ಬೆಕ್ಕಿಗೆ ಗಂಟೆ ಕಟ್ಟುವವರು ಯಾರು: ಮುಡಾ ಪ್ರಕರಣ ಸಂಬಂಧ ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ
ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿನ ಮೇಲೆ ಒಂದು ಕಲ್ಲು ಹಾಕಿಕೊಳ್ಳುವ ಬದಲು ಹತ್ತಾರು ಕಲ್ಲು ಹಾಕಿಕೊಂಡು ಔಷಧಿ ಇಲ್ಲದ ಹಾಗೇ ಗಾಯ ಮಾಡಿಕೊಂಡಿದ್ದಾರೆ ಎಂದು ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರ ನಡವಳಿಗೆ ದಿನ ಒಂದೊಂದು ರೀತಿಯಲ್ಲಿ ಬದಲಾಗಿ ಕಾಣಿಸುತ್ತಿದೆ. ಅವರು ಮಾಡಿಕೊಂಡಿರುವ ಗಾಯಕ್ಕೆ ಅವರೇ ಔಷಧಿ ಹಚ್ಚಿಕೊಳ್ಳಬೇಕು. ಈವಾಗ ರಾಜೀನಾಮೆ ನೀಡಬೇಕು. ತಪ್ಪಿತಸ್ಥರಲ್ಲಾ ಅಂದರೆ ಮತ್ತೇ ಸಿಎಂ ಆಗಿ ಮುಂದುವರಿಯಬಹುದು, ಮುಡಾ ಪ್ರಕರಣ ಜಗಜ್ಜಾಹೀರವಾಗಿದೆ. ಆದರೆ ಅದನ್ನು ಸಿಎಂ ಅರ್ಥ ಮಾಡಿಕೊಳ್ಳುತ್ತಿಲ್ಲಾ. ಸಿಎಂ ಸಿದ್ದರಾಮಯ್ಯ ಅವರ ನಡವಳಿಕೆ ದಿನಾ ದಿನಾ ಒಂದೊಂದು ತರ ಆಗುತ್ತಿದೆ. ಈಗ ಬೆಕ್ಕಿಗೆ ಗಂಟೆ ಕಟ್ಟವರು ಯಾರು? ನಾವು ನೀವು ಕಟ್ಟಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ನಾನು ಒಟ್ಟಿಗೆ ರಾಜಕೀಯಕ್ಕೆ ಬಂದವರು. ಮುಡಾ ಪ್ರಕರಣ ಜಗಜ್ಜಾಹೀರವಾಗಿದ್ದು, ಅದನ್ನು ಸಿಎಂ ಅರ್ಥ ಮಾಡಿಕೊಳ್ಳುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಆತ್ಮಸಾಕ್ಷಿ ಬಗ್ಗೆ ಮಾತನಾಡಿದ್ದಾರೆ. ಮೊದಲೇ ನಿವೇಶನಗಳನ್ನು ವಾಪಸ್ ಕೊಡಬೇಕಿತ್ತು. ವ್ಯವಸ್ಥೆಯಲ್ಲಿ ಯಾರೂ ದೊಡ್ಡವರಲ್ಲ. ಕಾನೂನು ಎಲ್ಲರಿಗೂ ಒಂದೇ’ ಎಂದು ಹೇಳಿದರು. ರಾಜಕೀಯವಾಗಿ ಹೇಳುವುದಾದರೆ ಸಿಎಂ ಸಿದ್ದರಾಮಯ್ಯ ಹಾಗೂ ನಾನು ಒಟ್ಟಿಗೆ ರಾಜಕೀಯಕ್ಕೆ ಕ್ಷೇತ್ರಕ್ಕೆ ಬಂದಿದ್ದೇವೆ. ಉಳಿದವರಂತೆ ನಾನು ಬೇರೆ ಭಾಷೆಯಲ್ಲಿ ಮಾತನಾಡಲು ಆಗೋದಿಲ್ಲ. ಅದು ಸಾಧ್ಯವೂ ಇಲ್ಲ. ಏಕೆಂದರೆ ನಮಗೆ ಸಂಸ್ಕಾರ ಇದೆ. ಸಿದ್ದರಾಮಯ್ಯ ಅವರು ಶಾಸನ ಸಭೆಯಲ್ಲಿ ಸೈಟ್ ವಾಪಸ್ ಕೊಡಬೇಕಾಗಿತ್ತು. ಆದರೆ ಅವರು ಹಾಗೆ ನಡೆದುಕೊಡಿಲ್ಲ ಎಂದು ಸಿಎಂ ಅವರನ್ನು ಸೋಮಣ್ಣ ದೂರಿದರು. ಇನ್ನು ನಮ್ಮ ಆರ್ ಅಶೋಕ ಅವರ ಹೆಸರನ್ನು ಸಿಎಂ ಸಿದ್ದರಾಮಯ್ಯ ಅವರ ಪ್ರಕರಣಕ್ಕೆ ಸಂಬಂಧ ಕಲ್ಪಿಸಿ ತಳಕು ಹಾಕಲಾಗುತ್ತಿದೆ. ಆದರೆ ಆರ್ ಆಶೋಕ್ ಅವರ ಹೆಸರು ಏಕೆ ಇಲ್ಲಿ ಬಂತು? ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತಾಗಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