ಬೆಂಗಳೂರು: ಮತದಾನಕ್ಕೂ ಮುನ್ನವೆ ಇಡೀ ರಾಜ್ಯದ ಗಮನ ಸೆಳೆದಿದ್ದ ಚನ್ನಪಟ್ಟಣ ಉಪ ಚುನಾವಣಾ ಕಣ ಇದೀಗ ಮತದಾನ ಮುಗಿದ ಬಳಿಕ ಫಲಿತಾಂಶಕ್ಕೂ ಮುನ್ನ ಬುಕ್ಕಿಗಳ ಹಾಟ್ ಫೇವರಿಟ್ ಆಗಿ ಎಲ್ಲರ ಕೇಂದ್ರಬಿಂದುವಾಗಿದೆ. ನವೆಂಬರ್ 23 ರಂದು ಚನ್ನಪಟ್ಟಣ ಉಪಚುನಾವಣೆ ಫಲಿತಾಂಶಕ್ಕೆ ಕೇವಲ ಐದು ದಿನಗಳು ಬಾಕಿ ಉಳಿದಿದ್ದು, ಚನ್ನಪಟ್ಟಣ ಕ್ಷೇತ್ರ ಮತ್ತು ಪಕ್ಕದ ಮಂಡ್ಯ ಜಿಲ್ಲೆಯಲ್ಲೂ ಬೆಟ್ಟಿಂಗ್ ಜ್ವರ ಜೋರಾಗಿದೆ.
ಕಾಂಗ್ರೆಸ್ ಪಕ್ಷದ ಸಿಪಿ ಯೋಗೇಶ್ವರ್ ಮತ್ತು ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದಿರುವುದರಿಂದ ಅನಿರೀಕ್ಷಿತ ಫಲಿತಾಂಶ ಬರುವ ಸಾಧ್ಯತೆಯಿದೆ. ಮತದಾನ ನಡೆದ ಮಾರನೇ ದಿನ ಮಾತನಾಡಿದ್ದ ಯೋಗೇಶ್ವರ್, ಪ್ರಚಾರದ ವೇಳೆ ಸಚಿವ ಜಮೀರ್ ಅಹಮದ್ ಖಾನ್, ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡರ ಕುರಿತು ಆಡಿದ ಮಾತುಗಳಿಂದ ಲಾಭದಷ್ಟೇ ನಷ್ಟವೂ ಆಗಿದೆ. ನಿಖಿಲ್ ಮತ್ತು ನನ್ನ ಮಧ್ಯೆ ಸಮಬಲದ ಪೈಪೋಟಿ ಇದ್ದು, ಯಾರೇ ಗೆದ್ದರೂ ಕೂದಲೆಳೆಯಷ್ಟೇ ಅಂತರವಿರಲಿದೆ ಎಂದಿದ್ದರು. ಯೋಗೇಶ್ವರ್ ಈ ಮಾತು ಬೆಟ್ಟಿಂಗ್ ಲೆಕ್ಕಾಚಾರ ಬದಲಿಸಿರುವುದು ನಿಜ. ಕಾಂಗ್ರೆಸ್ ಅಭ್ಯರ್ಥಿ ಫಲಿತಾಂಶಕ್ಕೆ ಮುಂಚೆಯೇ ಸೋಲು ಒಪ್ಪಿಕೊಂಡಿದ್ದಾರೆ ಎಂಬ ಸಂದೇಶವನ್ನು ಅವರ ಮಾತುಗಳು ಹೊರಗಿನವರಿಗೆ ನೀಡಿದ್ದವು, ಆದರೂ ಬೆಟ್ಟಿಂಗ್ ಕಟ್ಟುವವರ ಹುಮ್ಮಸ್ಸು ಏನೂ ಕಡಿಮೆಯಾಗಿಲ್ಲ, ಜೆಡಿಎಸ್ ಪರ ಹೆಚ್ಚಿನ ಉತ್ಸಾಹ ತೋರಿದ್ದಾರೆ.
ಪಂಟರ್ ಗಳು 2:3 ಬಾಜಿ ಕಟ್ಟಲು ಸಿದ್ಧರಾಗಿದ್ದಾರೆ. ಅದರೆ ಇದರರ್ಥ ಜೆಡಿಎಸ್ ಮೇಲೆ ಬೆಟ್ಟಿಂಗ್ ಮಾಡುವ ಪಂಟರ್ ಕಾಂಗ್ರೆಸ್ ಅಭ್ಯರ್ಥಿಗೆ 2 ಲಕ್ಷ ರೂ.ಗೆ 3 ಲಕ್ಷ ರೂ. ಕಟ್ಟಲು ಸಿದ್ದರಾಗಿದ್ದಾರೆ. ನಿಖಿಲ್ ಪರ ಬೆಟ್ಟಿಂಗ್ ಟ್ರೆಂಡ್ ಹೆಚ್ಚಿದೆ. ಕೆಲವು ನಾಯಕರು, ವಿಶೇಷವಾಗಿ ಮಂಡ್ಯದವರೂ ಬೆಟ್ಟಿಂಗ್ ನ್ಲಿ ಭಾಗಿಯಾಗಿದ್ದಾರೆ ಮತ್ತು ಉಪಚುನಾವಣೆ ಫಲಿತಾಂಶದಲ್ಲಿ ಭಾರೀ ಪಾಲು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಕೀಯ ಪಕ್ಷಗಳು ಅಕ್ರಮವಾಗಿ ಚುನಾವಣಾ ಪ್ರಚಾರಕ್ಕಾಗಿ 200 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೆ, ಅದರಲ್ಲಿ ಕನಿಷ್ಠ ಕಾಲು ಭಾಗದಷ್ಟು ಹಣವನ್ನು ಪಂಟರ್‌ಗಳು ಬೆಟ್ಟಿಂಗ್‌ಗೆ ಹಾಕಿರುತ್ತಾರ ಎಂದು ನಾಯಕರೊಬ್ಬರು ಊಹಿಸಿದ್ದಾರೆ. ಭವಿಷ್ಯವನ್ನು ಲೆಕ್ಕಿಸದೆ, ಕೆಲವು ಬೆಟ್ಟಿಂಗ್‌ಗಳು ಎದುರಾಳಿಗಳನ್ನು ಅಪಾಯಕಾರಿ ಆಟಕ್ಕೆ ಆಕರ್ಷಿಸಿದ್ದಾರೆ ಎಂದು ಅವರು ಹೇಳಿದರು. ಯೋಗೇಶ್ವರ ಅವರ ಫೋಟೋ-ಫಿನಿಶ್ ಫಲಿತಾಂಶದ ಹೇಳಿಕೆಯ ನಂತರ ಕಾಂಗ್ರೆಸ್ ಪರ ಬೆಟ್ಟಿಂಗ್‌ದಾರರಲ್ಲಿ ಉತ್ಸಾಹವು ಕನಿಷ್ಠ ಶೇಕಡಾ 20 ರಷ್ಟು ಕಡಿಮೆಯಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಫಲಿತಾಂಶಗಳು ಅನಿರೀಕ್ಷಿತವಾಗಿರುವ ಕಾರಣ ಕಾಂಗ್ರೆಸ್ ಕಾರ್ಯಕರ್ತರನ್ನು ಬೆಟ್ಟಿಂಗ್‌ನಲ್ಲಿ ತೊಡಗಿಸದಂತೆ ರಕ್ಷಿಸಲು ಯೋಗೇಶ್ವರ ಅವರು ಹೇಳಿಕೆ ನೀಡಿರಬಹುದು ಎಂದು ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
Advertisement