ಅಹಮದಾಬಾದ್‌ ಎಐಸಿಸಿ ಸಭೆಗೆ ರಾಜ್ಯದ 'ಕೈ' ನಾಯಕರು ದೌಡು: ಪಕ್ಷದ ಪುನಾರಚನೆಗೆ ಒತ್ತು

ಬುಧವಾರ ಮತ್ತು ಗುರುವಾರ ನಡೆಯಲಿರುವ ನಿರ್ಣಾಯಕ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸಭೆ ಕಾಂಗ್ರೆಸ್‌ ರಾಜಕೀಯ ದಿಕ್ಸೂಚಿ ಬದಲಾಯಿಸುವ ಕ್ಷಣವಾಗಿದೆ, ಈ ಸಭೆಗೆ ಕರ್ನಾಟಕ ಹಲವು ಪ್ರಮುಖ ನಾಯಕರು ಹಾಜರಾಗಲಿದ್ದಾರೆ.
Siddaramaiah And Dk shivakumar
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
Updated on

ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್​ ಸಮಿತಿ (ಎಐಸಿಸಿ) ರಾಷ್ಟ್ರೀಯ ಸಮ್ಮೇಳನ ಇದೇ ಏಪ್ರಿಲ್​ 8- 9ರಂದು ಅಹಮದಾಬಾದ್​ನಲ್ಲಿ ಆಯೋಜನೆಗೊಂಡಿದ್ದು, 64 ವರ್ಷಗಳ ಬಳಿಕ ಗುಜರಾತ್​ನಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ವಿಶೇಷವಾಗಿದೆ.

ಬುಧವಾರ ಮತ್ತು ಗುರುವಾರ ನಡೆಯಲಿರುವ ನಿರ್ಣಾಯಕ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸಭೆ ಕಾಂಗ್ರೆಸ್‌ ರಾಜಕೀಯ ದಿಕ್ಸೂಚಿ ಬದಲಾಯಿಸುವ ಕ್ಷಣವಾಗಿದೆ, ಈ ಸಭೆಗೆ ಕರ್ನಾಟಕ ಹಲವು ಪ್ರಮುಖ ನಾಯಕರು ಹಾಜರಾಗಲಿದ್ದಾರೆ.

ಇದು ಕೇವಲ ಮತ್ತೊಂದು ಕಾರ್ಯತಂತ್ರದ ಸಭೆ ಎಂದು ನಿರೀಕ್ಷಿಸಲಾಗುವುದಿಲ್ಲ ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಪುನರ್ರಚಿಸುವತ್ತ ಪ್ರಮುಖ ಹೆಜ್ಜೆಯಾಗಲಿದೆ. ಸಂಘಟನೆಯನ್ನು ವಿಕೇಂದ್ರೀಕರಿಸಲು ಗಂಭೀರ ಪ್ರಯತ್ನ ನಡೆಯುತ್ತಿದೆ ಎಂದು ಎಐಸಿಸಿಯ ಹಿರಿಯ ಪದಾಧಿಕಾರಿಯೊಬ್ಬರು ಹೇಳಿದರು. ಜಿಲ್ಲಾಧ್ಯಕ್ಷರ ಜೊತೆ ಮಾಲೋಚಿಸಲು ಸಹ ಎಐಸಿಸಿ ಸಭೆಯಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಸ್ಥಳೀಯ ನಾಯಕತ್ವವನ್ನು ಸಬಲೀಕರಣಗೊಳಿಸುವುದು ಹಾಗೂ ವಿಧಾನಸಭೆ ಮತ್ತು ಲೋಕಸಭೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೆಚ್ಚು ಪಾಲ್ಗೋಳ್ಳುವಂತೆಮಾಡುವುದಾಗಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಚಿವರು ಸೇರಿದಂತೆ ಕರ್ನಾಟಕದಿಂದ ಸುಮಾರು 140-150 ನಾಯಕರು ಎಐಸಿಸಿ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದು ಹೊಸ ಕಾಂಗ್ರೆಸ್‌ನ ಆರಂಭ ಎಂದು ಹಿರಿಯ ನಾಯಕರೊಬ್ಬರು ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಅಂಗೀಕರಿಸಲಾದ ಐತಿಹಾಸಿಕ ನಿರ್ಣಯವನ್ನು ಉಲ್ಲೇಖಿಸಿ ಹೇಳಿದರು, ಅಲ್ಲಿ ಪಕ್ಷವು ತನ್ನನ್ನು ತಾನು ಸುಧಾರಿಸಿಕೊಳ್ಳುವುದಾಗಿ ಮತ್ತು ಪುನರ್ರಚಿಸುವುದಾಗಿ ಭರವಸೆ ನೀಡಿತು.

