ಕೆಪಿಸಿಸಿ ಅಧ್ಯಕ್ಷರ ನೇಮಿಸಿ, ಚುನಾವಣೆ ವೇಳೆಗೆ ಪಕ್ಷದ ಪ್ರತಿಷ್ಠೆಗೆ ಧಕ್ಕೆಯಾಗದಂತೆ ತಡೆಯಿರಿ: ಹೈಕಮಾಂಡ್'ಗೆ 'ಕೈ' ಪಡೆ ಆಗ್ರಹ

ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಸಚಿವ ಸಂಪುಟ ಪುನಾರಚನೆ ಎಂಬ ಮೂರು ವಿಷಯಗಳ ಕುರಿತು ಪಕ್ಷದಲ್ಲಿ ಗೊಂದಲಗಳು ಶುರುವಾಗಿರುವುದು ನಿಜ. ಹೈಕಮಾಂಡ್ ಆದಷ್ಟು ಬೇಗ ಈ ಸಮಸ್ಯೆಗಳನ್ನು ಬಗೆಹರಿಸಬೇಕು.
ಕೆಪಿಸಿಸಿ ಅಧ್ಯಕ್ಷರ ನೇಮಿಸಿ, ಚುನಾವಣೆ ವೇಳೆಗೆ ಪಕ್ಷದ ಪ್ರತಿಷ್ಠೆಗೆ ಧಕ್ಕೆಯಾಗದಂತೆ ತಡೆಯಿರಿ: ಹೈಕಮಾಂಡ್'ಗೆ 'ಕೈ' ಪಡೆ ಆಗ್ರಹ
Updated on

ಮೈಸೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಪೂರ್ಣಪ್ರಮಾಣದ ಕೆಪಿಸಿಸಿ ಅಧ್ಯಕ್ಷರ ನೇಮಿಸಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆಗೆ ಪಕ್ಷದ ಪ್ರತಿಷ್ಠೆಗೆ ಧಕ್ಕೆಯಾಗದಂತೆ ತಡೆಯಬೇಕೆಂದು ಹೈಕಮಾಂಡ್'ಗೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ತನ್ವೀರ್ ಸೇಠ್ ಅವರು ಮಾತನಾಡಿ, ಪಕ್ಷದ ಹೈಕಮಾಂಡ್ ಈ ಕುರಿತ ಗೊಂದಲಗಳಿಗೆ ಶೀಘ್ರಗತಿಯಲ್ಲಿ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು.

ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಸಚಿವ ಸಂಪುಟ ಪುನಾರಚನೆ ಎಂಬ ಮೂರು ವಿಷಯಗಳ ಕುರಿತು ಪಕ್ಷದಲ್ಲಿ ಗೊಂದಲಗಳು ಶುರುವಾಗಿರುವುದು ನಿಜ. ಹೈಕಮಾಂಡ್ ಆದಷ್ಟು ಬೇಗ ಈ ಸಮಸ್ಯೆಗಳನ್ನು ಬಗೆಹರಿಸಬೇಕು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಈ ವಿಚಾರಗಳನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದು, ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕು ಎಂಬುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಜಾರಕಿಹೊಳಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿಸಿದಾಗ ಶಾಸಕರ ಅಭಿಪ್ರಾಯ ಕೇಳಿರಲಿಲ್ಲ, ಕೆಪಿಸಿಸಿ ಅಧ್ಯಕ್ಷರ ನೇಮಕದ ವಿಚಾರದಲ್ಲೂ ಅದೇ ರೀತಿ ತೀರ್ಮಾನ ಆಗಬೇಕು.ಹೈಕಮಾಂಡ್ ಆಯ್ಕೆ ಮಾಡುವ ನಾಯಕನನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಪಕ್ಷದಿಂದ ಸರ್ಕಾರವಿದೆ, ಚುನಾವಣೆಯ ಸಮಯದಲ್ಲಿ ಪಕ್ಷವು ಜನರಿಗೆ ಕೊಟ್ಟ ಭರವಸೆಗಳನ್ನು ಸರ್ಕಾರ ಈಡೇರಿಸಬೇಕಿದೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಇಲ್ಲ. ಅಂತಹ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ಇಲ್ಲ ನನಗಿಲ್ಲ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರ ನೇಮಿಸಿ, ಚುನಾವಣೆ ವೇಳೆಗೆ ಪಕ್ಷದ ಪ್ರತಿಷ್ಠೆಗೆ ಧಕ್ಕೆಯಾಗದಂತೆ ತಡೆಯಿರಿ: ಹೈಕಮಾಂಡ್'ಗೆ 'ಕೈ' ಪಡೆ ಆಗ್ರಹ
2023ರಲ್ಲಿ ಇದ್ದ Speed ಕಡಿಮೆಯಾಗಿದೆ; KPCC ಗೆ ಪೂರ್ಣಪ್ರಮಾಣದ, ವರ್ಚಸ್ಸು ಇರುವ ಹೊಸ ಅಧ್ಯಕ್ಷರು ಬೇಕು: ಸತೀಶ್ ಜಾರಕಿಹೊಳಿ

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಅಧಿಕಾರದ ಪೈಪೋಟಿ ಇಲ್ಲ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು. “ಸರ್ಕಾರವು ಸ್ಥಿರವಾಗಿದ್ದು, ಅಧಿಕಾರಾವಧಿಯ್ನು ಪೂರ್ಣಗೊಳಿಸುತ್ತದೆ ಎಂದು ಹೇಳಿದರು.ಟ

ಸಿದ್ದರಾಮಯ್ಯ ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು, ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿಲ್ಲ. ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ವಿರೋಧ ಪಕ್ಷಗಳು ಹೇಳಿಕೊಳ್ಳುವಂತೆ ಸಿಎಂ ಕುರ್ಚಿ ಖಾಲಿ ಇಲ್ಲ, ಅಲುಗಾಡುತ್ತಲೂ ಇಲ್ಲ. ಸಿಎಂ ಸ್ಥಾನಕ್ಕೆ ಪೈಪೋಟಿ ಇಲ್ಲ. ಸಿಎಂ ಕುರ್ಚಿಯೇ ಖಾಲಿ ಇಲ್ಲದಿರುವಾಗ ಆಕಾಂಕ್ಷಿಗಳ ಪಟ್ಟಿಯ ಪ್ರಶ್ನೆಯೇ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸಿಎಂ ಸ್ಥಾನದ ಚರ್ಚೆ ಅಪ್ರಸ್ತುತ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com