ಫಲಿತಾಂಶ ಬರುವವರೆಗೆ ಶಾಂತವಾಗಿರಿ, ಬೆಟ್ಟಿಂಗ್ ಗೆ ಬಲಿಯಾಗಬೇಡಿ: NDA ಅಭ್ಯರ್ಥಿ ನಿಖಿಲ್

ಯಾವುದೇ ಸಂದರ್ಭದಲ್ಲೂ ಫಲಿತಾಂಶಕ್ಕಾಗಿ ತಮ್ಮ ಹಣವನ್ನು ವ್ಯರ್ಥ ಮಾಡದಂತೆ ಅವರು ಕೇಳಿಕೊಂಡಿದ್ದಾರೆ, ಏಕೆಂದರೆ ಈ ದುಷ್ಕೃತ್ಯದಿಂದ ಅನೇಕ ಕುಟುಂಬಗಳು ನಾಶವಾಗಿವೆ.
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ
Updated on

ಹರದನಹಳ್ಳಿ: ಯಾರೂ ಕೂಡ ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ. ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ಆರಾಮಾಗಿರಿ ಎಂದು ಚನ್ನಪಟ್ಟಣ ಕ್ಷೇತ್ರದ NDA ಅಭ್ಯರ್ಥಿ, ಜೆಡಿಎಸ್ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಯುವಕರಲ್ಲಿ ಮನವಿ ಮಾಡಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ ಫಲಿತಾಂಶಕ್ಕೆ ದಿನಗಣನೆ ಹಿನ್ನೆಲೆಯಲ್ಲಿ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ತಮ್ಮ ಮನೆ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ಚನ್ನಪಟ್ಟಣ ಸೇರಿದಂತೆ ಮುಂಬರುವ ಉಪಚುನಾವಣೆ ಫಲಿತಾಂಶದ ಸುತ್ತ ಜನರು ಕೋಟ್ಯಂತರ ರೂಪಾಯಿ ಬೆಟ್ಟಿಂಗ್‌ನಲ್ಲಿ ಹೂಡಿಕೆ ಮಾಡಿರುವುದು ನನಗೆ ತಿಳಿದಿದೆ. ಚುನಾವಣಾ ಫಲಿತಾಂಶದ ಮೇಲೆ ಬೆಟ್ಟಿಂಗ್‌ ಕಟ್ಟುವುದು ಸದಾ ಆತಂಕಕ್ಕೆ ಕಾರಣವಾಗಿರುತ್ತದೆ, ಹೀಗಾಗಿ ಬೆಟ್ಟಿಂಗ್‌ನಲ್ಲಿ ತೊಡಗಬೇಡಿ, ಇದು ಕುಟುಂಬಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಿಖಿಲ್ ಹೇಳಿದ್ದಾರೆ.

ಅದರಂತೆ, ಯಾವುದೇ ಸಂದರ್ಭದಲ್ಲೂ ಫಲಿತಾಂಶಕ್ಕಾಗಿ ತಮ್ಮ ಹಣವನ್ನು ವ್ಯರ್ಥ ಮಾಡದಂತೆ ಅವರು ಕೇಳಿಕೊಂಡಿದ್ದಾರೆ, ಏಕೆಂದರೆ ಈ ದುಷ್ಕೃತ್ಯದಿಂದ ಅನೇಕ ಕುಟುಂಬಗಳು ನಾಶವಾಗಿವೆ. ಮುಖಂಡರು, ಪಕ್ಷದ ಕಾರ್ಯಕರ್ತರು ಮತ್ತು ರಾಜಕೀಯ ನಾಯಕರ ಅನುಯಾಯಿಗಳು ಫಲಿತಾಂಶ ಪ್ರಕಟವಾಗುವವರೆಗೆ ಸುಮ್ಮನಿರಬೇಕು ಎಂದು ನಿಖಿಲ್ ಹೇಳಿದರು. ಜನರ, ದೇವರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ. ಮಾಜಿ ಸಚಿವರು, ಶಾಸಕರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಸಾಕಷ್ಟು ಜನ ನನ್ನ ಚುನಾವಣೆಗಾಗಿ ದುಡಿದಿದ್ದಾರೆ. ಜೆಡಿಎಸ್ ಪಕ್ಷದ ಇತಿಹಾಸದಲ್ಲಿ ಇಂತಹ ಚುನಾವಣೆ ನಡೆದಿರಲಿಲ್ಲ. ಇದು ಇತಿಹಾಸದ ಪುಟಗಳಲ್ಲಿ ಉಳಿಯುವ ಚುನಾವಣೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದರು.

ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆ: ಜೋರಾಯ್ತು ಬೆಟ್ಟಿಂಗ್ ಜ್ವರ, ಟ್ರೆಂಡ್ ಹೆಚ್ಚಾಯ್ತು ನಿಖಿಲ್ ಪರ; 'ಬಾಜಿ' ಕಟ್ಟೆಯಲ್ಲಿ ಮಂಡ್ಯ ನಾಯಕರು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com