ಜಾತಿ ಗಣತಿ ವರದಿ ರಾಜ್ಯ ರಾಜಕೀಯದ 'ಗೇಮ್ ಚೇಂಜರ್'; ಟೀಕಿಸುವ ಮುನ್ನ ಓದಿಕೊಳ್ಳಿ: ಎಚ್.ಎಂ ರೇವಣ್ಣ

ಜಾತಿ ಜನಗಣತಿಯು "ಅವೈಜ್ಞಾನಿಕ" ಎಂದು ಹೇಳುವ ಕೆಲವು ಸಮುದಾಯಗಳ ಟೀಕೆಗೆ ಪ್ರತಿಕ್ರಿಯಿಸಿದ, ರೇವಣ್ಣ, " ತೀರ್ಪು ನೀಡುವ ಮೊದಲು ವರದಿಯನ್ನು ಓದಿ" ಎಂದು ಹೇಳಿದರು.
H M revanna
ಎಚ್.ಎಂ ರೇವಣ್ಣ
Updated on

ಬೆಂಗಳೂರು: ಒಂದೊಮ್ಮೆ ಜಾತಿ ಗಣತಿ ವರದಿ ಜಾರಿಯಾದರೆ ಕರ್ನಾಟಕದಲ್ಲಿ ಐತಿಹಾಸಿಕ ಘಟ್ಟವಾಗಲಿದೆ, ರಾಜ್ಯ ರಾಜಕೀಯದಲ್ಲಿ ಬಹು ದೊಡ್ಡ ಗೇಮ್ ಚೇಂಜರ್ ಆಗಲಿದೆ ಎಂದು ರಾಜ್ಯ ಖಾತರಿ ಸಮಿತಿಯ ಅಧ್ಯಕ್ಷ ಮತ್ತು ಹಿಂದುಳಿದ ವರ್ಗಗಳ ಶಾಸಕರ ವೇದಿಕೆಯ ಸಂಚಾಲಕ ಎಚ್.ಎಂ. ರೇವಣ್ಣ ಹೇಳಿದ್ದಾರೆ.

ರಾಜಕೀಯ ಪ್ರಾತಿನಿಧ್ಯದ ಕೊರತೆಯಿಂದ ದೀರ್ಘಕಾಲದಿಂದ ಅಸಮಾಧಾನಗೊಂಡಿದ್ದ ಹಿಂದುಳಿದ ವರ್ಗಗಳು ಅಂತಿಮವಾಗಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಹೆಚ್ಚಿನ ಸ್ಥಾನಗಳು, ಮತ್ತು ಹೆಚ್ಚಿನ ಬಲವನ್ನು ಪಡೆಯುತ್ತಾರೆ, ಇದರಿಂದ ನೈಜ, ಸ್ಪಷ್ಟ ಬದಲಾವಣೆಗೆ ಎದುರು ನೋಡಬಹುದು, ತಮಿಳುನಾಡು ಮತ್ತು ಜಾರ್ಖಂಡ್‌ನಂತಹ ರಾಜ್ಯಗಳು ಶೇಕಡಾ 50 ಕ್ಕಿಂತ ಹೆಚ್ಚು ಮೀಸಲಾತಿಯನ್ನು ಅನುಭವಿಸುತ್ತಿವೆ, ಹೀಗಿರುವಾಗ ಕರ್ನಾಟಕದಲ್ಲಿ ಏಕೆ ಮಾಡಬಾರದ ಎಂದು ರೇವಣ್ಣ ಪ್ರಶ್ನಿಸಿದ್ದಾರೆ. ಹಿಂದುಳಿದ ವರ್ಗಗಳ ಸದಸ್ಯರು ಶೇಕಡಾ 52 ರಷ್ಟಿದ್ದಾರೆ, ಆದರೆ ಸಂದ್ಯ ಕೇವಲ ಶೇ. 32 ರಷ್ಚು ಮೀಸಲಾತಿಯನ್ನು ಪಡೆಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.

