಲ್ಲಿ ನೀವು ಪ್ರತಿಸ್ಪರ್ಧಿಯಿಂದ 8 ಲಕ್ಷ ಆಪರೇಷನ್ ಮಾಡಿಸಿದ್ದೀರಿ. ಹೃದಯ ಇಲ್ಲದವರಿಗೂ ಹೃದಯ ಕಸಿ ಮಾಡಿಸಿದ್ದೀರಿ. ಈಗ ನಾನು ಅದನ್ನು ಹೇಳಲು ಸಾಧ್ಯವೇ? ಅವರ ಹೃದಯ ಮಿಡಿಯುವುದಕ್ಕಿಂತ ನಿಮ್ಮ ಹೃದಯ ಹೆಚ್ಚಾಗಿ ಮಿಡಿಯಿತು” ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com