SC-ST ಶಾಸಕರ ಔತಣಕೂಟಕ್ಕೆ ಕೊಕ್: ಹೈಕಮಾಂಡ್ ಮೂಲಕ ಪರಮೇಶ್ವರ್ ಗೆ ಡಿಕೆಶಿ ಬ್ರೇಕ್; ಸಿದ್ದು Campಗೆ ಟ್ರಬಲ್ ಶೂಟರ್ ಮಾಸ್ಟರ್‌ಸ್ಟ್ರೋಕ್!

ಪಕ್ಷದ ಹೈಕಮಾಂಡ್ ಡಿ.ಕೆ ಶಿವಕುಮಾರ್ ಸಂಘಟನಾ ಕೌಶಲ್ಯವನ್ನು ಅರಿತುಕೊಂಡಿದ್ದಾರೆ, ಅದಕ್ಕಾಗಿಯೇ ದೆಹಲಿ ಚುನಾವಣೆಗೆ ಮುನ್ನ ಮಹಿಳೆಯರಿಗೆ ‘ಪ್ಯಾರಿ ದೀದಿ’ ಭರವಸೆಯನ್ನು ಘೋಷಿಸಲು ಶಿವಕುಮಾರ್ ಅವರನ್ನು ನೇಮಿಸಲಾಯಿತು.
Siddaramaiah, dk Shivakumar and parameshwar
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಪರಮೇಶ್ವರ್
Updated on

ಬೆಂಗಳೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆಯೋಜಿಸಿದ್ದ ಎಸ್‌ಸಿ/ಎಸ್‌ಟಿ ಶಾಸಕರ ಸಭೆಯನ್ನು ಮುಂದೂಡುವಂತೆ ಮಾಡುವ ಮೂಲಕ ಪಕ್ಷದ ಹೈಕಮಾಂಡ್‌ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಇದು ಭವಿಷ್ಯದಲ್ಲಿ ಸಿಎಂ ಹುದ್ದೆಗೆ ಹಕ್ಕು ಮಂಡಿಸಲು ಅವರಿಗೆ ಸಹಾಯ ಮಾಡುತ್ತದೆ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಸಭೆಯನ್ನು ಮುಂದೂಡಲಾಗಿದ್ದು, ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಪ್ರತಿಪಾದಿಸಿದ್ದಾರೆ. ಹೀಗಾಗಿ ಪಕ್ಷದ ಹೈಕಮಾಂಡ್ ಅಂತಹ ಸಭೆಗಳ ಮೇಲೆ ನಿಗಾ ಇಡುವುದು ನಿಶ್ಚಿತವಾಗಿದೆ.

ಮೂಲಗಳ ಪ್ರಕಾರ, ಶಿವಕುಮಾರ್ ಕೂಡ ಗಣನೀಯ ಸಂಖ್ಯೆಯ ಶಾಸಕರ ಬೆಂಬಲವನ್ನು ಹೊಂದಿದ್ದಾರೆ. ಹಳೇ ಮೈಸೂರು ಪ್ರದೇಶದಲ್ಲಿ ಮಳವಳ್ಳಿ ಶಾಸಕ ನರೇಂದ್ರಸ್ವಾಮಿಯಂತಹ ಕೆಲವು ಎಸ್‌ಸಿ/ಎಸ್‌ಟಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯೋಜನೆ ಶಿವಕುಮಾರ್ ಅವರದ್ದಾಗಿದೆ.

ಮಂತ್ರಿಯಾಗುವ ಕನಸನ್ನು ಪೋಷಿಸುತ್ತಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ​​ಮುನಿಯಪ್ಪ, ಶಿವಕುಮಾರ್ ಅವರ ಒಳ್ಳೆಯ ಹೆಸರು ಗಳಿಸಿದ್ದಾರೆ ಎಂದು ಹೇಳಿದ್ದಾರೆ. ಆನೇಕಲ್ ಶಾಸಕ ಶಿವಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್ ಮತ್ತು ಇತರರು ಶಿವಕುಮಾರ್ ಪಾಳಯದೊಂದಿಗೆ ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದಂತೆ, ಎಸ್‌ಸಿ/ಎಸ್‌ಟಿ ಶಾಸಕರನ್ನು ಮನವೊಲಿಸಲ ಬಯಸಿದ್ದ ಪರಮೇಶ್ವರ ಅವರಿಗೆ ಅವರ ಈ ಮಾಸ್ಟರ್‌ಸ್ಟ್ರೋಕ್ ನಿಂದ ಹಿನ್ನಡೆಯಾಯಿತು.

Siddaramaiah, dk Shivakumar and parameshwar
ರಾಜಕೀಯದಲ್ಲಿ ಏಳು-ಬೀಳು ಸಹಜ, ಡಿನ್ನರ್ ಮೀಟಿಂಗ್ ಬಗ್ಗೆ ಬೇರೆಯವರು ಆತಂಕ ಪಡುವುದೇಕೆ?: ಸತೀಶ್ ಜಾರಕಿಹೊಳಿ

ಪಕ್ಷದ ಹೈಕಮಾಂಡ್ ಡಿ.ಕೆ ಶಿವಕುಮಾರ್ ಸಂಘಟನಾ ಕೌಶಲ್ಯವನ್ನು ಅರಿತುಕೊಂಡಿದ್ದಾರೆ, ಅದಕ್ಕಾಗಿಯೇ ದೆಹಲಿ ಚುನಾವಣೆಗೆ ಮುನ್ನ ಮಹಿಳೆಯರಿಗೆ ‘ಪ್ಯಾರಿ ದೀದಿ’ ಭರವಸೆಯನ್ನು ಘೋಷಿಸಲು ಶಿವಕುಮಾರ್ ಅವರನ್ನು ನೇಮಿಸಲಾಯಿತು. ಹೀಗಾಗಿ ಅವರು ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಯಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಆದರೆ ಕಾಂಗ್ರೆಸ್‌ನೊಳಗಿನ ಘಟನೆಗಳು ಸಿದ್ದರಾಮಯ್ಯ ಅವರ 30 ತಿಂಗಳ ಅಧಿಕಾರಾವಧಿಯ ನಂತರ ಗದ್ದಲದ ಬದಲಾವಣೆಯ ಸೂಚನೆ ನೀಡಿದೆ. ಸಿದ್ದರಾಮಯ್ಯ ಬಣವು ಅಂತಹ ಭೋಜನಕೂಟಗಳನ್ನು ಆಯೋಜಿಸುವ ಮೂಲಕ ತನ್ನ ಅಧಿಕಾರ ಹಂಚಿಕೆ ಚೌಕಾಸಿ ಮಾಡಲು ಬಯಸುತ್ತದೆ. ಸಿದ್ದರಾಮಯ್ಯ ಕ್ಯಾಂಪ್ ದಲಿತ ಮುಖ್ಯಮಂತ್ರಿಗಾಗಿಯೂ ಧ್ವನಿ ಎತ್ತುತ್ತದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com