Outdated ಜಾತಿಗಣತಿ ವರದಿಯನ್ನು ಕಸದ ಬುಟ್ಟಿಗೆ ಎಸೆಯಿರಿ: ಸರ್ಕಾರಕ್ಕೆ BJP ಆಗ್ರಹ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗಗಳ ಜನರ ಕಲ್ಯಾಣದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ವೈಜ್ಞಾನಿಕ ರೀತಿಯಲ್ಲಿ ಹೊಸ ಸಮೀಕ್ಷೆಯನ್ನು ನಡೆಸಿ. ಸರ್ವಪಕ್ಷ ಸಭೆ ಕರೆದ ನಂತರ ಅದನ್ನು ಕಾರ್ಯಗತಗೊಳಿಸಲಿ.
BY Vijayendra
ಬಿ.ವೈ. ವಿಜಯೇಂದ್ರ
Updated on

ಬೆಂಗಳೂರು: 2015 ರಲ್ಲಿ ನಡೆದ ಜಾತಿ ಜನಗಣತಿ "ಹಳೆಯದು" ಮತ್ತು "ಅವೈಜ್ಞಾನಿಕ"ವಾಗಿದ್ದು, ಈ ಜಾತಿಗಣತಿ ವರದಿಯನ್ನು ಕಸದ ಬುಟ್ಟಿಗೆ ಹಾಕಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗಗಳ ಜನರ ಕಲ್ಯಾಣದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ವೈಜ್ಞಾನಿಕ ರೀತಿಯಲ್ಲಿ ಹೊಸ ಸಮೀಕ್ಷೆಯನ್ನು ನಡೆಸಿ. ಸರ್ವಪಕ್ಷ ಸಭೆ ಕರೆದ ನಂತರ ಅದನ್ನು ಕಾರ್ಯಗತಗೊಳಿಸಲಿ ಎಂದು ಹೇಳಿದರು.

ಜಾತಿಗಣತಿ ವರದಿ ಕುರಿತು ಸ್ವತಃ ಮುಖ್ಯಮಂತ್ರಿ, ಡಿಸಿಎಂ ಮತ್ತು ಸಚಿವರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸರ್ಕಾರದೊಳಗೇ ವರದಿ ಕುರಿತು ಸ್ಪಷ್ಟತೆ ಇಲ್ಲ ಎಂದು ತಿಳಿಸಿದರು.

ಬಿಜೆಪಿಯ ಜನಕ್ರೋಶ ಯಾತ್ರೆಯ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರವು ಭಯಭೀತವಾಗಿದೆ. ತನ್ನ ವೈಫಲ್ಯಗಳಿಂದ, ವಿಶೇಷವಾಗಿ ಬೆಲೆ ಏರಿಕೆ ಕುರಿತಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರದ ವಿರುದ್ಧ (ಏಪ್ರಿಲ್ 17 ರಂದು ಬೆಂಗಳೂರಿನಲ್ಲಿ) ಪ್ರತಿಭಟನೆ ನಡೆಸುತ್ತಿದೆ. ಬೆಲೆ ಏರಿಕೆಯ ಕುರಿತು ಕೇಂದ್ರ ಸರ್ಕಾರದ ಬಗ್ಗೆ ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದರು.

2004 ರಿಂದ 2014 ರವರೆಗಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆಗಳು ಶೇ.90ರಷ್ಟು ಮತ್ತು ಡೀಸೆಲ್ ಬೆಲೆಗಳು ಶೇ.96ರಷ್ಟು ಏರಿಕೆಯಾಗಿತ್ತು. ಆದಾಗ್ಯೂ, 2014 ರಿಂದ 2024 ರವರೆಗೆ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅಡಿಯಲ್ಲಿ, ಪೆಟ್ರೋಲ್ ಬೆಲೆಗಳು 72 ರಿಂದ 100 ರೂ.ಗಳಿಗೆ ಏರಿಕೆಯಾಗಿವೆ ಅಂದರೆ ಶೇ.38ರಷ್ಟು ಹೆಚ್ಚಳವಾಗಿದೆ. ಡೀಸೆಲ್ ಬೆಲೆಗಳು 55 ರಿಂದ 90 ರೂ.ಗಳಿಗೆ ಏರಿಕೆಯಾಗಿವೆ (ಶೇ.63) ಎಂದು ಹೇಳಿದರು.

