ಪಕ್ಷಕ್ಕೆ ಮುಜುಗರ ತರದಿರಿ: ಯತ್ನಾಳ್'ಗೆ BJP ಬಂಡಾಯ ನಾಯಕರ ಮನವಿ

ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಯತ್ನಾಳ್ ಹೊಸದೊಂದು ಪಕ್ಷ ಕಟ್ಟುವುದಾಗಿ ಘೋಷಣೆ ಮಾಡಿದ್ದರು. ಈ ಸುದ್ದಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ಬಿಜೆಪಿ ಬಂಡಾಯ ನಾಯಕರು
ಬಿಜೆಪಿ ಬಂಡಾಯ ನಾಯಕರು
Updated on

ಬೆಳಗಾವಿ: ಪಕ್ಷದ ನಾಯಕರಿಗೆ ಮುಜುಗರ ಉಂಟುಮಾಡುವ ಹೇಳಿಕೆಗಳನ್ನು ನೀಡಬೇಡಿ ಎಂದು ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಶಾಸಕರ ಗುಂಪು ಮಂಗಳವಾರ ಮನವಿ ಮಾಡಿದೆ.

ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಯತ್ನಾಳ್ ಹೊಸದೊಂದು ಪಕ್ಷ ಕಟ್ಟುವುದಾಗಿ ಘೋಷಣೆ ಮಾಡಿದ್ದರು. ಈ ಸುದ್ದಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಯತ್ನಾಳ್ ಅವರ ಜೊತೆಗೆ ಇತರೆ ಬಂಡಾಯ ಶಾಸಕರೂ ಕೂಡ ಹೋಗುತ್ತಾರೆಂಬ ಚರ್ಚೆಗಳು ಆರಂಭವಾಗಿತ್ತು.

ಇದರ ಬೆನ್ನಲ್ಲೇ ಯತ್ನಾಳ್ ಅವರೊಂದಿಗೆ ಮಾತುಕತೆ ನಡೆಸಿರುವ ರಮೇಶ್ ಜಾರಕಿಹೊಳಿಯವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಸ್ಥಾಪಿಸುವ ಮಾತುಗಳು ಊಹಾಪೋಹ ಮಾತ್ರ. ಯತ್ನಾಳ್ ಅವರು ಬಿಜೆಪಿಯನ್ನು ಬಿಟ್ಟುಹೋಗುವುದಿಲ್ಲ, ಪಕ್ಷದಲ್ಲೇ ಮುಂದುವರೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಬಂಡಾಯ ನಾಯಕರು
ಮುಸ್ಲಿಮರ ಪಕ್ಷ ಕಾಂಗ್ರೆಸ್ ಸೇರಲ್ಲ; ವಿಜಯದಶಮಿವರೆಗೂ ಜನರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಡೆ: ಯತ್ನಾಳ್

ಯತ್ನಾಳ್ ಬಿಜೆಪಿಗೆ ವಾಪಸ್ ಬರುತ್ತಾರೆ, ಅವರು ಬೇರೆಡೆಗೆ ಹೋಗುವುದಿಲ್ಲ, ಯತ್ನಾಳ್ ಅವರು ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶ ವಿಭಿನ್ನವಾಗಿದೆ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಅಸಂಗತವಾಗಿವೆ. ಹಿಂದೂತ್ವದ ಆದರ್ಶಗಳಿಗಾಗಿ ಯತ್ನಾಳ್ ಹೊಸ ಪಕ್ಷ ಕಟ್ಟುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆದಿದ್ದವು, ಆರ್‌ಎಸ್‌ಎಸ್ ಇರುವಾಗ ಹೊಸ ಪಕ್ಷದ ಅವಶ್ಯಕತೆ ಇಲ್ಲ, ಅಷ್ಟೇ ಸಾಕು ಎಂದು ಹೇಳಿದರು.

ಇತ್ತೀಚೆಗೆ ನಡೆದ ಶಾಸಕರ ಸಮಿತಿಯ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದ್ದು, ಪಕ್ಷಕ್ಕೆ ಮುಜುಗರ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡದಂತೆ ಯತ್ನಾಳ್ ಅವರಿಗೆ ಸೂಚಿಸಲಾಗಿದೆ. ಪಕ್ಷದ ಒಗ್ಗಟ್ಟು ಮತ್ತು ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com