ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು NDA ನಿರ್ಧರಿಸಿದೆ- ದೇವೇಗೌಡ; ಯಾರಿಂದಲೂ ಸಾಧ್ಯವಿಲ್ಲ ಎಂದ ಸಿದ್ದರಾಮಯ್ಯ

ಚನ್ನಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ದೇವೇಗೌಡ ಅವರು, ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವನನ್ನಾಗಿ ಮಾಡಿದ್ದೇ ನಾನು. ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರ ಸೊಕ್ಕು ಮುರಿಯಲು ನಿಖಿಲ್ ಅವರನ್ನ ಕಣಕ್ಕಿಳಿಸಿದ್ದೇವೆ.
ಹೆಚ್ ಡಿ ದೇವೇಗೌಡ, ಸಿದ್ದರಾಮಯ್ಯ
ಹೆಚ್ ಡಿ ದೇವೇಗೌಡ, ಸಿದ್ದರಾಮಯ್ಯ
Updated on

ಬೆಂಗಳೂರು: ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದ ಸೋಮವಾರ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ಎನ್'ಡಿಎ ನಾಯಕರು ಭರ್ಜರಿ ಪ್ರಚಾರ ನಡೆಸಿ ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸಿದರು. ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಮತದಾರರ ಒಲವು ಗಳಿಸಲು ಅಂತಿಮ ಕಸರತ್ತು ನಡೆಸಿದರು.

ಎನ್'ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವರಾದ ಕುಮಾರಸ್ವಾಮಿ. ವಿ.ಸೋಮಣ್ಣ, ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್. ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಡಾ.ಸಿಎನ್.ಮಂಜುನಾಥ್ ಸೇರಿ ಹಲವು ನಾಯಕರು ಭರ್ಜರಿ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ನಿಖಿಲ್ ಅವರ ಪತ್ನಿ ರೇವತಿ ಅವರೂ ಕೂಡ ರೈಲು, ಬಸ್ ನಿಲ್ದಾಣ, ಕಾಲೇಜುಗಳ ಬಳಿ ತೆರಳಿ ಪತಿಯ ಪರ ಯುವತ ಮತದಾರರ ಮನ ಸೆಳೆಯಲು ಪ್ರಯತ್ನ ನಡೆಸಿದರು.

ಇನ್ನು ಚನ್ನಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ದೇವೇಗೌಡ ಅವರು, ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವನನ್ನಾಗಿ ಮಾಡಿದ್ದೇ ನಾನು. ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರ ಸೊಕ್ಕು ಮುರಿಯಲು ನಿಖಿಲ್ ಅವರನ್ನ ಕಣಕ್ಕಿಳಿಸಿದ್ದೇವೆ. ಈ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಎನ್'ಡಿಎ ನಿರ್ಧರಿಸಿದೆ. ಜನವರಿಯೊಳಗೆ ಸರ್ಕಾರ ಬೀಳುವುದು ಖಚಿತ ಎಂದು ಕೇಂದ್ರ ಸಚಿವ ಸೋಮಣ್ಣ ಅವರ ಮಾತಿನಲ್ಲಿ ಸತ್ಯಾಂಶವಿದೆ ಎಂದು ಹೇಳಿದರು.

ನನ್ನ ಮೊಮ್ಮಗ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಪ್ರಕರಣ ಬಳಸಿಕೊಂಡು ನನ್ನ ಕುಟುಂಬವನ್ನು ಮುಗಿಸಲು ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಇದೇ ವೇಳೆ ಕಿಡಿಕಾರಿದರು. ಅಲ್ಲದೆ, ಉಪಚುನಾವಣೆ ಬಳಿಕ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಕೈಬಿಡಲಿದೆ ಎಂದು ಹೇಳಿದರು.

ಬಳಿಕ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯದ ಜನರ ಉತ್ತಮ ಭವಿಷ್ಯಕ್ಕಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಬಹುಕಾಲ ಉಳಿಯಲಿದೆ ಎಂದರು,

ಹೆಚ್ ಡಿ ದೇವೇಗೌಡ, ಸಿದ್ದರಾಮಯ್ಯ
'ಇನ್ನೊಬ್ಬರನ್ನು ಮುಗಿಸುವುದರಲ್ಲಿ ದೇವೇಗೌಡ ನಂಬರ್ 1, ಕಣ್ಣೀರಿಗೆ ಮರುಳಾಗಬೇಡಿ': ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಮೈತ್ರಿ ಹಾಲು ಜೇನಿನಂತೆ ಬೆರೆತು ಹೋಗಿದ್ದು, ಅದನ್ನು ಸಹಿಸಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ನಾಡಿನ ಜನರ ಬದಕನ್ನು ಸರಿಪಡಿಸುವ ನಿಟ್ಟಿನಲ್ಲಿ ಎನ್'ಡಿಎ ಮೈತ್ರಿಕೂಡ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.

