ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಪಕ್ಷದಿಂದ ಉಚ್ಚಾಟಿಸಿ: ರೇಣುಕಾಚಾರ್ಯ ಬಣ ಆಗ್ರಹ

ರೇಣುಕಾಚಾರ್ಯ ಅವರು ಕೆಲವು ಸಮಾನ ಮನಸ್ಕ ಪಕ್ಷದ ನಾಯಕರೊಂದಿಗೆ ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಮೆಗಾ ರ್ಯಾಲಿ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಎಂಪಿ ರೇಣುಕಾಚಾರ್ಯ
ಎಂಪಿ ರೇಣುಕಾಚಾರ್ಯ
Updated on

ಬೆಂಗಳೂರು: ನಾಯಕತ್ವದ ಬಗ್ಗೆ, ವಿಶೇಷವಾಗಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುತ್ತಿರುವ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಎಂಪಿ ರೇಣುಕಾಚಾರ್ಯ ನೇತೃತ್ವದ ಮಾಜಿ ಬಿಜೆಪಿ ಶಾಸಕರ ಗುಂಪು ಶುಕ್ರವಾರ ಹೈಕಮಾಂಡ್‌ಗೆ ಒತ್ತಾಯಿಸಿದೆ.

ರೇಣುಕಾಚಾರ್ಯ ಅವರು ಕೆಲವು ಸಮಾನ ಮನಸ್ಕ ಪಕ್ಷದ ನಾಯಕರೊಂದಿಗೆ ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಮೆಗಾ ರ್ಯಾಲಿ ನಡೆಸಲು ಯೋಜಿಸಿರುವುದಾಗಿ ಹೇಳಿದ್ದು, ಇದು ಶಕ್ತಿ ಪ್ರದರ್ಶನ ಎಂದು ನಿರೀಕ್ಷಿಸಲಾಗಿದೆ.

ರೇಣುಕಾಚಾರ್ಯ ನೇತೃತ್ವದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹರತಾಳ್ ಹಾಲಪ್ಪ, ರೂಪಾಲಿ ನಾಯ್ಕ್, ಬಸವರಾಜ್ ದಡೇಸೂಗೂರು ಸೇರಿದಂತೆ ಇತರ ಮಾಜಿ ಶಾಸಕರ ಬಣ ವಿಜಯೇಂದ್ರ ಅವರಿಗೆ ಬೆಂಬಲವಾಗಿ ನಿಂತಿದೆ.

ಎಂಪಿ ರೇಣುಕಾಚಾರ್ಯ
ಸಿಎಂ ಆಗೋಕೆ ಹೋರಾಟ ಮಾಡುತ್ತಿಲ್ಲ, ನಿಮಗ್ಯಾಕೆ ಭಯ, ಟೆನ್ಶನ್?: BSY, ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಕೆಲವರ ಗೊಂದಲದ ನಡುವೆ ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ನಾಯಕತ್ವದ ಕೈ ಬಲಪಡಿಸಲು ಈ ಬಣ ಇಂದು ಕೋಲಾರ ಜಿಲ್ಲೆಯ ಕುರುಡುಮಲೆ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಹೋರಾಟಕ್ಕೆ ಚಾಲನೆ ನೀಡಿದರು.

ಈ ವೇಳೆ ಯತ್ನಾಳ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಅವರು ತಾವೇ ಘೋಷಿಸಿಕೊಂಡಿರುವಂತೆ ಹಿಂದೂ ಹುಲಿಯಲ್ಲ, ಮುಖವಾಡ ಧರಸಿಕೊಂಡು ತಿರುಗಾಡುತ್ತಿರುವ ಗೋಮುಖ ವ್ಯಾಘ್ರ. ಅವರು ತನ್ನ ವಿರುದ್ದ ಬಳಸುವ ಭಾಷೆಗಿಂತ ಹರಿತಬಾದ ಭಾಷೆ ಬಳಸುವುದು ತನಗೆ ಗೊತ್ತು ಎಂದು ಹೇಳಿದರು.

ಯತ್ನಾಳ್ ಕಾಂಗ್ರೆಸ್ ಮುಖವಾಣಿಯಂತೆ ಕೆಲಸ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಸುಪಾರಿ ಪಡೆದುಕೊಂಡಂತೆ ಕರ್ನಾಟಕದಲ್ಲಿ ಬಿಜೆಪಿ ಮುಳುಗಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಕ್ಪ್ ವಿರುದ್ದ ಹೋರಾಟ ಮಾಡು ಅಂತ, ಯಾವ ರಾಷ್ಟ್ರೀಯ ನಾಯಕರು ಅವರಿಗೆ ಹೇಳಿಲ್ಲ. ಇವರಿಗೆ ಯಾವುದೇ ರಾಷ್ಟ್ರೀಯ ನಾಯಕರ ಬೆಂಬಲವಿಲ್ಲ. ಇದೆ ಕೇಂದ್ರದ ನಾಯಕರು ವಿಜಿಯೇಂದ್ರ ಅವರನ್ನ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದೆ. ವಿಜಯೇಂದ್ರ ಅವರ ವಿರುದ್ಧ ಮಾತನಾಡುವುದು ಕೇಂದ್ರದ ನಾಯಕರಿಗೆ ಮಾಡಿದ ಅವಮಾನ ಎಂದು ಗುಡುಗಿದರು.

ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ ಪಿ ಹರೀಶ್, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಜಿ ಎಂ ಸಿದ್ದೇಶ್ವರ ಅವರನ್ನೊಳಗೊಂಡ ಪಕ್ಷದ ಮುಖಂಡರ ಬಣ ರಾಜ್ಯ ನಾಯಕತ್ವವನ್ನು ವಿಶೇಷವಾಗಿ ವಿಜಯೇಂದ್ರ ಅವರನ್ನು ಟೀಕಿಸುತ್ತಿದ್ದು, ವಕ್ಫ್ ವಿಚಾರವಾಗಿ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com