BY Vijayendra
ಕುರ್ಚಿ ಕಳೆದುಕೊಳ್ಳುವ ಭೀತಿಯಿಂದಾಗಿ ಸಿಎಂ ಬೆಂಗಳೂರು ಬಿಟ್ಟು ತೆರಳುತ್ತಿಲ್ಲ: ವಿಜಯೇಂದ್ರ

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಜಾತಿ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿದ್ದರೆ, ಅವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಏಕೆ ಕೊಡಬೇಕು ಎಂದು ಪ್ರಶ್ನಿಸಿದರು.

ಇದು ಸಿದ್ದರಾಮಯ್ಯನವರ ಗಿಮಿಕ್ ಅಲ್ಲದೆ ಬೇರೇನೂ ಅಲ್ಲ. ಮುಂದಿನ ಸಚಿವ ಸಂಪುಟದಲ್ಲಿ, ಶಿವಕುಮಾರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಿದ್ದೇನೆ. ಅದು ಜಾತಿ ಜನಗಣತಿಯ ಬಗ್ಗೆ ನಿರ್ಧರಿಸುತ್ತದೆ ಎಂದಷ್ಟೇ ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಮೇಲೆ ತೆರಿಗೆ ದಾಳಿ ನಡೆಸಿದೆ.ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು 'ಮನುವಾದಿಗಳು' ಎಂದು ಕರೆಯುತ್ತಾರೆ, ಆದರೆ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಶರಿಯಾ ಕಾನೂನನ್ನು ಜಾರಿಗೊಳಿಸಿದೆ ಎಂದು ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಹತ್ಯೆಯ ಕುರಿತು ಮಾತನಾಡಿ, ಇಂತಹ ಅಪರಾಧಗಳನ್ನು ಮಾಡುವವರು ಕಾನೂನಿನ ಪ್ರಕಾರ ಶಿಕ್ಷೆಯನ್ನು ಎದುರಿಸಬೇಕು ಎಂದು ಹೇಳಿದರು. ಇದೇ ವೇಳೆ ಪೊಲೀಸ್ ಎನ್‌ಕೌಂಟರ್ ಅನ್ನು ಶ್ಲಾಘಿಸಿದರು.

ಈ ನಡುವೆ ಸರ್ಕಾರದ ಜಾತಿ ಗಣತಿ ವರದಿಯನ್ನು ಜೆಡಿಎಸ್ ಕೂಡ ಟೀಕಿಸಿದೆ. ಜೆಡಿಎಸ್ ರಾಜ್ಯ ಯುವ ಘಟಕದ ಮುಖ್ಯಸ್ಥ ನಿಖಿಲ್ ಕುಮಾರಸ್ವಾಮಿ ಜಾತಿ ಜನಗಣತಿ ವರದಿಯನ್ನು "ಸಿದ್ದರಾಮಯ್ಯ ಅವರಿಗಾಗಿ ಮತ್ತು ಸಿದ್ದರಾಮಯ್ಯ ಅವರೇ ಸಿದ್ಧಪಡಿಸಿದ ವರದಿ" ಎಂದು ಕರೆದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮೀಕ್ಷಕರು ನಿಜವಾಗಿಯೂ ಎಷ್ಟು ಮನೆಗಳಿಗೆ ಭೇಟಿ ನೀಡಿದ್ದಾರೆ ಎಂಬುದರ ದಾಖಲೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ನನ್ನ ತಂದೆ - ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ಕೇಂದ್ರ ಸಚಿವ. ಅವರ ಮನೆಗೂ ಸಹ ಸಮೀಕ್ಷೆಗಾಗಿ ಎಂದಿಗೂ ಭೇಟಿ ನೀಡಿಲ್ಲ. ಅದೇ ರೀತಿ, ಈ ದೇಶದ ಮಾಜಿ ಪ್ರಧಾನಿ - ನನ್ನ ಅಜ್ಜನ ಮನೆಗೆ ಯಾರೂ ಭೇಟಿ ನೀಡಿಲ್ಲ. ಅಂತಹ ಲೆಕ್ಕವಿಲ್ಲದಷ್ಟು ಉದಾಹರಣೆಗಳಿವೆ. ನಿಜಕ್ಕೂ ಜನಗಣತಿಯನ್ನು ನಡೆಸಲಾಗಿದೆಯೇ ಎಂಬ ಬಗ್ಗೆ ಅನುಮಾನಗಳಿವೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com