ಬಿಜೆಪಿ ಜೊತೆ ಸರ್ಕಾರ ಮಾಡಿದ್ದು ಸುವರ್ಣ ಕಾಲ. ಅಂದು ಬಿಜೆಪಿ ನಮಗೆ ಆಸರೆಯಾಗಿತ್ತು. 20 ತಿಂಗಳ ಆಡಳಿತದಲ್ಲಿ ಜನಪರ ಕೆಲಸಗಳನ್ನು ಯಡಿಯೂರಪ್ಪ ಅವರ ಸಹಕಾರದಿಂದ ಮಾಡಿದೆ. ಇವತ್ತು ನನಗೆ ರಾಜಕೀಯವಾಗಿ ಹೆಸರು ಬಂದಿದೆ ಎಂದರೆ ಅದಕ್ಕೆ ಯಡಿಯೂರಪ್ಪ ಅವರ ಪಾಲು ಕೂಡ ಇದೆ. ಅಂದು ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ನಾನು ಪ್ರಾಮಾಣಿಕವಾಗಿ ತೀರ್ಮಾನ ಮಾಡಿದ್ದೆ. ಅದನ್ನು ತಪ್ಪಿಸಲು ನಡೆದ ಘಟನೆಗಳನ್ನು ನಾನು ಬಹಿರಂಗ ಪಡಿಸುವುದಿಲ್ಲ. ಆದರೆ, ಕೆಲವರು ಮಾಡಿದ ಕೃತ್ಯದಿಂದ ನಾನು 14 ವರ್ಷ ವನವಾಸ ಅನುಭವಿಸಿದೆ ಎಂದು ಭಾವುಕರಾದರು.

ಅಂದು ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿದಿದ್ದರೆ ಅಂದೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವನಾಶವಾಗುತ್ತಿತ್ತು. ಆದರೆ, ವಿಧಿ ಆಟದ ಮುಂದೆ ನಮ್ಮದೇನು ನಡೆಯಲಿಲ್ಲ. ರೈಲರ ಸಾಲಮನ್ನ ಮಾಡಿದ ನೆಮ್ಮದಿ ಬಿಟ್ಟರೆ, ಕಾಂಗ್ರೆಸ್ ನೊಂದಿಗಿನ ಮೈತ್ರಿ ಸರ್ಕಾರದಿಂದ ಆದಷ್ಟು ಮಾನಸಿಕ ಹಿಂಸೆ ಮತ್ಯಾವುದೂ ಇರಲಿಲ್ಲ ಎಂದು ಹೇಳಿದರು.

ಸಿಪಿ ಯೋಗೇಶ್ವರ ಅವರನ್ನು ಕಣಕ್ಕಿಳಿಸಲು ನಾವು ನಿರ್ಧರಿಸಿದ್ದೆವು. ಆದರೆ, ಅವರು ಬಹಳ ಹಿಂದೆಯೇ ಕಾಂಗ್ರೆಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ನಿಖಿಲ್ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಹೊಂದಿರಲಿಲ್ಲ. ಆದರೆ, ಮನವೊಲಿಸಿ ಕಣಕ್ಕಿಳಿಯುವಂತೆ ಮಾಡಲಾಯಿತು. ನನ್ನ ಮಗನನ್ನು ನಿಮ್ಮ ಕೈಯಲ್ಲಿ ಇಟ್ಟಿದ್ದೇನೆ. ನಿಮ್ಮ ಮಗನೆಂದು ಪರಿಗಣಿಸಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಳಿಕ ಮಾತನಾಡಿದ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ರಾಜ್ಯ ಸರ್ಕಾರ ದಿವಾಳಿಯಾಗಿದೆ, ಹಣದ ಕೊರತೆಯಿಂದ ಭಾಗ್ಯ ಲಕ್ಷ್ಮಿ ಯೋಜನೆಯನ್ನು ನಿಲ್ಲಿಸಿದ್ದಾರೆ. ಹಲವಾರು ಜನಪರ ಯೋಜನೆಗಳನ್ನು ನಿಲ್ಲಿಸಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೆ, ಚುನಾವಣೆಯಲ್ಲಿ ಈ ಬಾರಿ ನಿಖಿಲ್ ಅವರು 25,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ ಡಿ ದೇವೇಗೌಡ, ಸಿದ್ದರಾಮಯ್ಯ
ಮೂರು ಕ್ಷೇತ್ರಗಳ ಉಪ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳು ಸ್ಥಗಿತ: ಎಚ್.ಡಿ ದೇವೇಗೌಡ

ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ತಮ್ಮ ಸೇವೆ ಮಾಡಲು ಒಂದು ಅವಕಾಶವನ್ನು ನೀಡಿ ಎಂದು ಮನವಿ ಮಾಡಿದರು.

