
ಕಲಬುರಗಿ: ಕಾಂಗ್ರೆಸ್ ನಗರ ನಕ್ಸಲ್ ಪಕ್ಷ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಶನಿವಾರ ತಿರುಗೇಟು ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಭಯೋತ್ಪಾದಕ ಪಕ್ಷ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ದೇಶದಾದ್ಯಂತ ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳ ಮೇಲಿನ ದೌರ್ಜನ್ಯಗಳು ಹೆಚ್ಚಿವೆ. ಬಿಜೆಪಿ ಇಂತಹ ಪ್ರಕರಣಗಳನ್ನು ಬೆಂಬಲಿಸುತ್ತದೆ, ಆದರೆ ವಿರೋಧ ಪಕ್ಷಗಳ ವಿರುದ್ಧ ಆರೋಪ ಮಾಡುತ್ತದೆ. ಬಿಜೆಪಿ ಪ್ರಗತಿಪರ ಚಿಂತಕರನ್ನು "ನಗರ ನಕ್ಸಲರು" ಎಂದು ಕರೆದು ಅವಮಾನಿಸುವ ಅಭ್ಯಾಸ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ದೇಶದಲ್ಲಿ ಆಡಳಿತ ನಡೆಸುತ್ತಿರುವುದರಿಂದ ವಿವಿಧ ಅಪರಾಧಗಳಿಗೆ ಇತರ ಪಕ್ಷಗಳನ್ನು ದೂಷಿಸುವ ಬದಲು, ಎಸ್‌ಸಿ, ಎಸ್‌ಟಿ ಮತ್ತು ಬಿಸಿಗಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಮೋದಿ ಕ್ರಮಕೈಗೊಳ್ಳಬೇಕು. ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲು ಮೋದಿ ಕ್ರಮ ಕೈಗೊಳ್ಳಲಿ ಎಂದು ಖರ್ಗೆ ಹೇಳಿದರು.
RSS ಮುಖ್ಯಸ್ಥ ಮೋಹನ್ ಭಾಗವತ್ ಅವರ ಒಗ್ಗಟ್ಟಿನ ಕರೆಗೆ ಪ್ರತಿಕ್ರಿಯಿಸಿದ ಖರ್ಗೆ, ಭಾಗವತ್ ಹೇಳುವುದು ಒಂದು, ಆದರೆ ಮಾಡುವುದು ಇನ್ನೊಂದು. ಭಾಗವತ್ ಹಿಂದೂಗಳ ಒಗ್ಗಟ್ಟಿಗೆ ಮಾತ್ರ ಕರೆ ನೀಡಿದಾಗ, ಭಾರತದಿಂದ ಬಂದವರೆಲ್ಲರೂ ಒಂದಾಗಬೇಕು ಎಂದರ್ಥವೇ? ಎಲ್ಲಾ ಭಾರತೀಯರನ್ನು ಒಗ್ಗೂಡಿಸಲು ನಿಜವಾಗಿಯೂ ಬಯಸಿದರೆ ಭಾಗವತ್ ಅವರ ಸಂಘಟನೆಯು ಬಿಜೆಪಿಯನ್ನು ಏಕೆ ಬೆಂಬಲಿಸುತ್ತಿದೆ? ಎಂದು ಪ್ರಶ್ನಿಸಿದರು.
ಇತ್ತೀಚಿನ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಮತದಾನೋತ್ತರ ಸಮೀಕ್ಷೆಗಳು ತಮ್ಮ ಪಕ್ಷ ಆರಾಮವಾಗಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದವು. ಹರಿಯಾಣದಲ್ಲಿ ಸೋಲನ್ನು ಒಪ್ಪಿಕೊಳ್ಳಲು ಬಿಜೆಪಿ ನಾಯಕರು ಮತ್ತು ಅವರ ಮೈತ್ರಿಕೂಟದ ಪಕ್ಷಗಳು ಕೂಡಾ ಸಿದ್ದರಾಗಿದ್ದರು. ಆದರೆ ಏನು ಪವಾಡ ಆಯಿತೋ ಗೊತ್ತಿಲ್ಲ. ಹರಿಯಾಣ ಸೋಲಿಗೆ ಕಾರಣ ಕುರಿತು ಕಾಂಗ್ರೆಸ್ ವಿಶ್ಲೇಷಣೆ ಮಾಡಲಿದೆ. ಹರಿಯಾಣದಾದ್ಯಂತ ಬೂತ್ ಮಟ್ಟದ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಪ್ರತಿಕ್ರಿಯಿಸುತ್ತೇನೆ ಎಂದರು. ಕರ್ನಾಟಕದಲ್ಲಿ ಸಿಎಂ ಬದಲಾವಣೆ ಮತ್ತು ದಲಿತ ಸಿಎಂ ಕೂಗು ಕುರಿತು ಪ್ರತಿಕ್ರಿಯಿಸಿಲು ಖರ್ಗೆ ನಿರಾಕರಿಸಿದರು.
Advertisement