ಸಿದ್ದರಾಮಯ್ಯ 5 ವರ್ಷ ಪೂರ್ತಿ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ: ಬಿ ಆರ್ ಪಾಟೀಲ್

ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಐದು ವರ್ಷ ಇರ್ತಾರೋ ಇರಲ್ವೋ ಗೊತ್ತಿಲ್ಲ. ಆದರೆ, ಅವರು ಐದು ವರ್ಷ ಇರಬೇಕು ಅಂತಾ ಬಯಸುತ್ತೇವೆ.
B R Patil
ಬಿ ಆರ್ ಪಾಟೀಲ್
Updated on

ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಹುದ್ದೆ ಬದಲಾವಣೆ ಬಗ್ಗೆ ಆಗಾಗ ಚರ್ಚೆ ಮುನ್ನೆಲೆಗೆ ಬರುತ್ತದೆ. ಸಿದ್ದರಾಮಯ್ಯ ಅವರು ಪೂರ್ಣಾವಧಿಯ 5 ವರ್ಷ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಅವರ ಆಪ್ತ ಸಲಹೆಗಾರ ಬಿ.ಆರ್.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಐದು ವರ್ಷ ಇರ್ತಾರೋ ಇರಲ್ವೋ ಗೊತ್ತಿಲ್ಲ. ಆದರೆ, ಅವರು ಐದು ವರ್ಷ ಇರಬೇಕು ಅಂತಾ ಬಯಸುತ್ತೇವೆ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತೆ ಗೊತ್ತಿಲ್ಲ. ಹೈಕಮಾಂಡ್ ಬೇರೆ ನಿರ್ಧಾರ ತೆಗೆದುಕೊಂಡರೆ ನಾವೇನು ಮಾಡುವುದಕ್ಕೆ ಆಗುತ್ತೆ, ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಇನ್ನೂ ದೊಡ್ಡ ಜವಾಬ್ದಾರಿ ನೀಡಬಹುದು. ಆದರೆ, ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಅಂತಾ ಯಾವ ಶಾಸಕರ ಮನಸ್ಸಿನಲ್ಲಿ ಇಲ್ಲ ಎಂದರು.

ದೊಡ್ಡ ಕನಸನ್ನು ಕಂಡು ಬಡವರ ಪರವಾಗಿ ಕಾರ್ಯಕ್ರಮ ಹಮ್ಮಿಕೊಂಡಾಗ ಭೌತಿಕ ಅಭಿವೃದ್ಧಿಗೆ ಹೊಡೆತ ಬೀಳುತ್ತೆ. ಈ ಬಾರಿಯ ಬಜೆಟ್‌ನಲ್ಲಿ ಗ್ಯಾರಂಟಿಯಿಂದ ಆರ್ಥಿಕ ಹೊರೆ ಆಗದಂತೆ ಹೊಸ ಆರ್ಥಿಕ ನೀತಿ ಸಿಎಂ ನೀಡ್ತಾರೆ. ನಮಗೆ ಮೊದಲೇ ಗೊತ್ತಿತ್ತು. ಇಷ್ಟು ಖರ್ಚು ಆಗುತ್ತೆ ಅಂತಾ. ಆರ್ಥಿಕ ಸಮಸ್ಯೆ ನಮಗೆ ಮಾತ್ರವಲ್ಲಾ ಎಲ್ಲಾ ರಾಜ್ಯಗಳಿಗಿದೆ. ಸಮಸ್ಯೆ ಆಗುತ್ತಿದೆ ಸ್ವಲ್ಪ ಹೊರೆ ಆಗುತ್ತೆ. ದೊಡ್ಡ ಸಮಸ್ಯೆಗೆ ಕೈ ಹಾಕಿದಾಗ ಸ್ವಲ್ಪ ಸಮಸ್ಯೆ ಉದ್ಭವ ಆಗುತ್ತೆ.

B R Patil
ವಿವಿ ತಿದ್ದುಪಡಿ ಮಸೂದೆಗೆ ಸಂಪುಟ ಅಸ್ತು: ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ, ಇನ್ಮುಂದೆ ಮುಖ್ಯಮಂತ್ರಿಯೇ ಚಾನ್ಸಲರ್

ಕಲ್ಯಾಣ ರಾಜ್ಯದ ಪರಿಕಲ್ಪನೆ ಕಾಣುತ್ತಿದ್ದೇವೆ. ಎಲ್ಲರಿಗೂ ಸಮಪಾಲು ಸಮಬಾಳು. ಐದು ಗ್ಯಾರಂಟಿಗಳು ಬಹಳಷ್ಟು ಯಶಸ್ವಿಯಾಗಿ ಅನುಷ್ಠಾನ ಆಗುತ್ತಿವೆ. ಇದರಿಂದ ಬಹಳಷ್ಟು ರಾಜಕೀಯ ಲಾಭ ಆಗುತ್ತಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲುವುದಿಲ್ಲ. ಇದರಲ್ಲಿ ಯಾವುದೇ ಅನುಮಾನ ಬೇಡ. ಬಿಪಿಎಲ್ ಕಾರ್ಡ್ ವಿವಾದ ಬಿಜೆಪಿ ಹುಟ್ಟಿಸಿದ ಭಯ. ಆದರೆ ಯಾವುದೇ ಗ್ಯಾರಂಟಿ ನಿಲ್ಲುವುದಿಲ್ಲ. ಇದನ್ನು ಪರಿಹಾರ ಮಾಡುತ್ತೇವೆ ಎಂದರು.

ಬಿಜೆಪಿಯವರು ಒಂದಾಗಿ ವಕ್ಫ್ ಬೋರ್ಡ್ ಜನಜಾಗೃತಿ ಮಾಡಲಿ, ಅವರಲ್ಲಿಯೇ ಒಡಕಿದೆ. ನಮ್ಮನ್ನೇನು ನೋಡ್ತಾರೆ. ಇನ್ನೂ ಎಷ್ಟು ಬಣ ಇರುತ್ತೆ ಗೊತ್ತಿಲ್ಲ. ಯರ‍್ಯಾರು ದೆಹಲಿಯಲ್ಲಿ ಕುಳಿತು ಯರ‍್ಯಾರಿಗೆ ಆಪರೇಟಿಂಗ್ ಮಾಡತ್ತಿದ್ದಾರೋ. ಯಾರ‍್ಯಾರದು ಕೈಚಳಕ ಎಲ್ಲೆಲ್ಲಿದೆಯೋ ಗೊತ್ತಿಲ್ಲ. ಮುರಳಿ ಮನೋಹರ ಜೋಶಿ ಅಂತಹವರನ್ನೇ ಮೂಲೆಗುಂಪು ಮಾಡಿದರು. ಇವರೆಲ್ಲಾ ಯಾವ ಲೆಕ್ಕ ಎಂದು ಟೀಕಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com