Siddaramaiah And Dk shivakumar
ಕಾಂಗ್ರೆಸ್ ಪಕ್ಷ ಬಲಪಡಿಸಲು ಎಐಸಿಸಿ ಹೊಸ ಸೂತ್ರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಮುಂದಿನ ವರ್ಷ ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಈಗಾಗಲೇ ಐದು ಬಿಜೆಪಿ ಆಡಳಿತಗಳನ್ನು ಕಂಡ ಗುಜರಾತಿನಲ್ಲಿ ಸರ್ಕಾರ ರಚಿಸುವುದಾಗಿ ಹೇಳಿಕೊಳ್ಳುತ್ತಿದೆ. "ಗುಜರಾತ್‌ನಲ್ಲಿ ಕಾಂಗ್ರೆಸ್ ಪುನರಾಗಮನಕ್ಕೆ ನಾವು ತಯಾರಿ ನಡೆಸುತ್ತಿದ್ದೇವೆ" ಎಂದು ಹಿರಿಯ ರಾಷ್ಟ್ರೀಯ ನಾಯಕರೊಬ್ಬರು ಘೋಷಿಸಿದರು.

ಕೆಲವು ಕೆಪಿಸಿಸಿ ಸಂಘಟಕರು ಈಗಾಗಲೇ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಲು ಅಹಮದಾಬಾದ್‌ಗೆ ತೆರಳುತ್ತಿದ್ದರೆ, ಹಲವಾರು ಉನ್ನತ ಸಚಿವರು ಮಂಗಳವಾರ ಸಂಜೆ ಹೊರಡಲಿದ್ದಾರೆ, ಉಳಿದ ಹಿರಿಯ ನಾಯಕರು ಬುಧವಾರ ಹೊರಡಲಿದ್ದಾರೆ.

ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸಲೀಮ್ ಅಹ್ಮದ್ ಮಾತನಾಡಿ, ಕಾಂಗ್ರೆಸ್ ಪುನರ್ರಚನೆ, ಸುಧಾರಣೆ ಮತ್ತು ಬಲಪಡಿಸುವ ಬಗ್ಗೆ ಗಂಭೀರ ಒತ್ತಡವಿದೆ ಎಂದು ಹೇಳಿದರು. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸೇರಿದಂತೆ ಪ್ರಮುಖ ತಂಡವು ಬುಧವಾರ ಬೆಳಿಗ್ಗೆ ಕರ್ನಾಟಕ ನಿಯೋಗವನ್ನು ಮುನ್ನಡೆಸಲಿದೆ ಎಂದು ಅವರು ಹೇಳಿದರು.

ಬಹುತೇಕ ಎಲ್ಲಾ ಉನ್ನತ ಕಾರ್ಯಕರ್ತರು ಅಹಮದಾಬಾದ್‌ಗೆ ಆಗಮಿಸಲಿದ್ದಾರೆ, ಕಾಂಗ್ರೆಸ್ ಪುನರುಜ್ಜೀವನದ ಕಥೆಯಲ್ಲಿ ಯಾವ ಅಧ್ಯಾಯವು ನಿರ್ಣಾಯಕವಾಗಲಿದೆ ಎಂಬುದರ ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com