
ತುಮಕೂರು: ದೆಹಲಿಯಲ್ಲಿ ಬಿಜೆಪಿ ಗೆದ್ದಿರುವುದಕ್ಕೇ ಕೇಂದ್ರ ಸಚಿವ ವಿ ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ದೆಹಲಿಯ ನಾಗಲೋಯಿ ಜಾಟ್ ಕ್ಷೇತ್ರದಲ್ಲಿ ಗೆದ್ದಿದ್ದೇವೆ, ನನಗೆ ಆ ಕ್ಷೇತ್ರ ಉಸ್ತುವಾರಿ ಕೊಟ್ಟಿದ್ದರು. ಅಲ್ಲಿ ಜೀವನದಲ್ಲಿ ಗೆದ್ದಿರಲಿಲ್ಲ ಈಗ ಅಲ್ಲಿ ಗೆದ್ವಿ ಎಂದು ಸಂತಸ ಹಂಚಿಕೊಂಡರು.
ದೆಹಲಿಯಲ್ಲಿ ನಾನು ಪ್ರಚಾರಕ್ಕೆಂದು ತೆರಳಿದ ನಾಗ್ಲೋಯಿ ಜಾಟ್ ಕ್ಷೇತ್ರವು ಬೆಂಗಳೂರಿನ ಪಾದರಾಯಣಪುರ ಮತ್ತು ಶಿವಾಜಿನಗರಕ್ಕಿಂತ ಕಡೆಯಾಗಿದೆ. ಹಳೆಯ ದೆಹಲಿಯ ಭಾಗವಾಗಿರುವ ಅಲ್ಲಿ ಬೆಂಗಳೂರಿನ ಹಾಗೆಯೇ ನಾನು ಪ್ರಚಾರ ಮಾಡಿದ್ದೆ. ಹಿಂದೆ ಯಾವತ್ತೂ ಗೆದ್ದಿರದ ನಾಗ್ಲೋಯಿ ಜಾಟ್ ಕ್ಷೇತ್ರದಲ್ಲಿ ಬಿಜೆಪಿಯ ಮನೋಜ್ ಕುಮಾರ್ ಶೋಕೀನ್ 26,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಚಿಂತನೆಯೇ ದೆಹಲಿಯಲ್ಲಿ ಬಿಜೆಪಿ ಗೆಲುವಿಗೆ ಕಾರಣವೆಂದು ಸೋಮಣ್ಣ ಹೇಳಿದ್ದಾರೆ.
ಇನ್ನೂ ಮೂರು ವರ್ಷಗಳಲ್ಲಿ ದೆಹಲಿ ಅಭಿವೃದ್ಧಿ ಆಗಲಿದೆ. ಮೋದಿಯವರು ಅಭಿವೃದ್ಧಿ ಮಾಡಲಿದ್ದಾರೆ. ಅಣ್ಣ ಹಜಾರೆ ಹೆಸರಿನಲ್ಲಿ ಹೋದ ಕ್ರೇಜಿವಾಲ್ ಅವರ ಬಗ್ಗೆ ಜನರಿಗೆ ಅರ್ಥವಾಗಿದೆ. ದೇಶದ ರಾಜಧಾನಿ ಮೇಲ್ಪಂಕ್ತಿಯಲ್ಲಿ ಇರಬೇಕೆಂದು ತೋರಿಸಿದ್ದಾರೆ. ಅದಕ್ಕೆ ಧನ್ಯವಾದಗಳು ಎಂದು ಹೇಳಿದರು.
ಕುಂಭಮೇಳ ಐತಿಹಾಸಿಕ ಕಾರ್ಯಕ್ರಮ. ಸೋಮಣ್ಣ ಒಬ್ಬನೇ ಹೋಗಿ ರೈಲಿನಲ್ಲಿ ನೋಡಿದೆ. ಯಾರಿಗೂ ಕಾಯಿಲೆ ಇಲ್ಲ, ಏನಿಲ್ಲ. ಲಕ್ಷಾಂತರ ಜನರು ಔಟ್ ಪೆಷೆಂಟ್ ಆಗಿ ಬಂದರು, 450 ಜನರು ಮಾತ್ರ ದಾಖಲಾಗಿದ್ದರು. ಕಾಂಗ್ರೆಸ್ ನವರು ಕೂಡ ಹೋಗಿ ಕುಂಭಮೇಳದಲ್ಲಿ ಮಿಂದು ಬರ್ತಿದ್ದಾರೆ. ಭಗವಂತ ಮೋದಿ, ಯೋಗಿಯವರ ಜೊತೆ ಇದ್ದಾರೆ ಎಂದು ಹೇಳಿದರು.
Advertisement