
ಬೆಂಗಳೂರು: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತಗಳವು ಆರೋಪವನ್ನ ಸಂಸದ ಪಿಸಿ ಮೋಹನ್ ತಳ್ಳಿಹಾಕಿದ್ದಾರೆ. ಮಹಾದೇವಪುರ ಕ್ಷೇತ್ರದ ಮೇಲೆ ಅನುಮಾನ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಸರ್ವಜ್ಞ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ, ಅಲ್ಲೂ ಪರಿಶೀಲನೆ ಮಾಡಲಿ ಅಂತಾ ಪಿಸಿ ಮೋಹನ್ ತಿರುಗೇಟು ನೀಡಿದ್ದಾರೆ.
2024 ರ ಗೆಲುವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ, ಸಾವಿರಾರು ಹಿಂದೂಗಳು ತಮ್ಮ ಪಕ್ಷಕ್ಕೆ ಮತ ಹಾಕಿದ್ದಾರೆ, ಮತಗಳ್ಳತನ ಆಗಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾರ್ಲಿಮೆಂಟ್‌ನಲ್ಲಿ ಮತದಾರರ ಪರಿಷ್ಕರಣೆ ಆಗಬಾರದು ಎನ್ನುತ್ತಾರೆ, ಇಲ್ಲಿ ಅಕ್ರಮ ಮತಗಳಿವೆ ಎಂದು ಹೇಳುತ್ತಿದ್ದಾರೆ. ಇದು ಯಾವ ರೀತಿಯ ದ್ವಂದ್ವ ರೀತಿ ಅಂದರು. 2009ರಿಂದ ನಿರಂತರವಾಗಿ ಮತಗಳು ಏರಿಕೆಯಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ಇದೆ. ಮಹಾದೇವಪುರ ಕ್ಷೇತ್ರದ ಮೇಲೆ ರಾಹುಲ್ ಗಾಂಧಿ ಅವರಿಗೆ ಅನುಮಾನ ಬಂದಿದೆ. ಸರ್ವಜ್ಞ ನಗರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ. ಅಲ್ಲಿ ಮತಗಳ ಪ್ರಮಾಣವೂ ಹೆಚ್ಚಾಗಿದೆ. ಮತ ಯಾಕೆ ಹೆಚ್ಚಾಗಿದೆ ಎನ್ನುವ ಅನುಮಾನಕ್ಕೆ ಅಲ್ಲೂ ಪರಿಶೀಲನೆ ಮಾಡಲಿ ಎಂದು ಆಗ್ರಹಿಸಿದರು.
ಇನ್ನು, 2024ರಲ್ಲಿ ಯಾರ ಸರ್ಕಾರ ಇತ್ತು? ರಾಜ್ಯ ಸರ್ಕಾರದ ಅಧಿಕಾರಿಗಳ ಸಹಯೋಗದೊಂದಿಗೆ ಮತದಾರರ ಪಟ್ಟಿ ಮಾಡಿಕೊಡಲಾಗುತ್ತದೆ. ಹಾಗಿದ್ದರೆ ಅವರದ್ದೇ ತಪ್ಪು ಅಲ್ಲವೇ. ಕಾಂಗ್ರೆಸ್‌ಗೆ ಒಂದು ಸ್ಥಾನದಿಂದ ಲೋಕಸಭೆಯಲ್ಲಿ 9 ಸ್ಥಾನ ಹೇಗೆ ಬಂತು ಎಂದು ಪ್ರಶ್ನಿಸಿದರು.
ಯಾವುದೇ ವಂಚನೆ ಮಾಡಿ ಬಿಜೆಪಿ ಮಹದೇವಪುರವನ್ನು ಗೆದ್ದಿಲ್ಲ. ವಂಶವಾಹಿ ಆಳ್ವಿಕೆ, ರಾಜಕೀಯ ಓಲೈಕೆ ವಿರುದ್ಧ ಹಿಂದೂಗಳು ನಿರ್ಣಾಯಕವಾಗಿ ಮತ ಚಲಾಯಿಸಿದ್ದರಿಂದ ನಾವು ಗೆದ್ದಿದ್ದೇವೆ. ಅಲ್ಪಸಂಖ್ಯಾತ ಪ್ರಾಬಲ್ಯದ ಕ್ಷೇತ್ರಗಳು ಕಾಂಗ್ರೆಸ್ ಆಸ್ತಿಯಲ್ಲ. ಮತದಾರ ಸರ್ವೋಚ್ಚ. ಜನಾದೇಶವನ್ನು ಸ್ವೀಕರಿಸಬೇಕು ಮೋಹನ್ ಹೇಳಿದರು.
ರಾಹುಲ್ ಗಾಂಧಿ ಹಿಂದೂ ಬಹುಸಂಖ್ಯಾತ ಕ್ಷೇತ್ರವಾದ ಮಹಾದೇವಪುರದಲ್ಲಿ ಮತ ಕಳ್ಳತನ ಆರೋಪ ಮಾಡುತ್ತಿದ್ದಾರೆ, ಅಲ್ಪಸಂಖ್ಯಾತರ ಪ್ರಾಬಲ್ಯದ ಪ್ರದೇಶವಾದ ಶಿವಾಜಿನಗರದಲ್ಲಿ ಅಲ್ಲ. ಆದ್ದರಿಂದ ಹಿಂದೂಗಳು ಬಿಜೆಪಿಗೆ ಮತ ಹಾಕಿದಾಗ ಅದನ್ನು ವಂಚನೆ ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಆದರೆ ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಮತ ಹಾಕಿದಾಗ ಅದನ್ನು ಜಾತ್ಯತೀತತೆ ಎಂದು ಕರೆಯಲಾಗುತ್ತದೆ" ಎಂದು ಮೋಹನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Advertisement