1989 ಮತ್ತು 1994 ರಲ್ಲಿ ಮಾಗಡಿಯಿಂದ ಶಾಸಕರಾಗಿದ್ದ ತಮ್ಮ ದಿನಗಳನ್ನು ರೇವಣ್ಣ ನೆನಪಿಸಿಕೊಂಡರು ರೇವಣ್ಣ, ಆಗ, ನನ್ನ ಸ್ವಂತ ಕ್ಷೇತ್ರದಲ್ಲಿ ಕುರುಬ ಸಮುದಾಯವು ಕೇವಲ 2,500 ರಷ್ಟಿತ್ತು. ಆದರೆ ಈಗ, ಜಾತಿ ಗುರುತು ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ, ಜಾತಿ ಇಂದು ಪ್ರಬಲ ಅಸ್ತ್ರವಾಗಿದೆ.

ಅಂದಿನಿಂದ ರೇವಣ್ಣ ಯಾವುದೇ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿಲ್ಲ ಮತ್ತು ಮೇ 2023 ರಲ್ಲಿ ಅವರು ಸ್ಪರ್ಧಿಸಿದ ಕೊನೆಯ ಚುನಾವಣೆಯಲ್ಲಿ ಅವರು ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಸೋಲನುಭವಿಸಿದರು.

H M revanna
ಜಾತಿ ಗಣತಿ ವರದಿ: ತಪ್ಪು ಹೆಜ್ಜೆ ಇಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ; ಸತೀಶ್ ಜಾರಕಿಹೊಳಿ ಎಚ್ಚರಿಕೆ

ಹಿಂದುಳಿದ ಸಮುದಾಯಗಳಲ್ಲಿ ಅತಿ ದೊಡ್ಡದಾದ ಮತ್ತು ಸುಮಾರು ಶೇಕಡಾ 7.8 ರಷ್ಟಿರುವ ಕುರುಬರು ಸಣ್ಣ ಸಮುದಾಯವಲ್ಲ, ಚಾಮರಾಜನಗರದಿಂದ ಬೀದರ್ ವರೆಗೆ ಇದ್ದಾರೆ ಮತ್ತು ಬಾದಾಮಿಯಂತಹ ಕೆಲವು ಕ್ಷೇತ್ರಗಳಲ್ಲಿ ಅವರ ಸಂಖ್ಯೆ ಸಾಕಷ್ಟು ದೊಡ್ಡದಾಗಿದೆ. ಇನ್ನೊಂದು ಪ್ರಭಾವಿ ಹಿಂದುಳಿದ ಸಮುದಾಯವೆಂದರೆ ಗಂಗಾಮತಸ್ತ (ಮೀನುಗಾರ ಸಮುದಾಯ), ಅವರ ಸಂಖ್ಯೆ ಕೂಡ ದೊಡ್ಡದಿದೆ. ಇನ್ನೊಂದು ದೊಡ್ಡ ಹಿಂದುಳಿದ ಸಮುದಾಯ ಈಡಿಗರಾಗಿದ್ದಾರೆ. ಕರ್ನಾಟಕದ ಸುಮಾರು 110-120 ಕ್ಷೇತ್ರಗಳಲ್ಲಿ ಅವರೆಲ್ಲರೂ ನಿರ್ಣಾಯಕ ಅಂಶವಾಗಿದ್ದಾರೆ ಎಂದು ವಿಶ್ಲೇಷಕರು ವಿವರಿಸಿದರು.

ಜಾತಿ ಜನಗಣತಿಯು "ಅವೈಜ್ಞಾನಿಕ" ಎಂದು ಹೇಳುವ ಕೆಲವು ಸಮುದಾಯಗಳ ಟೀಕೆಗೆ ಪ್ರತಿಕ್ರಿಯಿಸಿದ, ರೇವಣ್ಣ," ತೀರ್ಪು ನೀಡುವ ಮೊದಲು ವರದಿಯನ್ನು ಓದಿ" ಎಂದು ಹೇಳಿದರು.

ಗಣತಿದಾರರು ಗ್ರಾಮೀಣ ಕುಟುಂಬಗಳಲ್ಲಿ ಶೇಕಡಾ 98 ರಷ್ಟು ಮತ್ತು ನಗರ ಪ್ರದೇಶಗಳಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಜನರನ್ನು ತಲುಪಿ ಸಮೀಕ್ಷೆ ಮಾಡಿದ್ದಾರೆ. ಇವರು ಸರ್ಕಾರಿ ನೌಕರರು, ಮುಖ್ಯವಾಗಿ ಶಿಕ್ಷಕರು, ಇವರಿಗೆ ಯಾವುದೇ ಹಿಡನ್ ಅಜೆಂಡಾ ಇಲ್ಲ, ಅವರು ಮೋಸ ಮಾಡುವವರಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com