

ತುಮಕೂರು: ರಾಜ್ಯ ಕಾಂಗ್ರೆಸ್ ನಲ್ಲಿ CM ಕುರ್ಚಿಗಾಗಿ ಗುದ್ದಾಟ ನಡೆಯುತ್ತಿರುವಂತೆಯೇ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ, ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೇ ತನ್ನ ಗೆಲುವಿನ ಗುಟ್ಟನ್ನು ಶನಿವಾರ ರಟ್ಟು ಮಾಡಿದ್ದಾರೆ.
ಹೌದು.ನಗರದ ಹೊರ ವಲಯದ ಹೆಗ್ಗೆರೆಯಲ್ಲಿ ರೈಲ್ವೆ ಮೇಲು ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ವಿ. ಸೋಮಣ್ಣ, ಪರಮೇಶ್ವರ್ ಅದೃಷ್ಟದ ಗೃಹ ಮಂತ್ರಿಯಾಗಿದ್ದಾರೆ. ಎಲ್ಲೋ ಒಂದು ಕಡೆ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಅನ್ನೋ ಆಸೆ ಇದೆ. ಇದನ್ನ ನಾನೊಬ್ಬನೇ ಹೇಳುತ್ತಿಲ್ಲ. ತುಮಕೂರಿನ ಮಹಾಜನತೆಯ ಅಭಿಪ್ರಾಯ ಎಂದರು.
ಪಕ್ಕದಲ್ಲಿದ್ದ ಶಾಸಕ ಸುರೇಶ್ ಗೌಡ, ಡಿಕೆ ಶಿವಕುಮಾರ್ ಏನಾಗಬೇಕು? ಎಂದು ಕೇಳಿದರು. ಆಮೇಲೆ ಮಾತನಾಡೋಣ. ಅದೆಲ್ಲ ಸೆಕೆಂಡರಿ, ಅವರ ನಡವಳಿಕೆಯೂ ಬೇಕಲ್ಲ ಎಂದು ಹೇಳುವ ಮೂಲಕ ವಿಷಯಾಂತರ ಮಾಡಿದರು.
ಇದೇ ವೇಳೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ನಾಯಕರಂತೆ ಕಾಂಗ್ರೆಸ್ ನ ನಾಯಕರು ಸಹಕಾರ ನೀಡಿದ್ದಾರೆ ಎಂದು ಸ್ಪೋಟಕ ಮಾಹಿತಿ ಹಂಚಿಕೊಳ್ಳುವ ಮೂಲಕ ತನ್ನ ಗೆಲುವಿನ ಗುಟ್ಟನ್ನು ರಟ್ಟು ಮಾಡಿದರು.
ಪರಮೇಶ್ವರ್ ಅವರ ಸಮ್ಮುಖದಲ್ಲಿಯೇ ಕಾಂಗ್ರೆಸ್ ನಾಯಕರು ಸಹಕಾರ ನೀಡಿದ್ದಾರೆ ಎಂದು ವಿ. ಸೋಮಣ್ಣ ಹೇಳಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿ.ಸೋಮಣ್ಣ ವಿರುದ್ಧ ಸ್ಪರ್ಧಿಸಿದ್ದ ಎಸ್.ಪಿ. ಮುದ್ದ ಹನುಮೇಗೌಡ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣರಾಗಿದ್ದಾರೆಯೇ? ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
Advertisement