ಈ ಚುನಾವಣೆ ನನ್ನ ರಾಜಕೀಯ ಜೀವನದ ಅಗ್ನಿ ಪರೀಕ್ಷೆ. ಯಾವ ಪಾತ್ರ ಮಾಡುತ್ತೀಯಾ ಎಂದು ಜನ ಕೇಳುತ್ತಾರೆ. ನನಗೆ ಜಾತಿ ಮುಖ್ಯವಲ್ಲ. ನನಗೆ ಗೊತ್ತಿರುವುದು ಮನುಷ್ಯತ್ವ ಒಂದೇ. ನಾನು ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ. ಇದು ಪ್ರಾದೇಶಿಕ ಪಕ್ಷ ಹಾಗೂ ಎನ್'ಡಿಎ ಕುಟುಂಬದ ಗೌರವದ ಪ್ರಶ್ನೆ. ಭೂಮಿಗೆ ಬಂದ ಮೇಲೆ ಯೋಗ್ಯತೆ ಸಂಪಾದನೆ ಮಾತ್ರ ಮುಖ್ಯ. ನನ್ನ ಪಾಲಿಗೆ ಈ ಚುನಾವಣೆ ನಿರ್ಣಾಯಕ. ಎರಡು ಸೋಲಿಗೆ ಎದೆಗುಂದಿಲ್ಲ. ಜನಾಭಿಪ್ರಾಯ ನನ್ನ ಮೇಲೆ ಇತ್ತು. ಕಾಂಗ್ರೆಸ್ ಕುತಂತ್ರದಿಂದ ನಾನು ಸೋತಿರಬಹುದು. ಆದರೆ ಫಲಿತಾಂಶ ಬೇರೆ ಆಗಿರಬಹುದು ಎಂದರು.

ಕಾರ್ಯಕರ್ತರ ಬಯಕೆಯಂತೆ ಚನ್ನಪಟ್ಟಣದಲ್ಲಿ ಕಣಕ್ಕಿಳಿದಿದ್ದೇನೆ. ಯಾವ ಕಾರಣಕ್ಕೂ ಕ್ಷೇತ್ರದ ಜನ ಕೂಪನ್, ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂದು ನಂಬಿದ್ದೇನೆ. ನಾಮಪತ್ರ ಸಲ್ಲಿಸಿ ಪ್ರಚಾರ ಆರಂಭಿಸಿದಾಗ ಭಾವನಾತ್ಮಕವಾಗಿ ಮಾತನಾಡಿದೆ. ನಾನು ಭಾವನೆಗಳುಳ್ಳ ವ್ಯಕ್ತಿ. ಕಳೆದ 16 ದಿನಗಳಲ್ಲಿ ಬಹಳ ಆಶೀರ್ವಾದ ಪಡೆದಿದ್ದೇನೆ. ಒಂದು ಪರೀಕ್ಷೆ ಮಾತಿ. ಆನಂತರ ನನ್ನ ಕೆಲಸ ನೋಟಿ ನಿಮ್ಮ ಪರೀಕ್ಷೆಯಲ್ಲಿ ನಾನು ಗೆದ್ದನೋ ಇಲ್ಲವೋ ತೀರ್ಮಾನಿಸಿ ಎಂದು ಮನವಿ ಮಾಡಿದರು.

ಕಾರ್ಯಕರ್ತರ ಬಯಕೆಯಂತೆ ಚನ್ನಪಟ್ಟಣದಲ್ಲಿ ಕಣಕ್ಕಿಳಿದಿದ್ದೇನೆ. ಯಾವ ಕಾರಣಕ್ಕೂ ಕ್ಷೇತ್ರದ ಜನ ಕೂಪನ್, ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂದು ನಂಬಿದ್ದೇನೆ. ನಾಮಪತ್ರ ಸಲ್ಲಿಸಿ ಪ್ರಚಾರ ಆರಂಭಿಸಿದಾಗ ಭಾವನಾತ್ಮಕವಾಗಿ ಮಾತನಾಡಿದೆ. ನಾನು ಭಾವನೆಗಳುಳ್ಳ ವ್ಯಕ್ತಿ. ಕಳೆದ 16 ದಿನಗಳಲ್ಲಿ ಬಹಳ ಆಶೀರ್ವಾದ ಪಡೆದಿದ್ದೇನೆ. ಒಂದು ಪರೀಕ್ಷೆ ಮಾತಿ. ಆನಂತರ ನನ್ನ ಕೆಲಸ ನೋಟಿ ನಿಮ್ಮ ಪರೀಕ್ಷೆಯಲ್ಲಿ ನಾನು ಗೆದ್ದನೋ ಇಲ್ಲವೋ ತೀರ್ಮಾನಿಸಿ ಎಂದು ಮನವಿ ಮಾಡಿದರು. ಈ ನಡುವೆ ದೇವೇಗೌಡ ಅವರ ಹೇಳಿಕೆ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ ಅವರು, ಸರ್ಕಾರವನ್ನು ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ, ದೇವೇಗೌಡ ಹಾಸನದ ಹೆಣ್ಣು ಮಕ್ಕಳಿಗಾಗಿ ಕಣ್ಣೀರಿಡಬೇಕಿತ್ತು ಎಂದು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com