ಮೂರು ವರ್ಷ ಸುಮ್ಮನಿರಿ, ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ: ಹೆಚ್.ಡಿ ರೇವಣ್ಣ

ಇನ್ನೂ ಮೂರು ವರ್ಷ ಸ್ವಲ್ಪ ಸುಮ್ಮನಿರಿ, ನನಗೆ ಕೊಟ್ಟಿದ್ದನ್ನ ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.
ಹೆಚ್.ಡಿ. ರೇವಣ್ಣ
ಹೆಚ್.ಡಿ. ರೇವಣ್ಣ
Updated on

ಹಾಸನ: ತಮಗೆ ಮತ್ತು ತಮ್ಮ ಕುಟುಂಬಕ್ಕೆ ಎದುರಾಗಿರುವ ತೊಂದರೆಗಳು ಮತ್ತು ಹಾಸನ ರಾಜಕೀಯದ ಬಗ್ಗೆ ಮಾಜಿ ಸಚಿವ ಮತ್ತು ಹೊಳೇನರಸಿಪುರದ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ರೇವಣ್ಣ ಶಪಥ ಮಾಡಿದ್ದಾರೆ.

ಇನ್ನೂ ಮೂರು ವರ್ಷ ಸ್ವಲ್ಪ ಸುಮ್ಮನಿರಿ, ನನಗೆ ಕೊಟ್ಟಿದ್ದನ್ನ ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿಕಾರಿದ್ದಾರೆ. ಜಿಲ್ಲೆಯ ಆಲೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಹೆಚ್.ಎಸ್ ಪ್ರಕಾಶನನ್ನು ನಾಲ್ಕು ಬಾರಿ ಗೆಲ್ಲಿಸಿದ್ದರು. 2013ರಲ್ಲಿ ಪ್ರಕಾಶ್‌ಗೆ ಸೀಟ್ ಕೊಡಿಸಿಕೊಂಡು ಬಂದೆ, ಅಲ್ಪಸಂಖ್ಯಾತರಿಂದಾಗಿ ಪ್ರಕಾಶ್ ಸೋತರು ಎಂದು ಹೇಳಿದ್ದಾರೆ.

2023ರ ಅಸೆಂಬ್ಲಿ ಚುನಾವಣೆಯಲ್ಲಿ ಹಾಸನದಲ್ಲಿ ಐವತ್ತು ಸಾವಿರ ವೋಟ್ ಲೀಡ್ ಗಿಂತ ಒಂದು ವೋಟು ಕಡಿಮೆಯಾದರೆ ರಾಜೀನಾಮೆ ಕೊಡುತ್ತೇನೆ ಎಂದು ಚಾಲೆಂಜ್ ಹಾಕಿದ್ದರು. ಆ ಚುನಾವಣೆಯಲ್ಲಿ ಸ್ವರೂಪ್ ಪ್ರಕಾಶ್ ಸುಮಾರು ಎಂಟು ಸಾವಿರ ಮತಗಳಿಂದ ಗೆದ್ದ ಎಂದು ರೇವಣ್ಣ ಹೇಳಿದ್ದಾರೆ. ನಾನು ಹಾಸನದಲ್ಲಿ ಈಗಾಗಲೇ ಗೆದ್ದಾಗಿದೆ, ಎಷ್ಟು ಅಂತರದಿಂದ ಗೆಲುವು ಸಾಧಿಸುತ್ತೇನೆ ಎನ್ನುವುದು ಮಾತ್ರ ಸದ್ಯಕ್ಕಿರುವ ಕುತೂಹಲ. ನನ್ನ ಲೆಕ್ಕಾಚಾರದ ಪ್ರಕಾರ, ಐವತ್ತು ಸಾವಿರ ಲೀಡ್ ನಿಂದ ಗೆಲ್ಲಲಿದ್ದೇನೆ ಎಂದು ಪ್ರೀತಂ ಗೌಡ, ಬಹಳ ಓವರ್ ಕಾನ್ಫಿಡೆನ್ಸ್ ಮಾತನ್ನು ಆಡಿದ್ದರು. "ಪ್ರಜ್ವಲ್ ಒಳ್ಳೆಯ ಹುಡುಗ, ಅವನಿಗೆ ಏನೂ ಗೊತ್ತಾಗಲ್ಲ. ಇನ್ನೂ ಮೂರು ವರ್ಷ ಸುಮ್ಮನಿರಿ. ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೆಗೌಡರ ಮಗನೇ ಅಲ್ಲ " ಎಂದು ರೇವಣ್ಣ ತಿರುಗೇಟು ನೀಡಿದ್ದಾರೆ.

ಹೆಚ್.ಡಿ. ರೇವಣ್ಣ
ಸೆಕ್ಸ್ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೆ.19ಕ್ಕೆ ಮುಂದೂಡಿದ ಹೈಕೋರ್ಟ್

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com